Advertisement
ಸೋಮವಾರ “ಉದಯವಾಣಿ’ ವತಿಯಿಂದ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ “ಕೊರೊನಾ ಮೂರನೆಯ ಅಲೆ ಮತ್ತು ಮಕ್ಕಳ ರಕ್ಷಣೆ’ ಕುರಿತ ವಿಷಯ ಕುರಿತು ಸಾರ್ವಜನಿಕರ ಕರೆಗಳಿಗೆ ಮಣಿಪಾಲ ಕೆಎಂಸಿ ಮಕ್ಕಳ ವಿಭಾಗ ಮುಖ್ಯಸ್ಥ ಡಾ| ಲೆಸ್ಲಿ ಎಡ್ವರ್ಡ್ ಲುವಿಸ್, ಅಜ್ಜರಕಾಡು ಜಿಲ್ಲಾಸ್ಪತ್ರೆ ಮಕ್ಕಳ ವಿಭಾಗ ಮುಖ್ಯಸ್ಥ ಡಾ| ವೇಣು ಗೋಪಾಲ್, ಜಿಲ್ಲಾ ಲಸಿಕಾಧಿಕಾರಿ ಡಾ| ಎಂ.ಜಿ. ರಾಮ ಉತ್ತರಿಸಿದರು.
Related Articles
ಮಳೆಗಾಲ ಬರುತ್ತಿದೆ. ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾ, ವಾಂತಿಬೇಧಿ, ಎಚ್1ಎನ್1 ಇತ್ಯಾದಿಗಳೂ ಬರುತ್ತವೆ. ಒಬ್ಬರಿಗೇ ಕೊರೊನಾದೊಂದಿಗೆ ಇನ್ನೊಂದು ಸೋಂಕೂ ಬರಬಹುದು. ಮಕ್ಕಳಿಗೆ ಉಸಿರಾಟದ ಸಮಸ್ಯೆ ಬಂದರೆ, ತಲೆನೋವು, ಸುಸ್ತು ಆಗಿದ್ದರೆ ಗಂಟಲ ದ್ರವ ಪರೀಕ್ಷಿಸಬೇಕು.
Advertisement
ತಲಾ 2,000 ಮಕ್ಕಳಿಗೆ ಸೋಂಕು2020ರ ಸಾಲಿನಲ್ಲಿ 0-15 ವರ್ಷದ ಸುಮಾರು 2,000 ಮಕ್ಕಳಿಗೆ ಸೋಂಕು ತಗಲಿದ್ದರೆ, 2021ರ 2 ತಿಂಗಳಲ್ಲಿ ಅಷ್ಟೇ ಸಂಖ್ಯೆಯ ಮಕ್ಕಳಿಗೆ ಸೋಂಕು ತಗಲಿದೆ. ಉಡುಪಿ ಜಿಲ್ಲೆಯ 2.25 ಲಕ್ಷ ಮಕ್ಕಳಲ್ಲಿ ಒಂದು ವರ್ಷದಲ್ಲಿ ಆದಷ್ಟೇ ಎರಡೇ ತಿಂಗಳಲ್ಲಿ ಶೇ. 1 ಮಕ್ಕಳಿಗೆ ಸೋಂಕು ತಗಲಿದೆ. ಹೋದ ವರ್ಷ 3-4 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದರೆ, ಈ ವರ್ಷ ಆರು ಮಕ್ಕಳು ವೆಂಟಿಲೇಟರ್ ವಾರ್ಡ್‌ಗೆ ದಾಖಲಾಗಿದ್ದರು. 15-18 ವರ್ಷದ ಸ್ಥೂಲ ಕಾಯದ ಮಕ್ಕಳು ಬರಬಹುದು. ಇವರನ್ನು ನಿರ್ವ ಹಿಸುವುದು ಸ್ವಲ್ಪ ಕಷ್ಟ ಎನ್ನುತ್ತಾರೆ ಮಣಿ ಪಾಲ ಕೆಎಂಸಿ ಮಕ್ಕಳ ವಿಭಾಗ ಮುಖ್ಯಸ್ಥ ರಾದ ಡಾ| ಲೆಸ್ಲಿ ಎಡ್ವರ್ಡ್ ಲುವಿಸ್. ಮಣಿಪಾಲ ಆಸ್ಪತ್ರೆಯಲ್ಲಿ 2020ರಲ್ಲಿ 87 ಗರ್ಭಿಣಿಯರಿಗೆ ಹೆರಿಗೆ ಆಗುವಾಗ ಪಾಸಿಟಿವ್ ಇತ್ತು. 