Advertisement

3 ಬಾರಿಯೂ ದೀಪಾವಳಿ ಆಸುಪಾಸಲ್ಲೇ ರೆಡ್ಡಿಗೆ ಸೆರೆವಾಸ‌!

06:25 AM Nov 12, 2018 | Team Udayavani |

ಬಳ್ಳಾರಿ: ಜಾರಿ ನಿರ್ದೇಶನಾಲಯ (ಇಡಿ) ಡೀಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೂಮ್ಮೆ ಜೈಲು ಸೇರಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬೆಳಕಿನ ಹಬ್ಬ “ದೀಪಾವಳಿ’ ಕಂಟಕವಾಗಿ ಪರಿಣಮಿಸಿದೆಯೇ ?! – ಇಂಥಹದ್ದೊಂದು ಅನುಮಾನ ಗಣಿ ಜಿಲ್ಲೆಯ ಜನರನ್ನು ಕಾಡುತ್ತಿದೆ.

Advertisement

ರೆಡ್ಡಿಯವರು ಮೂರು ಬಾರಿಯೂ “ದೀಪಾವಳಿ’ ಆಸುಪಾಸಿನಲ್ಲೇ ಜೈಲು ಸೇರಿರುವುದು ಜನರ ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ.

ಅಕ್ರಮ ಗಣಿಗಾರಿಕೆ ಆರೋಪದಡಿ 2011 ಸೆಪ್ಟೆಂಬರ್‌ 5 ಶಿಕ್ಷಕರ ದಿನಾಚರಣೆಯಂದು ರೆಡ್ಡಿಯವರನ್ನು ಆಂಧ್ರದ ಸಿಬಿಐ ಅ ಧಿಕಾರಿಗಳು ಬಂ ಧಿಸಿದ್ದರು. ಆ ವರ್ಷ ಅಕ್ಟೋಬರ್‌ 26ರಂದು ದೀಪಾವಳಿ. ಹಬ್ಬಕ್ಕೂ ಒಂದೂವರೆ ತಿಂಗಳ ಮುನ್ನ ರೆಡ್ಡಿ ಜೈಲು ಸೇರಿದ್ದರು. 2014ರವರೆಗೆ ಸತತ 4 ವರ್ಷ ಜೈಲಿನಲ್ಲಿದ್ದ ರೆಡ್ಡಿ ಹಬ್ಬ ಆಚರಿಸಲಿಲ್ಲ.

2015 ಜನವರಿ 20ರಂದು ರೆಡ್ಡಿ ಜೈಲಿನಿಂದ ಬಿಡುಗಡೆಯಾಗಿದ್ದರು. ಅದೇ ವರ್ಷ ನ. 20ರಂದು ವಿಶೇಷ ತನಿಖಾದಳ (ಎಸ್‌ಐಟಿ)ದಿಂದ ಬಂಧನಕ್ಕೊಳಗಾದರು. ಆ ವರ್ಷ ನ.11ಕ್ಕೆ ದೀಪಾವಳಿ. ಕುಟುಂಬ ಸದಸ್ಯರ ಜತೆ ಹಬ್ಬ ಆಚರಿಸಿದ 9 ದಿನಗಳಲ್ಲೇ ಬಂಧನವಾಗಿದ್ದರು. ಆಗ ಕೇವಲ 10 ದಿನಗಳಿಗೆ ಜಾಮೀನು ದೊರೆತಿದ್ದ ಹಿನ್ನೆಲೆಯಲ್ಲಿ ನ.30ರಂದು ಜೈಲಿನಿಂದ ಬಿಡುಗಡೆಯಾಗಿದ್ದರು.

ಅದೇ ರೀತಿ ಈಗ ಇಡಿ ಡೀಲ್‌ ಪ್ರಕರಣ ರೆಡ್ಡಿಗೆ ಮುಳುವಾಗಿದೆ. ನವೆಂಬರ್‌ 6, 7, 8ರಂದು ದೀಪಾವಳಿ. ನ. 7ರಂದೇ ಬೆಂಗಳೂರಿನ ಸಿಸಿಬಿ ಪೊಲೀಸರು ರೆಡ್ಡಿಗಾಗಿ ಹುಡುಕಾಟ ಆರಂಭಿಸಿದ್ದರು. 10ರಂದು ರೆಡ್ಡಿಯವರೇ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದು, ನ.11 ರಂದು ಬಂಧನಕ್ಕೊಳಗಾಗಿದ್ದಾರೆ. ಈಗಲೂ ರೆಡ್ಡಿ ದೀಪಾವಳಿ ಮುಗಿದು ಮೂರೆೇ ದಿನಗಳಲ್ಲಿ ಪುನಃ ಜೈಲು ಪಾಲಾಗಿದ್ದಾರೆ. ಇದರಿಂದ ರೆಡ್ಡಿಗೆ ದೀಪಾವಳಿ ಹಬ್ಬ ಮತ್ತು ನವೆಂಬರ್‌ ತಿಂಗಳು ಕಂಟಕವಾಗಿ ಪರಿಣಮಿಸಿದೆ. ಈ ದಿನಗಳಲ್ಲೇ ಅವರು ಅತಿ ಹೆಚ್ಚು  ಬಾರಿ ಬಂಧನಕ್ಕೊಳಗಾಗಿದ್ದಾರೆ ಎನ್ನಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next