ಯಾದಗಿರಿ: ಮತಕ್ಷೇತ್ರದ ಶಾಸಕ ವೆಂಕಟರಡ್ಡಿ ಗೌಡ ಮುದ್ನಾಳ ತಮ್ಮ ವ್ಯಾಪ್ತಿಯ ಮೂರು ಶಾಲೆಗಳನ್ನುದತ್ತು ಪಡೆದಿದ್ದು, 2020-21ನೇ ಸಾಲಿನಲ್ಲಿಆ ಶಾಲೆಗಳಿಗೆ ಬೇಕಿರುವ ಸೌಕರ್ಯಗಳನ್ನು ಕಲ್ಪಿಸಿ ಮಾದರಿಯನ್ನಾಗಿಸುವ ಕನಸು ಹೊಂದಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದ್ನಾಳ, ಸರ್ಕಾರಿ ಪ್ರೌಢ ಶಾಲೆ ಅರಕೇರಾ(ಕೆ) ಹಾಗೂಬಲಕಲ್ ಗ್ರಾಮದ ಸರ್ಕಾರಿಹಿರಿಯ ಪ್ರಾಥಮಿಕ ಶಾಲೆ ದತ್ತು ಪಡೆದಿರುವ ಶಾಸಕರು, ಅಲ್ಲಿ ಗ್ರಂಥಾಲಯ, ಪ್ರಯೋಗಾಲಯ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆತಲಾ 10 ಲಕ್ಷ ರೂ. ಸರ್ಕಾರ ನಿಗದಿಗೊಳಿಸಿದೆ. ಶಾಸಕರ ತವರೂರು ಮುದ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಿದ್ದು, ಸುಮಾರು ವರ್ಷಗಳಿಂದ ಗ್ರಾಮದ ವಿದ್ಯಾರ್ಥಿಗಳು ಹಳೆಯ ಕಟ್ಟಡದಲ್ಲಿಯೇ ವ್ಯಾಸಂಗ ಮಾಡುತ್ತಿದ್ದರು. ಇದರ ಬಗ್ಗೆ ಕಾಳಜಿ ವಹಿಸಿರುವ ಶಾಸಕರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಹಂತ ಹಂತವಾಗಿ 14 ಕೋಣೆಗಳನ್ನು ನಿರ್ಮಿಸಲು ಕ್ರಮವಹಿಸಿದ್ದು ಇದೀಗ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ.
ಈಗಾಗಲೇ ಶಾಲೆ ಆವರಣದಲ್ಲಿ ಕೊಳವೆ ಬಾವಿಯಿದ್ದು, ಮಕ್ಕಳಿಗೆ ಸಮರ್ಪಕ ಶುದ್ಧ ಕುಡಿಯುವ ನೀರು ಒದಗಿಸುವುದು ಸೇರಿದಂತೆ ಶೌಚಾಲಯ, ಕಾಂಪೌಂಡ್ ಹೀಗೆ ಮೂಲ ಸೌಕರ್ಯ ಒದಗಿಸಿ ಮಕ್ಕಳ ಕಲಿಕೆಗೆ ಪೂರಕವಾಗುವಂತೆ ಗ್ರಂಥಾಲಯ ಸ್ಥಾಪಿಸಿ ಜ್ಞಾನ ಭಂಡಾರವೇ ಮಕ್ಕಳಿಗೆ ತೆರೆದಿರುವಂತೆ ಮಾಡುವುದು ಅವರ ಉದ್ದೇಶವಾಗಿದೆ. ಅರಕೇರಾ(ಕೆ) ಪ್ರೌಢ ಶಾಲೆ ಆರ್.ಎಂ.ಎಚ್. ಎಸ್ ಅಡಿಯಲ್ಲಿದ್ದು, ಇಲ್ಲಿ ಪ್ರಮುಖವಾಗಿ ಶಿಕ್ಷಕರಿಗೆ ಕುಳಿತುಕೊಳ್ಳಲು ಕುರ್ಚಿ, ಟೇಬಲ್ ಸೇರಿದಂತೆ ಅಗತ್ಯ ವಸ್ತುಗಳು ಬೇಕಿದೆ. ಈಗಾಗಲೇ ಗ್ರಾಪಂ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಸುತ್ತಲೂ ಬಯಲು ಪ್ರದೇಶವಿರುವುದರಿಂದ ಉಳಿದ ಕಾಂಪೌಂಡ್ ಗೋಡೆ ನಿರ್ಮಿಸುವುದು ಅತ್ಯಗತ್ಯವಾಗಿದೆ. ಅಲ್ಲಿನ ಅಗತ್ಯತೆ ಪೂರೈಸಲು ಶಾಸಕರು ಮುಂದಾಗಬೇಕಿದೆ.
