ರೋಮ್: ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ವೈದ್ಯರನ್ನು ನಂಬಿಕೊಂಡು, ವೈದ್ಯರು ಕೊಟ್ಟ ಔಷಧಿಯನ್ನು ತೆಗೆದುಕೊಳ್ಳುತ್ತೇವೆ. ಆದರೆ ವೈದ್ಯರೇ ಎಡವಟ್ಟು ಮಾಡಿ ಜೀವಕ್ಕೆ ಅಪಾಯ ತಂದರೆ ಏನು ಮಾಡುವುದು? ವೈದ್ಯನೊಬ್ಬ ತಪ್ಪು ಮಾಡಿದ ಪರಿಣಾಮ ವ್ಯಕ್ತಿಯೊಬ್ಬ ಜೀವನವಿಡೀ ಪರದಾಟ ನಡೆಸಿದ ಪ್ರಕರಣ ಇಟಲಿಯಲ್ಲಿ ನಡೆದಿದೆ.
ವೃದ್ಧ ವ್ಯಕ್ತಿಯೊಬ್ಬ ಜನನಾಂಗದ ಅಂಗದಲ್ಲಿ ನೋವು ಕಾಣಿಸಿಕೊಂಡ ಕಾರಣ ಇಟಲಿಯ ಸ್ಯಾನ್ ಡೊನಾಟೊ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸುತ್ತಾರೆ. 30 ವರ್ಷದ ವೈದ್ಯ ವ್ಯಕ್ತಿಯನ್ನು ಪರೀಕ್ಷೆ ಮಾಡಿದ ಬಳಿಕ ನಿಮಗೆ ಕ್ಯಾನ್ಸರ್ ಗಡ್ಡೆಯಾಗಿದೆ ಅದನ್ನು ಆಪರೇಷನ್ ಮಾಡಿ ತೆಗೆಯಬೇಕೆಂದು ಹೇಳಿದ್ದಾರೆ.
ಇದಾದ ಒಂದು ತಿಂಗಳ ಬಳಿಕ 2018 ರ ನವೆಂಬರ್ 13 ರಂದು ವ್ಯಕ್ತಿಗೆ ಆಪರೇಷನ್ ಮೂಲಕ ಗಡ್ಡೆಯನ್ನು ತೆಗೆಯಲು ವೈದ್ಯರು ಸಿದ್ದರಾಗುತ್ತಾರೆ. ಖಾಸಗಿ ಅಂಗದಲ್ಲೇ ಗಡ್ಡೆಯಾಗಿದೆ ಎಂದು ವೈದ್ಯ ಖಾಸಗಿ ಅಂಗವನ್ನೇ ಆಪರೇಷನ್ ಮೂಲಕ ಕತ್ತರಿಸಿ ತೆಗೆಯುತ್ತಾರೆ.
ಆಪರೇಷನ್ ಆದ ಬಳಿಕ ವೃದ್ದನಿಗೆ ಇದ್ದ ಸಮಸ್ಯೆ ಕ್ಯಾನ್ಸರ್ ಅಲ್ಲ ಅದನ್ನು ಔಷಧಿಯಿಂದಲೇ (ಶಿಶ್ನದ ಚರ್ಮದ ಮೇಲೆ ಸಿಫಿಲಿಸ್ ಸಮಸ್ಯೆಯಿತ್ತು ) ಗುಣಪಡಿಸಬಹುದಿತ್ತು ಎನ್ನುವುದು ತಿಳಿಯುತ್ತದೆ. ವೈದ್ಯ ಕ್ಯಾನ್ಸರ್ ಗೆಡ್ಡಯೆಂದು ತಪ್ಪಾಗಿ ರೋಗವನ್ನು ಪತ್ತೆ ಮಾಡಿದ ಪರಿಣಾಮ ವೃದ್ಧ ಇದೀಗ ಸಮಸ್ಯೆಗೆ ಒಳಗಾಗಿದ್ದಾನೆ.
Related Articles
ತಪ್ಪು ಮಾಡಿದ ವೈದ್ಯ ಈಗ ತನಿಖೆಗೆ ಒಳಗಾಗಿದ್ದಾನೆ. ತನಗೆ ನ್ಯಾಯಬೇಕೆಂದು ವೃದ್ಧ ಕೋರ್ಟಿನ ಮೆಟ್ಟಿಲು ಹತ್ತಿದ್ದಾರೆ. ಈ ಪ್ರಕರಣದ ವಿಚಾರಣೆ ಮಾರ್ಚ್ 9 ರಂದು ನಡೆಯಲಿದೆ ಎಂದು ವರದಿ ತಿಳಿಸಿದೆ.