Advertisement

ಬದ್ಗಾಮ್‌ ನಲ್ಲಿ ಭಾರೀ ಗುಂಡಿನ ಕಾಳಗ:3 ಉಗ್ರರು ಮಟಾಶ್‌ 

01:38 PM Nov 30, 2017 | Team Udayavani |

ಶ್ರೀನಗರ: ಬದ್ಗಾಮ್‌ ಜಿಲ್ಲೆಯ ಪಲ್ಟಿಪೋರಾ ಎಂಬಲ್ಲಿ ಸೇನಾ ಪಡೆಗಳು ಗುರುವಾರ ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. 

Advertisement

ಮನೆಯೊಂದರಲ್ಲಿ ಅಡಗಿದ್ದ ಉಗ್ರರನ್ನು ಸುತ್ತುವರಿದ ಸೇನಾ ಪಡೆಗಳು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಸಿ ಮೂವರನ್ನು ಹತ್ಯೆಗೈದಿದ್ದಾರೆ. 

ಘಟನಾ ಸ್ಥಳದ ಸಮೀಪದಲ್ಲಿ ಸ್ಥಳೀಯ ಕೆಲ ವರು ಪ್ರತಿಭಟನೆನಡೆಸಿದ್ದು, ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಓರ್ವ ಗಾಯಗೊಂಡಿರುವುದಾಗಿ  ವರದಿಯಾಗಿದೆ.  

ಉದ್ವಿಗ್ನ ವಾತಾವರಣ ನಿರ್ಮಾಣವಾದಬಳಿಕ ಸುತ್ತಮುತ್ತಲ ಪ್ರದೇಶಗಳಲ್ಲಿ ಇಂಟರ್ನೆಟ್‌ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next