Advertisement

ಗಾಂಧೀಜಿಗೆ 3 ಬಾರಿ ಮಲೇರಿಯಾ!

09:35 AM Mar 29, 2019 | Team Udayavani |

ಹೊಸದಿಲ್ಲಿ: “ಬದುಕಿದರೆ ಗಾಂಧಿಯಂತೆ ಬದುಕಬೇಕು’ ಎಂಬುದು ಭಾರತವೇಕೆ ಜಗತ್ತಿನಲ್ಲೇ ಬಹುದೊಡ್ಡವರು ಎನಿಸಿಕೊಂಡವರ ಮಾತು… ಆದರೆ ಅದೇ ಗಾಂಧೀಜಿ ಹೇಗೆ ಬದುಕಿದ್ದರು, ಅವರ ಆರೋಗ್ಯ ಸ್ಥಿತಿ ಹೇಗಿತ್ತು ಎಂಬ ಬಗ್ಗೆ ಇದುವರೆಗೂ ಬಹಳಷ್ಟು ಕೌತುಕಗಳಿದ್ದವು. ಇದೇ ಮೊದಲ ಬಾರಿಗೆ ಗಾಂಧಿ ಅವರ ಆರೋಗ್ಯ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ, ಈ ದಾಖಲೆಗಳನ್ನು “ಗಾಂಧಿ ಆ್ಯಂಡ್‌ ಹೆಲ್ತ್‌ ಅಟ್‌ 150′ ಪುಸ್ತಕದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನೆ ಕೌನ್ಸಿಲ್‌ (ಐಸಿಎಂಆರ್‌) ಬಿಡುಗಡೆಗೊಳಿಸಿದೆ.

Advertisement

ಈ ದಾಖಲೆಗಳ ಪ್ರಕಾರ, ಗಾಂಧೀಜಿ ಅವರು ತಮ್ಮ ಜೀವನದಲ್ಲಿ ಮೂರು ಬಾರಿ ಮಲೇರಿಯಾಗೆ ತುತ್ತಾಗಿದ್ದರಂತೆ. 1925, 1936 ಮತ್ತು 1944ರಲ್ಲಿ ಮಲೇರಿಯಾದಿಂದ ಬಳಲಿದ್ದರು. ಅಷ್ಟೇ ಅಲ್ಲ, 1919ರಲ್ಲಿ ಪೈಲ್ಸ್‌ ಮತ್ತು 1924ರಲ್ಲಿ ಅಪೆಂಡಿಸೈಟಿಸ್‌ ಕೂಡ ಕಾಣಿಸಿಕೊಂಡಿತ್ತು ಎಂದು ಇದೇ ದಾಖಲೆಗಳು ಹೇಳುತ್ತಿವೆ.

ಗಾಂಧೀಜಿ ಅವರು, ಹಲವು ಕಾಲದ ವರೆಗೆ ಅನಾರೋಗ್ಯ ದಿಂದ ಬಳಲಿದ್ದರು ಮತ್ತು ದೀರ್ಘ‌ಕಾಲದವರೆಗೆ ರಕ್ತ ದೊತ್ತಡದಿಂದ ಬಳಲುತ್ತಿದ್ದರು ಎಂಬುದು ತಿಳಿದುಬಂದಿದೆ. ಆದರೂ ಅವರು ತಮ್ಮ ಜೀವನವನ್ನು ಒಂದು ಆದರ್ಶದಂತೆ ಬದುಕಿದರು. ಅಷ್ಟೇ ಅಲ್ಲ, ಪಾರ್ಶ್ವವಾಯು ಪೀಡಿತರ ಚಿಕಿತ್ಸೆಗೆ ತಮ್ಮ ಜೀವನವನ್ನು ಮುಡುಪಿಟ್ಟರು.

ದಿಲ್ಲಿಯ ಮಹಾತ್ಮಾ ಗಾಂಧಿ ಮ್ಯೂಸಿಯಂನಲ್ಲಿ ಸಂರಕ್ಷಿಸಿದ ಹಲವು ಆರೋಗ್ಯ ದಾಖಲೆಗಳನ್ನು ಇದೇ ಮೊದಲ ಬಾರಿಗೆ ಗಾಂಧಿ ಆ್ಯಂಡ್‌ ಹೆಲ್ತ್‌ ಅಟ್‌ 150 ಪುಸ್ತಕದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನೆ ಕೌನ್ಸಿಲ್‌ ಬಿಡುಗಡೆಗೊಳಿಸಿದೆ.

ಮಾ. 20ರಂದು ಧರ್ಮಶಾಲಾದಲ್ಲಿ ದಲಾಯಿ ಲಾಮಾ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. 1939ರಲ್ಲಿ ದಾಖಲಾದಂತೆ ಗಾಂಧಿ 46.7 ಕಿಲೋ ತೂಕ ಇದ್ದರು. ಅವರು ಐದು ಅಡಿ ಐದು ಇಂಚು ಎತ್ತರವಿದ್ದರು. ಇವರನ್ನು ಪರೀಕ್ಷಿಸಿದ ವೈದ್ಯರು ವಯಸ್ಸಿಗೆ ಹೋಲಿಸಿದರೆ ಕಡಿಮೆ ತೂಕವಿದ್ದರು ಎಂದು ಷರಾ ಬರೆದಿದ್ದರು. ಪೋಷಕಾಂಶಯುಕ್ತ ಆಹಾರವನ್ನು ಸೇವಿಸಿ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ವೈದ್ಯರು ಸೂಚಿಸಿದ್ದರು.

Advertisement

ಲಂಡನ್‌ನಲ್ಲಿರುವಾಗ ಅವರಿಗೆ ಪಾರ್ಶ್ವಬಾವು ಕೂಡ ಕಾಣಿಸಿಕೊಂಡಿತ್ತು. ಲಂಡನ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಅವರು ಪ್ರತಿ ದಿನ ಸಂಜೆ 8 ಮೈಲು ನಡೆಯುತ್ತಿದ್ದರು ಮತ್ತು ಮಲಗುವ ಮುನ್ನ 30-40 ನಿಮಿಷ ನಡೆಯುತ್ತಿದ್ದರು. 1937ರ ಅ. 26ರಂದು ತಪಾಸಣೆ ನಡೆಸಿದಾಗ ಅವರ ರಕ್ತದೊತ್ತಡ 194/130 ಹಾಗೂ 1940 ಫೆಬ್ರವರಿ 19 ರಂದು ಅವರ ರಕ್ತದೊತ್ತಡ 220/110 ಇತ್ತು ಎಂದು ಕೃತಿಯಲ್ಲಿ ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next