ಚೆನ್ನೈ : ಚಲಿಸುತ್ತಿರುವ ರೈಲಿನಲ್ಲಿ ಮೂವರು ಯುವಕರು ಕೈಯಲ್ಲಿ ಹರಿತವಾದ ಆಯುಧಗಳನ್ನು ಹಿಡಿದುಕೊಂಡು ದುಸ್ಸಾಹಸ ಪ್ರದರ್ಶಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಈ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ 3 ಯುವಕರನ್ನು ಬಂಧಿಸಲಾಗಿದೆ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ ಎಂದು ಚೆನ್ನೈ, ದಕ್ಷಿಣ ರೈಲ್ವೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಆಸ್ಕರ್ ಗೆ ನಾಮಿನೇಟ್ ಆದ ʼಛೆಲ್ಲೋ ಶೋʼ ಚಿತ್ರದ ಬಾಲನಟ ಕ್ಯಾನ್ಸರ್ ನಿಂದ ನಿಧನ
ಬಂಧಿತರು ಗುಮ್ಮಿಡಿಪೂಂಡಿಯ ಅನ್ಬರಸು, ರವಿಚಂದ್ರನ್ ಮತ್ತು ಪೊನ್ನೇರಿಯ ಅರುಲ್ ಎನ್ನುವವರಾಗಿದ್ದು, ಮೂವರೂ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.