11 ಮಕ್ಕಳಿಗೆ ಪಾಸಿಟಿವ್ ಬಂದಿತ್ತು. 2020ರಲ್ಲಿ 0-18 ವರ್ಷದ 26 ಮಕ್ಕಳಿಗೆ ಪಾಸಿಟಿವ್ ಬಂದಿತ್ತು. ಇದೇ ಎಪ್ರಿಲ್‌ನಿಂದ ಮೇ 11ರ ವರೆಗೆ 16 ಗರ್ಭಿಣಿ ಯರಿಗೆ ಹೆರಿಗೆಯಾಗುವಾಗ ಪಾಸಿಟಿವ್ ಇತ್ತು, ಎರಡು ಮಕ್ಕಳಿಗೆ ಪಾಸಿಟಿವ್ ಇತ್ತು. 18 ವರ್ಷಕ್ಕಿಂತ ಒಳಗಿನ ಏಳು ಮಕ್ಕಳಿಗೆ ಪಾಸಿಟಿವ್ ತಗಲಿದೆ ಎಂದರು. 1 ಮಗು = 4 ದೊಡ್ಡವರು
ದೊಡ್ಡವರಿಗೆ ಆರೋಗ್ಯ ಸಮಸ್ಯೆಯಾದರೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡುವುದಕ್ಕಿಂತ ಮಕ್ಕಳಿಗೆ ಚಿಕಿತ್ಸೆ ನೀಡುವುದು ಕಷ್ಟ. ಒಂದು ಮಗುವನ್ನು ಐಸಿಯುನಲ್ಲಿರಿ ಸುವುದು ನಾಲ್ಕು ಮಂದಿ ದೊಡ್ಡವರನ್ನು ಇರಿಸುವುದಕ್ಕೆ ಸಮ. ಕೇವಲ ಮಗು ವನ್ನು ಮಾತ್ರ ಐಸಿಯುನಲ್ಲಿರಿಸಲು ಆಗುವುದಿಲ್ಲ, ತಾಯಿಯೂ ಬೇಕಾಗುತ್ತದೆ. ಇವರಿಗೂ ರಿಸ್ಕ್ ಇರುತ್ತದೆ. 15 ದಿನಗಳಲ್ಲಿ ಲಸಿಕೆ ಪೂರೈಕೆ ನಿರೀಕ್ಷೆ
ಪ್ರಥಮ ಡೋಸ್ ತೆಗೆದುಕೊಳ್ಳುವವರಿಗೆ ಇನ್ನು 15 ದಿನಗಳಲ್ಲಿ ಲಸಿಕೆ ಪೂರೈಕೆ ಆಗುವ ಸಾಧ್ಯತೆ ಇದೆ ಎಂದು ಡಾ| ಎಂ.ಜಿ. ರಾಮ ಹೇಳಿದರು. ಮೊದಲ ಡೋಸ್ ಕೊವಿಶೀಲ್ಡ್ ಪಡೆದು 12 ವಾರ ಆದವರು ಯಾರೂ ಇಲ್ಲ. ಈ ಬಗ್ಗೆ ಪಟ್ಟಿ ಆರೋಗ್ಯ ಇಲಾಖೆಯಲ್ಲಿದ್ದು ಅಲ್ಲಿಂದ ಸಂದೇಶ ಬಂದ ಬಳಿಕ ಲಸಿಕಾ ಕೇಂದ್ರಕ್ಕೆ ತೆರಳಿ.ಕೊವ್ಯಾಕ್ಸಿನ್ ಪಡೆದು 6 ವಾರ ಅದವರಿಗೆ ಸೋಮವಾರ, ಮಂಗಳವಾರ ಸುಮಾರು 1,100 ಡೋಸ್ ಕೊಡಲಾಗುತ್ತಿದೆ. ಲಸಿಕೆ ಲಭ್ಯತೆಯ ಮಾಹಿತಿ ಆಶಾ ಕಾರ್ಯ ಕರ್ತೆಯರು ನೀಡುವರು ಎಂದರು. ಪ್ರಕಾಶ್ ಪಡಿಯಾರ್ ಮರವಂತೆ, ಧೇನು ಬಾಗಲಕೋಟೆ
– 3ನೇ ಅಲೆಗೆ ಸಿದ್ಧವಾಗುವುದು ಹೇಗೆ?
