Advertisement

Tragic: ಡಾಬಾಕ್ಕೆ ನುಗ್ಗಿದ ಟ್ರಕ್; ಮೂವರು ಮೃತ್ಯು

09:12 AM Dec 17, 2023 | Team Udayavani |

ಲಕ್ನೋ: ಕಸ ಸಾಗಿಸುವ ಟ್ರಕ್‌ ವೊಂದು ಡಾಬಾಕ್ಕೆ ನುಗ್ಗಿದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಾಣಿಕಪುರ ಕ್ರಾಸಿಂಗ್ ಬಳಿ ಶನಿವಾರ ರಾತ್ರಿ(ಡಿ.16 ರಂದು) ನಡೆದಿದೆ.

Advertisement

ಶನಿವಾರ ರಾತ್ರಿ ಡಾಬಾವೊಂದಕ್ಕೆ ವೇಗವಾಗಿ ಬಂದು ಢಿಕ್ಕಿ ಹೊಡೆದಿದೆ. ಪರಿಣಾಮ ಅಲ್ಲಿ ಕೂತಿದ್ದ ಜನರ ಮೇಲೆಯೇ ಹರಿದಿದೆ. ಡಾಬಾದ ಗೋಡೆ ಹಾನಿಯಾಗಿದ್ದು ಅದರ ಕೆಳಗೆ ಜನ ಸಿಲುಕಿಕೊಂಡಿದ್ದಾರೆ. ಮೂವರು ಮೃತಪಟ್ಟಿದ್ದು ,ಇನ್ನು ಮೂವರು ಗಾಯಗೊಂಡಿದ್ದಾರೆ ಎಂದು ಇಟಾವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವ್ನಿಶ್ ರೈ ಹೇಳಿದ್ದಾರೆ.

ಮದ್ಯದ ಅಮಲಿನಲ್ಲಿದ್ದ ಟ್ರಕ್‌ ಚಾಲಕನನ್ನು ಬಂಧಿಸಲಾಗಿದೆ ಎಂದು ಇಟಾವಾಹ್ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಸಂಜಯ್ ಕುಮಾರ್ ವರ್ಮಾ ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಘಟನೆಯ ಬಳಿಕ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸಪಡಬೇಕಾಯಿತು. ಗೋಡೆಯ ಅಡಿಯಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಎರಡು ಗಂಟೆ ಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next