Advertisement
ಇನ್ನೊಂದೆಡೆ, ಅಮೆರಿಕದ ಎರಡು ಔಷಧೋದ್ಯಮ ಸಂಸ್ಥೆಗಳಾಗಿರುವ ಫೈಜರ್ ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯ ಲಸಿಕೆಗಳು ಕೂಡ ಡೆಲ್ಟಾ ರೂಪಾಂತರಿ ವಿರುದ್ಧ ಹೋರಾಡಲು ಶಕ್ತವಾಗಿವೆ. ಈ ಬಗ್ಗೆ ಅಧ್ಯಯನದಿಂದ ದೃಢಪಟ್ಟಿದೆ ಎಂದು ದಕ್ಷಿಣ ಆಫ್ರಿಕಾ ವೈದ್ಯಕೀಯ ಸಂಶೋಧನ ಮಂಡಳಿ ಅಧ್ಯಕ್ಷ ಪ್ರೊ| ಗ್ಲೆಂಡಾ ಗ್ರೇ ಹೇಳಿದ್ದಾರೆ. ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆ ಬೀಟಾ ರೂಪಾಂತರಿಗಿಂತ ಡೆಲ್ಟಾ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ ಎಂದಿದ್ದಾರೆ. ವಿಟ್ವಾಟರ್‌ಸ್ಯಾಂಡ್ ವಿವಿಯ ಪ್ರಾಧ್ಯಾಪಕ ಪ್ರೊ| ಪೆನ್ನಿ ಮೂರ್ “ದೇಶದಲ್ಲಿ ಬಳಕೆಯಾಗುತ್ತಿರುವ ಲಸಿಕೆಗಳು ಡೆಲ್ಟಾ ವಿರುದ್ಧ ಹೋರಾಡುತ್ತಿವೆ’ ಎಂದಿದ್ದಾರೆ.
ಹೊಸದಿಲ್ಲಿ: ಕೊರೊನಾ ಲಸಿಕೆ ಚುಚ್ಚುಮದ್ದನ್ನು ಸರಿಯಾದ ಕ್ರಮದಲ್ಲಿ ನೀಡದೇ ಹೋದರೂ ಲಸಿಕೆ ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವ ಸ್ಥಿತಿ ಉಂಟಾಗುತ್ತದೆ ಎಂಬ ಹೊಸ ವಿಚಾರವನ್ನು ಜರ್ಮನಿಯ ತಜ್ಞರು ಪತ್ತೆ ಹಚ್ಚಿದ್ದಾರೆ. ಮ್ಯೂನಿಚ್ ವಿಶ್ವವಿದ್ಯಾನಿಲಯದಲ್ಲಿ ಇಲಿಗಳ ಮೇಲೆ ಮಾಡಲಾಗಿರುವ ಪ್ರಯೋಗದಲ್ಲಿ ಇದು ಸಾಬೀತಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಲಸಿಕೆಯನ್ನು ಕೈ ತೋಳುಗಳ ಮಾಂಸಖಂಡಗಳಿಗೆ ನೀಡಬೇಕು. ಮಾಂಸಖಂಡಗಳೊಳಗೆ ಚುಚ್ಚುಮದ್ದಿನ ಸೂಜಿ ಹೋಗಿ ತಲುಪದಿದ್ದಾಗ ಅಥವಾ ರಕ್ತ ನಾಳಗಳಿಗೆ ಲಸಿಕೆ ನೀಡಿದಾಗ ಅಂಥವರಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಉಂಟಾಗುತ್ತದೆ. ಚುಚ್ಚುಮದ್ದು ನೀಡುವ ಬಗ್ಗೆ ಸರಿಯಾದ ತರಬೇತಿ ಹೊಂದಿರದ ಆರೋಗ್ಯ ಸಿಬ್ಬಂದಿಯಿಂದ ಮಾತ್ರ ಇಂಥ ಅವಘಡ ಸಂಭವಿಸುತ್ತವೆ ಎಂದು ತಜ್ಞರು ಹೇಳಿದ್ದಾರೆ.
Related Articles
Advertisement
ಬರಲಿದೆ ಇನ್ನೊಂದು ಭೀಕರ ವೈರಸ್: ಬಫೆಟ್ಜಗತ್ತಿಗೆ ಕೊರೊನಾ ಅಪಾಯ ಇನ್ನು ಮುಕ್ತಾಯ ವಾಗಿಲ್ಲ. ಅದಕ್ಕಿಂತ ಭೀಕರವಾಗಿರುವ ವೈರಸ್ ಅಪ್ಪಳಿಸಲಿದೆ ಎಂದು ಅಮೆರಿಕದ ಸಿರಿವಂತ ಉದ್ಯಮಿ, ಬರ್ಕ್‌ಶೈರ್ ಹ್ಯಾಥವೇ ಸಿಇಒ ವಾರೆನ್ ಬಫೆಟ್ ಎಚ್ಚರಿಕೆ ನೀಡಿದ್ದಾರೆ. “ಸಿಎನ್‌ಬಿಸಿ’ ಚಾನೆಲ್‌ಗೆ
ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಪಂಚದ ವ್ಯವಸ್ಥೆಗೆ ಸಾಧ್ಯವಿದೆ. ಆದರೆ ತಾವು ನಿರೀಕ್ಷಿಸಿದಂತೆ ಇರುವ ಅತ್ಯಂತ ಕಠಿನ ಪ್ರತಿಕೂಲ ಪರಿಸ್ಥಿತಿಗಳನ್ನು ನಿಭಾಯಿಸಲು ಸಾಧ್ಯವಿಲ್ಲದಂಥ ಸ್ಥಿತಿ ಎದುರಾಗ ಬಹುದು ಎಂದಿದ್ದಾರೆ. ಕೊರೊನಾದಿಂದ ಸಣ್ಣಸಣ್ಣ ಉದ್ಯಮಗಳು ನಲುಗಿಹೋಗಿವೆ. ಆದರೆ ಇಲ್ಲೂ ಅಸಾಮಾನ್ಯ ಪರಿಸ್ಥಿತಿಯಿದೆ. ಕೆಲವು ಉದ್ಯಮಗಳು ಬಹಳ ಲಾಭ ಮಾಡಿಕೊಂಡಿವೆ. ಇವೆಲ್ಲದರ ಮಧ್ಯೆ ಉಳಿದ ಕಂಪೆನಿಗಳ ನೆರವಿಗೆ ನಾನು ನಿಲ್ಲುತ್ತಿದ್ದೇನೆಂದು ಬಫೆಟ್ ಹೇಳಿಕೊಂಡಿದ್ದಾರೆ.