Advertisement

ಸ್ಕೂಬಾ ಡೈವಿಂಗ್‌ ವೇಳೆ ಮಾನಹಾನಿ ರೀತಿಯಲ್ಲಿ ವರ್ತಿಸಿದ ಆರೋಪಿಗೆ 3 ವರ್ಷ ಜೈಲು

10:01 PM Jul 21, 2023 | Team Udayavani |

ಮಲ್ಪೆ: ಮಲ್ಪೆ ಸಮೀಪದ ಅರಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್‌ ತರಬೇತಿ ನೀಡುತ್ತಿರುವ ವೇಳೆ ಮಾನಹಾನಿಯಾಗುವಂತೆ ವರ್ತಿಸಿದ ಆರೋಪಿ ಉತ್ತರಾಖಂಡ್‌ನ‌ ವ್ಯಕ್ತಿ ತೇಜಪಾಲ್‌ ಸಿಂಗ್‌ ರಾವತ್‌ನಿಗೆ ಹೆಚ್ಚುವರಿ ಸಿ.ಜೆ. ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು 3 ವರ್ಷ ಜೈಲು ಶಿಕ್ಷೆ ಮತ್ತು 13 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Advertisement

2014ರ ಡಿಸೆಂಬರ್‌ 24ರಂದು ಡಾ| ಅಶ್ವಿ‌ನ್‌ ಕುಮಾರ್‌ ಅವರ ಪುತ್ರಿಗೆ ಸ್ಕೂಬಾ ಡೈವಿಂಗ್‌ ತರಬೇತಿಯನ್ನು ನೀಡುತ್ತಿರುವ ವೇಳೆ ಆಕೆಯ ಮಾನಹಾನಿ ಆಗುವಂತಹ ರೀತಿಯಲ್ಲಿ ಆತ ವರ್ತಿಸಿದ್ದ ಎಂದು ಆರೋಪಿಸಲಾಗಿತ್ತು. ನಾನು ಈ ಹಿಂದೆ ಅನೇಕ ಹುಡುಗಿಯರ ಜತೆಯಲ್ಲಿ ಅಂಡರ್‌ ವಾಟರ್‌ ಸೆಕ್ಸ್‌ ಮಾಡಿದ್ದೇನೆ ಎಂದೆಲ್ಲ ರಾವತ್‌ ಆಕೆಯ ಬಳಿ ಹೇಳಿದ್ದ. ಇದಕ್ಕೆ ಆಕೆ ಪ್ರತಿಭಟಿಸಿದಾಗ ಅತ ನಿನಗೆ ಅಂಡರ್‌ ವಾಟರ್‌ ಸೆಕ್ಸ್‌ ಬಗ್ಗೆ ಆಸಕ್ತಿ ಇಲ್ಲದಿದ್ದರೆ ಬೈಕ್‌ ರೈಡ್‌ ಹೋಗುವ ಎಂದು ಅಸಭ್ಯವಾಗಿ ವರ್ತಿಸಿದ್ದ. ಬಳಿಕ ನೀರಿನಿಂದ ಮೇಲೆ ಬಂದಾಗ ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಜೀವ ಬೆದರಿಕೆಯನ್ನು ಕೂಡ ಒಡ್ಡಿದ್ದ ಎಂದು ದೂರಲಾಗಿತ್ತು.

ಬಳಿಕ ಪ್ಯಾರಡೈಸ್‌ ಹೊಟೇಲಿನಲ್ಲಿ ಇರಿಸಿದ್ದ ಸ್ಕೂಬಾ ಡೈವಿಂಗ್‌ನ ಉಪಕರಣ, ಡೈವಿಂಗ್‌ ಹೋಗುವ ಮುನ್ನ ಭರ್ತಿ ಮಾಡುವ ಲಯಬಿಲಿಟಿ ಮತ್ತು ಮೆಡಿಕಲ್‌ ಫಾರಂ ಅನ್ನು ತೆಗೆದುಕೊಂಡು ಹೋಗಿದ್ದು, ಅದನ್ನು ತನಿಖೆಯ ವೇಳೆ ಹಾಜರುಪಡಿಸದೇ ಸಾಕ್ಷಿ ನಾಶ ಮಾಡಿರುವುದು ತನಿಖೆಯಿಂದ ಸಾಬೀತಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯ ನಿರೀಕ್ಷರಾಗಿದ್ದ ರವಿಕುಮಾರ್‌ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ಸರಕಾರದ ಪರ ಸಹಾಯಕ ಅಭಿಯೋಜಕಿ ಮೋಹಿನಿ ಕೆ. ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next