Advertisement

ಆಸ್ಪತ್ರೆಯಲ್ಲಿ 3 ಸಾವಿರ ಮಂದಿ

07:07 AM Jun 06, 2020 | mahesh |

ಬೆಂಗಳೂರು: ರಾಜ್ಯದಲ್ಲಿ ಸೋಂಕು ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಸದ್ಯ 3,088 ಸಕ್ರಿಯ ಪ್ರಕರಣಗಳಿವೆ. ಈ ಎಲ್ಲ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 5, ಕಲಬುರಗಿಯಲ್ಲಿ 3, ಧಾರವಾಡ 2, ದಾಣನಗೆರೆ, ವಿಜಯಪುರ, ತುಮಕೂರಿನಲ್ಲಿ ತಲಾ ಒಬ್ಬರು ತೀವ್ರ ನಿಗಾ ಘಟಕದಲ್ಲಿ (ಐಸಿಯು)ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಕಿ ಎಲ್ಲ ಸೋಂಕಿತರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

ಮಹಾರಾಷ್ಟ್ರದಿಂದ 476 ಮಂದಿ
ಸೋಂಕಿತರಾದ 482 ಮಂದಿಯಲ್ಲಿ 474 ಮಂದಿ ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಉಳಿದಂತೆ ಮೂರು ಮಂದಿ ಹೊಸದಿಲ್ಲಿ, ಇಬ್ಬರು ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಹರಿಯಾಣ ರಾಜ್ಯಗಳ ತಲಾ ಒಬ್ಬರು ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ.

83 ಮಂದಿ ಗುಣಮುಖ
ಸೋಂಕಿತರ ಪೈಕಿ ಹಾಸನ 32, ಮಂಡ್ಯ 13, ಬೆಂಗಳೂರು ನಗರ 9, ಗದಗ 9, ದಾವಣಗೆರೆ 6, ಚಿಕ್ಕಮಗಳೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ವಿಜಯಪುರ ತಲಾ ಮೂವರು ಸೇರಿ ಒಟ್ಟು 83 ಮಂದಿ ಗುಣ ಮುಖರಾಗಿದ್ದಾರೆ.

49 ದಿನದ ಸೋಂಕು ಒಂದೇ ದಿನದಲ್ಲಿ!
ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು 500 ಗಡಿ ದಾಟಿದ್ದು ಎಪ್ರಿಲ್‌ 25ರಂದು. ಅಂದರೆ, ಸೋಂಕು ರಾಜ್ಯಕ್ಕೆ ಆಗಮಿಸಿ 49 ದಿನಗಳಲ್ಲಿ 500 ಮಂದಿ ಸೋಂಕಿತರಾಗಿದ್ದರು. ಆದರೆ, ಶುಕ್ರವಾರ ಒಂದೇ ದಿನ 515 ಮಂದಿ ಸೋಂಕಿತರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿನ ತೀವ್ರತೆ ಅತ್ಯಧಿಕವಾಗಿರುವುದು ಸ್ಪಷ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next