ಸಿಂದಗಿ: ಸರಕಾರ ಶಾಲೆಗಳಿಗೆ ಸೌಲಭ್ಯಗಳು ನೀಡುತ್ತಿದೆ. ಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡಿದರೆ ಗ್ರಾಮೀಣ ಮಟ್ಟದಲ್ಲಿ ಶಾಲೆಗಳು ಅಭಿವೃದ್ಧಿಗೆ ಸಹಕರಿಸಿದಂತೆ ಎಂದು ತಾಲೂಕಿನ ಬ್ಯಾಕೋಡ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯಗುರು ಎಸ್.ಎಸ್. ಮಾಣಸೂಣಗಿ ಹೇಳಿದರು.
ತಾಲೂಕಿನ ಬ್ಯಾಕೋಡ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಸ್ಥಳೀಯ ಗ್ರಾಪಂ ಸದಸ್ಯರು ಸೇರಿ ಶಾಲೆಗೆ ಕಂಫ್ಯೂಟರ್ ಖರೀದಿಗೆ 30 ಸಾವಿರ ರೂ. ದೇಣಿಗೆ ಪಡೆದು ಅವರು ಮಾತನಾಡಿದರು.
ಶಾಲೆಗೆ ಕಂಪ್ಯೂಟರ್ ಅಗತ್ಯವಿತ್ತು. ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ, ಪಠ್ಯ ಪುಸ್ತಕ ಬೇಡಿಕೆ, ವ್ಯಾಸಂಗ ಪ್ರಮಾಣ ಪತ್ರ ಮುಂತಾದ ದಾಖಲಾತಿಗಳನ್ನು ಎಸ್‌ಟಿಎಸ್ ತಂತ್ರಾಂಶದಲ್ಲಿ ದಾಖಲಿಸಲು ಕಂಪ್ಯೂಟರ್ ಅಗತ್ಯವಿದೆ. ಶಾಲೆಯ ಕಾರ್ಯಗಳನ್ನು ಮಾಡುವ ಜೊತೆಗೆ ಬಿಡುವಿನ ಸಮಯದಲ್ಲಿ ಮಕ್ಕಳಿಗೆ ಕಂಪ್ಯೂಟರ್ ಕಲಿಸಲು ಅನಕೂಲಕರವಾಗುತ್ತದೆ. ಶಾಲೆಯ ಅಭಿವೃದ್ಧಿ ಹಿತ ದೃಷ್ಟಿಯಿಂದ ನೀಡಿದ ದೇಣಿಗೆಯನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು. ದಾನಿಗಳಾದ ಗ್ರಾಪಂ ಸದಸ್ಯರಿಗೆ ಅಭಿನಂಧನೆಗಳನ್ನು ತಿಳಿಸಿ ನಿಮ್ಮ ಮಾರ್ಗದರ್ಶನ ಸದಾ ಇರಲಿ ಎಂದು ಹೇಳಿದರು.
ಗ್ರಾಪಂ ಸದಸ್ಯರಾದ ರಾಯಗೊಂಡಪ್ಪಗೌಡ ಬಿರಾದಾರ, ಸಂತೋಷ ಹಳಗೊಂಡ, ಶ್ರೀಶೈಲ ಗೌರ, ಭೀಮಣ್ಣ ಹವಳಗಿ, ಪರಶುರಾಮ ದೊಡಮನಿ, ಕೃಷ್ಣಾ ಬಡಿಗೇರ ಸೇರಿ ಶಾಲೆಗೆ ಕಂಪ್ಯೂಟರ್ ಖರೀದಿಗೆ 30 ಸಾವಿರ ರೂ. ದೇಣಿಗೆ ನೀಡಿದರು. ಶಿಕ್ಷಕರಾದ ಎಸ್.ಎಂ. ಪತ್ತಾರ, ಎಸ್ .ಬಿ. ದೊಡಮನಿ, ಎಸ್.ಎಂ. ಹಿಪ್ಪರಗಿ, ಕುಶಾ ಚವ್ಹಾಣ, ಶಿಕ್ಷಕಿಯರಾದ ಎಸ್. ಆರ್. ಹಿರೇಮಠ, ರೆಹನಾಬೆಗಂ, ಎಂ.ಎಸ್. ಬಿರಾದಾರ, ಜೆ.ಬಿ. ಭಾಸಗಿ, ಜೆ.ಎಂ. ಕನ್ನೊಳ್ಳಿ, ಯು.ಬಿ. ಭಾಗವಾನ ಹಾಗೂ ವಿದ್ಯಾರ್ಥಿಗಳು ಇದ್ದರು.