Advertisement
ದೇವಸ್ಥಾನದ ಬಳಿ ಇರುವ ವೈಕುಂಠಂ ಕಾಂಪ್ಲೆಕ್ಸ್‌ನಿಂದ ಜನರು ಕಿ.ಮೀ.ಗಟ್ಟಲೆ ದೂರ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಶನಿವಾರ ದೇಗುಲಕ್ಕೆ ಬಂದವರು ಬರೋಬ್ಬರಿ 30 ತಾಸು ಸರತಿಯಲ್ಲಿ ಕಾದು ದರ್ಶನ ಪಡೆದರು. 10 ದಿನಗಳಲ್ಲಿ ತಿರುಪತಿ ದೇವಸ್ಥಾನಕ್ಕೆ ಬರೋಬ್ಬರಿ 2.6 ಲಕ್ಷ ಮಂದಿ ಕಾಲ್ನಡಿಗೆಯಲ್ಲಿ ಪ್ರಯಾಣಿಸಿದ್ದಾರೆ. ಅಲ್ಲದೆ ವಿಐಪಿ ಗಳಿಗಾಗಿ ವಿಶೇಷ ದರ್ಶನ ವ್ಯವಸ್ಥೆ ಮಾಡಿದ್ದ ಕಾರಣ ಜನರು ಕಾಯು ವಂತಾಗಿದೆ.
ಉಚಿತ ಆಹಾರ ವ್ಯವಸ್ಥೆ
ಸರತಿಯಲ್ಲಿ ನಿಂತಿರುವವರಿಗೆ ತಿರುಪತಿ ದೇಗುಲದ ವತಿಯಿಂದ ಉಚಿತ ಆಹಾರದ ವ್ಯವಸ್ಥೆ ಯನ್ನು ಮಾಡಿದೆ. ಇದ ಕ್ಕಾಗಿ ನಾಲ್ಕು ಕಡೆ ವಿಶೇಷ ಪಾಯಿಂಟ್‌ಗಳನ್ನು ತೆರೆಯ ಲಾಗಿದ್ದು, ಅಲ್ಲಿಂದ ಸಾಲಿನಲ್ಲಿ ನಿಂತಿರುವವರಿಗೆ ಊಟ ಒದಗಿಸಲಾಗುತ್ತಿದೆ. 27 ಕಡೆ ಕುಡಿಯುವ ನೀರಿನ ಪಾಯಿಂಟ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ದೇವರ ದರ್ಶನಕ್ಕಾಗಿ ಬರುವ ಭಕ್ತರಿಗೆ ತೊಂದರೆಯಾಗದ ರೀತಿಯಲ್ಲಿ ಸಕಲ ಸೌಲಭ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಟಿಟಿಡಿ ತಿಳಿಸಿದೆ.