Advertisement
ಬೋಧನ ಶುಲ್ಕದ ಬಿಟ್ಟು ಇತರ ಯಾವುದೇ ಶುಲ್ಕ ಪಡೆಯುವಂತಿಲ್ಲ ಇದರಲ್ಲೇ ಕ್ರೀಡಾ, ಪ್ರಯೋಗಾಲಯ, ಗ್ರಂಥಾಲಯ ಶುಲ್ಕ ಸೇರಿ ರುತ್ತದೆ. ಅಭಿವೃದ್ಧಿ ಶುಲ್ಕ, ದೇಣಿಗೆ, ಅವಧಿ ಶುಲ್ಕ ಪಡೆಯುವಂತಿಲ್ಲ. ಪ್ರವಾಸ, ಈಜುಕೊಳ, ಕರಾಟೆ, ಸಮವಸ್ತ್ರ, ಸಾರಿಗೆ ಶುಲ್ಕ ಪಡೆಯುವಂತಿಲ್ಲ ಎಂದು ರಾಜ್ಯ ಸರಕಾರ ಫೆ. 29ರಂದು ಆದೇಶಿಸಿತ್ತು.
Related Articles
Advertisement
ಸರಕಾರ ಅವೈಜ್ಞಾನಿಕವಾಗಿ ಶುಲ್ಕ ಕಡಿತ ಮಾಡಿದೆ. ಬೇರೆ ಬೇರೆ ವಿಭಾಗಗಳಲ್ಲಿ ಕಡಿತ ಮಾಡಿರು ವುದರಿಂದ ಶೇ. 50ರಿಂದ 55ರಷ್ಟು ಕಡಿತ ಆದಂತಾಗುತ್ತದೆ. ಇದನ್ನು ಪರಿಷ್ಕರಿಸಬೇಕು ಎಂಬ ಆಗ್ರಹವನ್ನು ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದ ಮುಂದಿರಿಸಿವೆ.
ಮಕ್ಕಳ ಭವಿಷ್ಯದ ವಿಚಾರ :
ಶೈಕ್ಷಣಿಕ ವರ್ಷದ ಬಗ್ಗೆ ಪೋಷಕರಲ್ಲಿ ಇನ್ನೂ ಗೊಂದಲಗಳಿವೆ. ಈ ನಡುವೆ ಸರಕಾರ ಶುಲ್ಕ ಕಡಿತದ ಭರವಸೆ ನೀಡಿ ಖಾಸಗಿ ಲಾಬಿ ನೆಪದಿಂದ ಶುಲ್ಕ ಕಡಿತಕ್ಕೆ ಹಿಂದೇಟು ಹಾಕುತ್ತಿರುವುದರಿಂದ ಸಹಜ ವಾಗಿಯೇ ವಿದ್ಯಾರ್ಥಿಗಳ ಪೋಷಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಕ್ಕಳ ಭವಿಷ್ಯದ ಕುರಿತು ಆತಂಕ ಕ್ಕೀಡಾಗಿದ್ದಾರೆ.
ವಿನಾ ಕಾರಣ ಗೊಂದಲ :
ಒಂದೆಡೆ ವಿದ್ಯಾರ್ಥಿಗಳ ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಆತಂಕಿತರಾಗಿರುವ ನಡುವೆಯೇ ಸರಕಾರವು ಆದೇಶ ನೀಡಿ ಅದನ್ನು ಜಾರಿಗೊಳಿಸದಿರುವುದರಿಂದ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಇದೇ ವಿಚಾರಕ್ಕೆ ಜಗಳ ನಡೆಯುತ್ತಿರುತ್ತವೆ. ಸರಕಾರದ ಆದೇಶ ತಲುಪಿಲ್ಲ ಎಂದು ಶಾಲೆಗಳು ತಿಳಿಸಿದರೆ, ಆದೇಶ ಬರದಿರಲು ಅಸಾಧ್ಯ ಎಂದು ಪೋಷಕರು ಹೇಳುತ್ತಾರೆ. ಆದೇಶ ನೀಡುವ ಮೊದಲೇ ಅದರ ಬಗ್ಗೆ ಪರಮಾರ್ಶೆ ನಡೆಸಿ ಆದೇಶ ಹೊರಡಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ.
ಶಾಲೆಗಳಲ್ಲಿ ಶೇ. 30ರಷ್ಟು ಶುಲ್ಕ ಕಡಿತ ಆದೇಶವನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾಡ ಲಾಗಿದೆ. ಆದರೆ ಕೆಲವೊಂದು ಸಂಘಟನೆಗಳು ಇದನ್ನು ವಿರೋಧಿಸುತ್ತಿವೆ. ಈ ಆದೇಶದ ಬಗ್ಗೆ ಶೀಘ್ರ ಮತ್ತೂಮ್ಮೆ ಸುತ್ತೋಲೆ ಹೊರಡಿಸಲಾಗು ವುದು. ಸ್ಪಷ್ಟವಾಗಿ ಜಾರಿಯಾದಲ್ಲಿ ಈಗಾಗಲೇ ತೆಗೆದುಕೊಂಡಿ ರುವ ಮೊತ್ತವನ್ನು ಹಿಂದಿರುಗಿಸಲು ಕ್ರಮ ತೆಗೆದುಕೊಳ್ಳಲಾಗುವುದು.– ಸುರೇಶ್ ಕುಮಾರ್, ಶಿಕ್ಷಣ ಸಚಿವರು