ಇನ್ನು ಬಲಕಲ್ ಗ್ರಾಮದ ಶಾಲೆ 1 ಎಕರೆಗೂಹೆಚ್ಚು ಪ್ರದೇಶದಲ್ಲಿದ್ದು, 12 ಕೊಠಡಿಗಳಿದ್ದು ಮೂರು ಕೋಣೆ ಶಿಥಿಲಾವಸ್ಥೆಯಲ್ಲಿದೆ. ಉಳಿದ 9 ರಲ್ಲಿ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಪ್ರೌಢ ಶಾಲೆಯೂ ಮಂಜೂರು ಆಗುವ ಸಾಧ್ಯತೆಯಿದ್ದು, ಹಾಗಾಗಿ ಹೆಚ್ಚಿನ ಕೊಠಡಿಗಳು ಅತ್ಯಗತ್ಯವಾಗಿದೆ ಎನ್ನುತ್ತಾರೆ ಮುಖ್ಯಗುರು ಹಣಮಂತ. ಇಲ್ಲಿ ನಾಲ್ವಡಗಿ, ನಾಯ್ಕಲ್ ತಾಂಡಾ ಮತ್ತು ಬಲಕಲ್ ಗ್ರಾಮದ ಮಕ್ಕಳು ಅಭ್ಯಾಸಕ್ಕೆ ಬರುತ್ತಾರೆ. ಗ್ರಂಥಾಲಯ, ಕಾಂಪೌಂಡ್ ಪೂರ್ಣಗೊಳಿಸಬೇಕಿದ್ದು, ಸಮರ್ಪಕ ಕುಡಿಯುವನೀರಿನ ಸೌಕರ್ಯ ಕಲ್ಪಿಸಬೇಕಿದೆ. ಶಾಲೆಯಿಂದ ಎರಡುಬಾರಿ ಕೊಳವೆಬಾವಿ ಕೊರೆಯಿಸಲಾಗಿದೆ. ಆದರೆ ನೀರಿಲ್ಲದ ಕಾರಣ ತೊಂದರೆಯಾಗಿದ್ದು, ಶಾಶ್ವತವಾಗಿ ಪರಿಹಾರ ಕಲ್ಪಿಸಬೇಕಿದೆ.
ಕ್ಷೇತ್ರದ ಮೂರು ಶಾಲೆಗಳನ್ನು ದತ್ತು ಪಡೆದಿದ್ದು, ಅಗತ್ಯತೆ ಪೂರೈಸಿ ಮಾದರಿಯನ್ನಾಗಿಸುವ ಗುರಿಯಿದೆ. ಈಗಾಗಲೇ ಕೋಣೆಗಳ ಕೊರತೆ ನಿವಾರಿಸಲು ಆದ್ಯತೆ ನೀಡಲಾಗಿದೆ.ಮುದ್ನಾಳ ಗ್ರಾಮಕ್ಕೂ ಪ್ರೌಢ ಶಾಲೆಯ ಮಂಜೂರಾತಿಗೆ ಪ್ರಯತ್ನ ನಡೆದಿದೆ. ಜತೆಗೆ ಹೈಟೆಕ್ ಶೌಚಾಲಯ, ಸಿಂಟೆಕ್ಸ್ ನೀರಿನ ಟ್ಯಾಂಕ್ ಕೂಡಿಸಲು ಕ್ರಮವಹಿಸಲಾಗುವುದು. ಅಗತ್ಯವಿರುವ ಕಡೆ ಪ್ರಯೋಗಾಲಯ ಮತ್ತು ಗ್ರಂಥಾಲಯಕ್ಕೆ ಆದ್ಯತೆ ನೀಡಲಾಗುವುದು.
– ವೆಂಕಟರೆಡ್ಡಿ ಗೌಡ ಮುದ್ನಾಳ, ಯಾದಗಿರಿ ಶಾಸಕರು.
ಬಲಕಲ್ ಗ್ರಾಮದ ಶಾಲೆಗೆ ಕಾಂಪೌಂಡ್ ಪೂರ್ಣ ಪ್ರಮಾಣದಲ್ಲಿ ಬೇಕಿದೆ. ಶಾಲೆಯ ಸಿಂಟೆಕ್ಸ್ ಟ್ಯಾಂಕ್ ಸೇರಿದಂತೆ ಇತರೆ ವಸ್ತುಗಳಿಗೆ ಸುರಕ್ಷತೆಯಿಲ್ಲದಂತಾಗಿದೆ. ಮೂರು ಕೋಣೆಗಳು ಶಿಥಿಲಾವಸ್ಥೆ ತಲುಪಿದ್ದು, ಮಕ್ಕಳಿಗೆಮೂರು ಕೋಣೆಗಳು ಅತ್ಯಗತ್ಯವಾಗಿದ್ದು, ಮಕ್ಕಳಿಗೆ ಕೈ ತೊಳೆಯುವ ವ್ಯವಸ್ಥೆ, ಶುದ್ಧಕುಡಿಯುವ ನೀರಿನ ಸೌಕರ್ಯ ಬೇಕಿದೆ. –
ಹಣಮಂತ, ಮುಖ್ಯಗುರು, ಬಲಕಲ್.
ಅರಕೇರಾ(ಕೆ) ಪ್ರೌಢಶಾಲೆಗೆ ಹೆಚ್ಚುವರಿ 3 ಶೌಚಾಲಯ, ವಿಶಾಲ ಪ್ರದೇಶದಲ್ಲಿ ಸಂಪೂರ್ಣ ಕಾಂಪೌಂಡ್ ಬೇಕಿದೆ. ವಿಜ್ಞಾನಪ್ರಯೋಗಾಲಯಕ್ಕೆ ಅಗತ್ಯ ವಸ್ತುಗಳುಬೇಕಿದ್ದು, ಗ್ರಂಥಾಲಯ ನಿರ್ಮಾಣಮಾಡಿದರೆ ಮಕ್ಕಳಿಗೆ ಅನುಕೂಲವಾಗಲಿದೆ.ಶುದ್ಧ ಕುಡಿಯುವ ನೀರು ಮತ್ತು ಉದ್ಯಾನ ನಿರ್ಮಾಣ ಮಾಡಿದರೆ ಉತ್ತಮ. –
ನಿವೇದಿತಾ ಪಟ್ಟೇದಾರ, ಮುಖ್ಯ ಶಿಕ್ಷಕಿ
-ಅನೀಲ ಬಸೂದೆ