Advertisement

3 ತಿಂಗಳಿಂದ ವೇತನವಿಲ್ಲದೆ ಪರದಾಟ

03:07 PM Aug 23, 2019 | Team Udayavani |

ಕೋಲಾರ: ಆರೋಗ್ಯ ಇಲಾಖೆಯಲ್ಲಿ ಕಳೆದ ಮೂರು ತಿಂಗಳಿಂದ ವೇತನ ನೀಡದಿರುವುದನ್ನು ಖಂಡಿಸಿ ಹಾಗೂ ಕೂಡಲೇ ಬಟವಾಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿ ಆರೋಗ್ಯ ಇಲಾಖೆ ನೌಕರರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ನೌಕರರ ಸಂಘದ ರಾಜ್ಯ ಪರಿಷತ್‌ ಸದಸ್ಯ ಜಿ.ಸುರೇಶ್‌ಬಾಬು, ನಿಕಟ ಪೂರ್ವ ಖಜಾಂಚಿ ಎಸ್‌.ಚೌಡಪ್ಪ ನೇತೃ ತ್ವದಲ್ಲಿ ಮನವಿ ಸಲ್ಲಿಸಿದ ನೌಕರರು, ಕಳೆದ ಮೂರು ತಿಂಗಳಿಂದ ವೇತನ ನೀಡಿಲ್ಲ, ಅನುದಾನದ ನೆಪವೊಡ್ಡಿ ತೊಂದರೆ ಮಾಡಿದ್ದು, ಇದರಿಂದ ಕುಟುಂಬ ನಿರ್ವ ಹಣೆ ತುಂಬಾ ಕಷ್ಟವಾಗಿದೆ ಎಂದು ದೂರಿದರು. ವೇತನ ವಿಳಂಬದ ಕುರಿತು ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ, ಇದರಿಂದ ನಮ್ಮ ಜೀವನ ಸಂಷಷ್ಟದಲ್ಲಿದೆ. ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳು ಸರ್ಕಾರಿ ನೌಕರರಿಗೆ ತಿಂಗಳ ಮೊದಲ ದಿನವೇ ವೇತನ ಬಟವಾಡೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಸೂಚಿಸಿದೆ ಆದರೆ ನಮಗೆ ಕಳೆದ 3 ತಿಂಗಳಿಂದ ಸಂಬಳವಿಲ್ಲ ಎಂದು ನೌಕರರು ಬೇಸರ ವ್ಯಕ್ತಪಡಿಸಿದರು. ಕೂಡಲೇ ವೇತನ ಬಿಡುಗಡೆ ಮಾಡದಿದ್ದಲ್ಲಿ ಹೋರಾಟ ನಡೆಸುವುದಾಗಿ ನೌಕರರ ಸಂಘದ ಪ್ರತಿನಿಧಿಗಳು ಎಚ್ಚರಿಕೆ ನೀಡಿದರು. ನೌಕರರ ಸಂಘದ ಸದಸ್ಯರಾದ ಆರೋಗ್ಯ ಇಲಾಖೆಯ ನಂದೀಶ್‌, ಮಧು, ಮಾಲೂರು ತಾಲೂಕು ಸಂಘದ ಉಪಾಧ್ಯಕ್ಷ ಸಿ.ಸುರೇಶ್‌, ಎಂ.ಸರಸ್ವತಮ್ಮ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next