ಮೂರನೇ ಅಲೆ ಯಾವಾಗ ಬರುತ್ತದೆ ಎನ್ನುವುದು ಕಷ್ಟ. ಮನೆಯಲ್ಲಿ ಸ್ವತ್ಛತೆ ಮುಖ್ಯ. ಕೊರೊನಾ ಮಾರ್ಗಸೂಚಿ ಪಾಲನೆ ಜತೆಗೆ ಮನೆಯ ಹಿರಿಯರೆ ಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಮನೆಮಂದಿಯಲ್ಲಿ ಯಾರಿಗಾ ದರೂ ನೆಗಡಿ, ಕೆಮ್ಮು, ಜ್ವರ ಲಕ್ಷಣವಿದ್ದರೆ ಮಾಸ್ಕ್ ಧರಿಸಬೇಕು. ಬಿಸಿ ನೀರು ಸೇವಿಸಬೇಕು. ಬಳಸಿದ ಕರವಸ್ತ್ರಗಳನ್ನು ಇತರ ವಸ್ತ್ರಗಳ ಜತೆ ಸೇರಿಸಬಾರದು. ರೋಹಿಣಿ, ಉಡುಪಿ – 7 ವರ್ಷದ ಮಗುವಿನ ರೋಗ ನಿರೋಧಕ ಶಕ್ತಿ ವೃದ್ಧಿಗೆ ಉಪಾಯ?
-ಇಂಥ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಸಹಜವಾಗಿ ಇರುತ್ತದೆ. ತೂಕ ಚೆನ್ನಾಗಿರಬೇಕು. ಕಾಲಕಾಲಕ್ಕೆ ಹಾಕುವ ಲಸಿಕೆಯನ್ನು ತಪ್ಪದೆ ಹಾಕಿಸಿ ಕೊಂಡಿರಬೇಕು. ಹಣ್ಣುಹಂಪಲು, ಮೊಳಕೆ ಬರಿಸಿದ ಕಾಳುಗಳನ್ನು ಬೇಯಿಸಿ ಬೆಲ್ಲ ತುರಿದು ಸೇರಿಸಿ ಕೊಟ್ಟರೆ ಉತ್ತಮ. ಮನೆಯಲ್ಲೇ ಉತ್ತಮ ಆಹಾರ ತಯಾರಿಸಿ ನೀಡಬೇಕು. ಅಲರ್ಜಿಯಿಂದ ಶೀತ ಬರಬಹುದು. ಇದಕ್ಕಾಗಿ ಶುಚಿತ್ವ ಕಾಪಾಡಿ ಕೊಳ್ಳಬೇಕು. ತಣ್ಣೀರಿನಿಂದ ಸಮಸ್ಯೆಯಿಲ್ಲ. ಆದರೆ ಫ್ರಿಜ್‌ನಲ್ಲಿರಿಸಿದ ಅತೀ ತಣ್ಣೀರು ಒಳ್ಳೆಯದಲ್ಲ. ನೀಲ್,ಅಂಬಲಪಾಡಿ,ಸುಜಾತಾ ಕಲ್ಲಡ್ಕ, ಅನುರಾಧ, ಕುಂದಾಪುರ – ಕೊರೊನಾ ಮೂರನೇ ಅಲೆಯ ಪರಿಣಾಮ ಏನು?
ಮಕ್ಕಳಿಗೆ ಸಮಸ್ಯೆ ಕಂಡುಬರಬಹುದು. ಈ ಸೋಂಕು ಲಕ್ಷಣ ಕಂಡುಬಂದಾಗ ಜ್ವರ, ಕೆಮ್ಮು, ಉಸಿರಾಟ, ತಲೆ ನೋವು, ಸುಸ್ತು, ವಾಂತಿಭೇದಿಯಂತಹ ಲಕ್ಷಣ ಕಂಡುಬರಬಹುದು. ಈಗಿನಿಂದಲೇ ಎಚ್ಚರ ವಹಿಸಿ. ಕೊರೊನಾ ಸೋಂಕು ಇದ್ದವರು ಮಕ್ಕಳೊಂದಿಗೆ ಸಂಪರ್ಕ ಮಾಡಿದರೆ ಸೋಂಕು ತಗಲಬಹುದು. ಜಗನ್ನಾಥ, ಕುಕ್ಕಂದೂರು
– ಲಸಿಕೆ ಸ್ವೀಕರಿಸಿದ್ದು,ನಾಲಗೆ ರುಚಿ ಅಷ್ಟಿಲ್ಲ. ಸೋಂಕು ಲಕ್ಷಣವೇ?
