Advertisement

Kasaragod: ಬಂಧಿತ ಮಹಿಳೆ ವಿರುದ್ಧ ಮತ್ತೆ 3 ಪ್ರಕರಣ ದಾಖಲು

08:38 PM Aug 08, 2024 | Team Udayavani |

ಕಾಸರಗೋಡು: ಐಎಸ್‌ಆರ್‌ಒ ಟೆಕ್ನಿಕಲ್‌ ಅಸಿಸ್ಟೆಂಟ್‌ ಎಂಬ ನಕಲಿ ಅಧಿಕಾರಿಯ ಸೋಗಿನಲ್ಲಿ ಹಣ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತಳಾಗಿರುವ ಚೆಮ್ನಾಡ್‌ ಕೊಂಬನಡ್ಕ ನಿವಾಸಿ ಶ್ರುತಿ ಚಂದ್ರಶೇಖರನ್‌(34) ವಿರುದ್ಧ ಮತ್ತೆ ಮೂರು ಹೊಸ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.

Advertisement

ಪುಲ್ಲೂರು ಪೆರಿಯಾ ಪಂಚಾಯತ್‌ನ ಯುವಕನೋರ್ವ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದ್ದಾರೆ. ತಾನು ಇಸ್ರೋದ ಅಧಿಕಾರಿಯಾಗಿದ್ದೇನೆಂದು ಹೇಳಿ ಆರೋಪಿ ಶ್ರುತಿ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಆ ಹೆಸರಿನಲ್ಲಿ ಮೊದಲು ನನ್ನಿಂದ 14000 ರೂ. ಪಡೆದುಕೊಂಡು, ಆ ಬಳಿಕ ಮಾರ್ಚ್‌ 31 ರಂದು ನಕಲಿ ಫೋಟೋ ಮತ್ತು ವೀಡಿಯೋವನ್ನು ತೋರಿಸಿ ಮತ್ತೆ ಐವತ್ತು ಸಾವಿರ ರೂ.ಕೇಳಿ ಪಡೆದುಕೊಂಡಳೆಂದೂ, ಎಪ್ರಿಲ್‌ 29 ರಂದು ಮತ್ತೆ ಐವತ್ತು ಸಾವಿರ ರೂ. ಪಡೆದ ಬಳಿಕ ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಕಾಸರಗೋಡು ನಗರದ ಲ್ಯಾಬೊಂದರ ಸಿಬ್ಬಂದಿ ಉದುಮದ 42 ವರ್ಷದ ಯುವಕನೋರ್ವ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಶ್ರುತಿ ವಿರುದ್ಧ ಕೇಸು ದಾಖಲಿಸಿದ್ದಾರೆ. ನಾನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿರುವುದಾಗಿ ನಂಬಿಸಿ 2019 ರಿಂದ 2021ರ ಅವಧಿಯಲ್ಲಿ ಶ್ರುತಿ ತನ್ನ ಬ್ಯಾಂಕ್‌ ಖಾತೆಯಿಂದ 73000 ರೂ. ಪಡೆದುಕೊಂಡಿದ್ದಳು. ಇದಲ್ಲದೆ ಬ್ಯಾಂಕ್‌ನಲ್ಲಿ ಅಡ ಇರಿಸಿದ 83.81 ಗ್ರಾಂ ಚಿನ್ನ ಪಡೆದು ಅದನ್ನೂ ಹಿಂತಿರುಗಿಸದೆ ವಂಚಿಸಿದ್ದಾಗಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.

ನಾನು ಫೆಡರಲ್‌ ಬ್ಯಾಂಕ್‌ನ ಮೆನೇಜರ್‌ ಎಂದು ನಂಬಿಸಿ ಶ್ರುತಿ ತನ್ನಿಂದ 1,23,750 ರೂ. ಪಡೆದು ವಂಚಿಸಿದಾಗಿ ಕೊಲ್ಲಂ ಕರುನಾಗಪಳ್ಳಿಯ 33 ರ ಹರೆಯದ ಯುವತಿ ನೀಡಿದ ದೂರಿನಂತೆ ಕೊಲ್ಲಂ ಈಸ್ಟ್‌ ಪೊಲೀಸ್‌ ಠಾಣೆಯಲ್ಲಿ ಶ್ರುತಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next