Advertisement

ನಿಫಾ ಮಣಿಪಾಲ ಕೆಎಂಸಿಯಲ್ಲಿ ಪ್ರತಿದಿನ 30ರಷ್ಟು ಮಂದಿಯ ತಪಾಸಣೆ

02:53 PM Jun 02, 2018 | Team Udayavani |

ಉಡುಪಿ: ನಿಫಾ ವೈರಸ್‌ ಸೋಂಕನ್ನು ನಿಯಂತ್ರಿಸಲು ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೇರಳದಿಂದ ಬರುವ ಎಲ್ಲ ರೋಗಿಗಳನ್ನು ವಿಶೇಷ ತಪಾಸಣೆಗೊಳಪಡಿಸಲಾಗುತ್ತಿದೆ.

Advertisement

ಮೇ 26ರಿಂದ ಪ್ರತಿದಿನ 25ರಿಂದ 30 ಮಂದಿಯನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಸ್ಕ್ರೀನಿಂಗ್‌ ಸೆಂಟರ್‌ ಮತ್ತು ಹೆಲ್ಪ್ಡೆಸ್ಕ್ಗಳಲ್ಲಿ ಪ್ರತ್ಯೇಕ ತಜ್ಞ ವೈದ್ಯರು, ಸಿಬಂದಿಯನ್ನು ನಿಯೋಜಿಸಲಾಗಿದ್ದು, ಇವರು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಾರೆ. ಅನಂತರ ಟ್ರೋಮಾ ಸೆಂಟರ್‌ನಲ್ಲಿ 24 ಗಂಟೆಗಳ ಕಾಲ ಕೂಡ ತಪಾಸಣೆ ನಡೆಸಲಾಗುತ್ತಿದೆ. ಯಾವುದೇ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಕೆಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next