-ಲಸಿಕೆ ಪಡೆದ ಕಾರಣ ಸೋಂಕಿನ ತೀವ್ರತೆ ಹೆಚ್ಚಳವಾಗುವ ಸಾಧ್ಯತೆ ಕಡಿಮೆ. ಸೋಂಕು ತಗಲಬಾರದೆಂದಿಲ್ಲ. ಸಂಶಯವಿದ್ದರೆ ಒಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಿ. ಸ್ವಂತ ಔಷಧ ಮಾಡಬೇಡಿ. ಮನೆಯವರೊಂದಿಗೆ ಮಾಸ್ಕ್ ಧರಿಸಿ ವ್ಯವಹರಿಸಿ. ಚಿದಾನಂದ, ಬೆಳ್ಳೆ
– ಪತ್ನಿ ಗರ್ಭಿಣಿ. ಅವರ ಮನೆಯ ಯಾರಿಗೂ ಸೋಂಕಿರಲಿಲ್ಲ. ಈಗ ಅವಳ ವರದಿ ಪಾಸಿಟಿವ್ ಬಂದಿದೆ, ಇದು ಹೇಗೆ?
-ಗರ್ಭಿಣಿಯರು ರೋಗಲಕ್ಷಣ ಇಲ್ಲದಿದ್ದರೂ ಪರೀಕ್ಷೆ ಮಾಡಿಸಿಕೊಳ್ಳ ಬೇಕು. ಹೆರಿಗೆ ಸಂದರ್ಭ ವೈದ್ಯರು, ತಾಯಿ ಜಾಗರೂಕತೆ ವಹಿಸಬೇಕು. ಹೆರಿಗೆ ಆದ ದಿನದಿಂದ 10 ದಿನ ಪತ್ನಿಗೆ ಮಾಸ್ಕ್ ಧರಿಸುವಂತೆಸೂಚಿಸಬೇಕು. ಮೊಹಮ್ಮದ್, ವೇಣೂರು
– ಮೂರನೇ ಅಲೆ ಗಾಳಿಯಿಂದ ಹರಡುವ ಸಾಧ್ಯತೆ ಇದೆಯಾ?
-ಈ ವೈರಸ್ ಗಾಳಿಯಿಂದಲೂ ಹರಡುತ್ತದೆ. ಆಸ್ಪತ್ರೆಗಳಲ್ಲಿ ಹಿರಿಯರಿಗೆ ಇರುವಷ್ಟು ವ್ಯವಸ್ಥೆ ಮಕ್ಕಳಿಗಿಲ್ಲ. ಐಸಿಯು ಬೆಡ್‌ಗಳ ಸಂಖ್ಯೆ ಕಡಿಮೆ ಇದೆ. ಅದು ಸುಧಾರಣೆಯಾಗಬೇಕು. ಸುಬ್ರಹ್ಮಣ್ಯ ಹೆಬ್ರಿ, ಪ್ರಭಾಕರ ಕೊರಂಗ್ರಪಾಡಿ ಬೈಲೂರು
– ಮೂರನೆ ಅಲೆ ತಡೆಯಲು ಮಕ್ಕಳಿಗೆ ಲಸಿಕೆ ಇದೆಯಾ?
12ರಿಂದ 15 ವರ್ಷದ ಮಕ್ಕಳಿಗೆ ಯುಎಸ್‌ಎ ಸಹಿತ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ನಮ್ಮಲ್ಲಿನ್ನೂ ಅಧ್ಯಯನ ನಡೆಯುತ್ತಿದ್ದು, 2-3 ತಿಂಗಳಲ್ಲಿ ಈ ಬಗ್ಗೆ ಸೂಚನೆ ಬರಬಹುದು. ಸುಮಂಗಲಾ, ಉಡುಪಿ
– ಮಕ್ಕಳಿಗೆ ಜ್ವರ ಬಂದ ತತ್‌ಕ್ಷಣ ವೈದ್ಯರಲ್ಲಿಗೆ ಹೋಗಬೇಕಾ?
-ಮನೆಯಲ್ಲಿ ಅಥವಾ ಆಸುಪಾಸಿನ ಮನೆಯವರಿಗೆ ಯಾರಿಗೂ ಕೊರೊನಾ ರೋಗಲಕ್ಷಣ ಇಲ್ಲದಿದ್ದರೆ ಆಸ್ಪತ್ರೆಗೆ ತೆರಳಬೇಕಿಲ್ಲ. ಮಗುವಿಗೆ ಮೈಕೈ ನೋವು, ಆಹಾರಸೇವನೆ ಮಾಡದಿದ್ದರೆ, ಆಸಕ್ತಿ ಇಲ್ಲದೆ ಮಲಗಿದರೆ ಪರೀಕ್ಷೆ ಮಾಡಿಸಬೇಕು. ಮಹೇಶ್ ಸಜ್ಜನ್, ಬೀದರ್, ಗೋಪಿನಾಥ ಪ್ರಭು, ಉಡುಪಿ
– ಬ್ಲ್ಯಾಕ್ ಫಂಗಸ್, ಕೊರೊನಾ ಕ್ಕೆ ಮುನ್ನೆಚ್ಚರಿಕೆ ಎನು?
