Advertisement

ಸಿನಿಮಾ ಶೈಲಿಯಲ್ಲಿ ಚಲಿಸುತ್ತಿದ್ದ ಟ್ರಕ್‌ನಿಂದ ಕಳ್ಳತನ… ವಿಡಿಯೋ ನೋಡಿ ಬೆಚ್ಚಿಬಿದ್ದ ಜನ

03:17 PM May 25, 2024 | Team Udayavani |

ಮಧ್ಯಪ್ರದೇಶ: ಬೈಕಿನಲ್ಲಿ ಬಂದ ಮೂವರು ವ್ಯಕ್ತಿಗಳು ಚಲಿಸುವ ಟ್ರಕ್‌ನಿಂದ ಸರಕುಗಳನ್ನು ಕದಿಯುವ ವಿಶಿಷ್ಟ ಶೈಲಿಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Advertisement

ಆಗ್ರಾ-ಮುಂಬೈ ಹೆದ್ದಾರಿಯಲ್ಲಿ ದೇವಾಸ್-ಶಾಜಾಪುರ ಮಾರ್ಗದ ನಡುವೆ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ರಕ್‌ ನ ಹಿಂದಿನಿಂದ ಬೈಕ್ ನಲ್ಲಿ ಬಂದ ಮೂವರ ತಂಡ ಚಲಿಸುತ್ತಿರುವ ಟ್ರಕ್ ಗೆ ಹಿಂದಿಂದ ಹತ್ತಿ ಟಾರ್ಪಲ್ ಹರಿದು ಅದರಲ್ಲಿದ್ದ ಸರಕನ್ನು ಕೆಳಗೆಸೆದು ಮತ್ತೆ ಬೈಕಿನಲ್ಲಿ ಪರಾರಿಯಾಗಿದ್ದಾರೆ, ಕಳ್ಳರ ಕೈಚಳಕವನ್ನು ಲಾರಿಯ ಹಿಂದಿನಿಂದ ಬರುತ್ತಿದ್ದ ಕಾರಿನಲ್ಲಿ ಪ್ರಯಾಣಿಸುತಿದ್ದವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಆದರೆ ಈ ಘಟನೆಯಲ್ಲಿ ಇನ್ನೂ ಒಂದು ವಿಷಯ ಬೆಳಕಿಗೆ ಬಂದಿದ್ದು ಈ ಕಳ್ಳತನದಲ್ಲಿ ಟ್ರಕ್ ಚಾಲಕ ಕೂಡ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ ಕಾರಣ ಕಳ್ಳರು ಬೈಕ್ ನಲ್ಲಿ ಬಂದು ಕಳ್ಳತನ ಮಾಡುವ ಹೊತ್ತಿನಲ್ಲಿ ಚಾಲಕ ಟ್ರಕ್ ಅನ್ನು ನಿಧಾನವಾಗಿ ಚಲಾಯಿಸುವುದು ಕಾಣಬಹುದು ಇದಾದ ಬಳಿಕ ಕಳ್ಳರು ಸರಕನ್ನು ಕೆಳಗೆ ಎಸೆದು ಬೈಕ್ ನಲ್ಲಿ ಕುಳಿತ ಮೇಲೆ ತನ್ನ ವೇಗವನ್ನು ಹೆಚ್ಚಿಸುವುದನ್ನೂ ಕಾಣಬಹುದು ಹಾಗಾಗಿ ಈ ಪ್ರಕರಣದಲ್ಲಿ ಟ್ರಕ್ ಚಾಲಕನೂ ಭಾಗಿಯಾಗಿರುವ ಅನುಮಾನ ಎದ್ದು ಕಾಣಿತ್ತಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಅಲ್ಲದೆ ಘಟನೆ ಸಂಬಂಧ ಯಾವುದೇ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯ ಸತ್ಯಾಸತ್ಯತೆ ಇನ್ನಷ್ಟೇ ತಿಳಿದುಬರಬೇಕಾಗಿದೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next