ಕೊರೊನಾ ಪೀಡಿತ ವಯಸ್ಕರಲ್ಲಿ, ಸ್ಟಿರಾಯ್ಡ ತೆಗೆದುಕೊಂಡವರಲ್ಲಿ, ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊ ಳ್ಳುವ ಸಾಧ್ಯತೆ ಇದೆ. ಕೊರೊನಾ ಲಕ್ಷಣ ಇದ್ದರೆ ಚಿಕಿತ್ಸೆ ಪಡೆದುಕೊಳ್ಳಬೇಕು. ಪ್ರಥಮ ಹಂತದ ಚಿಕಿತ್ಸೆ ನೀಡಿ 48 ಗಂಟೆ ಮನೆಯಲ್ಲಿರುವುದು ಉತ್ತಮ. ಸುಲೈಮಾನ್, ಮಟಪಾಡಿ
– ನನಗೆ 75 ವರ್ಷ. ಹೆಂಡತಿಯೊಂದಿಗೆ ವಾಸವಾಗಿದ್ದೇನೆ. ಎರಡೂ ಡೋಸ್ ಲಸಿಕೆ ಪಡೆದಿರುವೆ. ಮನೆಪಕ್ಕದವರಿಗೆ ಸೋಂಕಿದೆ. ನಾವು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು?
-ಪಕ್ಕದ ಮನೆಯವರ ಸಂಪರ್ಕ ನಿಲ್ಲಿಸಬೇಕು. ಅನಿವಾರ್ಯವಾದರೆ ಮಾಸ್ಕ್ ಧರಿಸಿ. ಮನೆಯೊಳಗೆ ಸೋಂಕಿತರು ಇಲ್ಲದಿದ್ದರೆ ಮಾಸ್ಕ್ ಧರಿಸಬೇಕಿಲ್ಲ. ಸಾಮಾಜಿಕ ಅಂತರ ಪಾಲಿಸಿ. ಲಸಿಕೆ ಪಡೆದಿರುವ ಕಾರಣ ಸಮಸ್ಯೆ ಇಲ್ಲ. ದೀಪ್ತಿ, ಮೂಲ್ಕಿ
– 5 ವರ್ಷದ ಒಳಗಿನ ಮಕ್ಕಳಲ್ಲಿ ಜ್ವರ, ಉಸಿರಾಟದ ಸಮಸ್ಯೆ ಕಂಡು ಬಂದರೆ ಪ್ರಥಮ ಚಿಕಿತ್ಸೆಯಾಗಿ ಏನು ಮಾಡಬೇಕು?
-ಮಕ್ಕಳಲ್ಲಿ ಅಸ್ತಮದ ಸಮಸ್ಯೆಯಿದ್ದರೆ ವೈದ್ಯರು ಸೂಚಿಸಿರುವ ಔಷಧಗಳನ್ನು ತೆಗೆದುಕೊಳ್ಳಬೇಕು. ವೈದ್ಯರು ಸೂಚಿಸಿರುವ ಔಷಧ, ಜ್ವರದ ಮಾತ್ರೆ, ಕಷಾಯ ಸೇವನೆ ಉತ್ತಮ. ಎರಡು ದಿನದೊಳಗೆ ಕಡಿಮೆಯಾಗದಿದ್ದರೆ ವೈದ್ಯರನ್ನು ಭೇಟಿ ಮಾಡಬೇಕು. ಕೃಷ್ಣಭಟ್, ಮಂಗಳೂರು
– ಕೊರೊನಾ ಬಾರದಂತೆ ತಡೆಯುವುದು ಹೇಗೆ?
-ಇದಕ್ಕಾಗಿ ಮನೆಯಲ್ಲಿರುವ ಎಲ್ಲರೂ ಮೊದಲು ಲಸಿಕೆ ತೆಗೆದುಕೊಳ್ಳಬೇಕು. ಕೆಮ್ಮು, ಜ್ವರ ಇದ್ದರೆ ಮಾಸ್ಕ್ ಧರಿಸಬೇಕು. ಸ್ವತ್ಛತೆ, ಉತ್ತಮ ಆಹಾರ ಸೇವನೆ ಅಗತ್ಯ.