Advertisement

3 ಲಕ್ಷ ಮೌಲ್ಯದ ಮಾದಕ ವಸ್ತು ಆಮದು: ಬಂಧನ

06:05 AM Jun 26, 2020 | Lakshmi GovindaRaj |

ಬೆಂಗಳೂರು: ಬೆಂಗಳೂರು ಮತ್ತು ಚೆನ್ನೈ ಕಸ್ಟಮ್ಸ್‌ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ವಿದೇಶದಿಂದ ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳನ್ನು ಜರ್ಮನಿಯಿಂದಆಮದು ಮಾಡಿಕೊಂಡಿದ್ದ ಆರೋಪಿಯನ್ನು ಬಂಧಿಸಲಾ ಗಿದೆ. ಕೋರಮಂಗಲ ನಿವಾಸಿ ಕವಿ ಕುಮಾರ್‌ (25) ಬಂಧಿತ. ಆರೋಪಿಯಿಂದ 3 ಲಕ್ಷ ಮೌಲ್ಯದ ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಮಲೇಷಿಯಾ ಮೂಲದ ಆರೋಪಿ, ಬೆಂಗಳೂರಿನ ಇ-   ಕಾಮರ್ಸ್‌  ಕಂಪನಿಯ ಕಚೇರಿಯೊಂದರಲ್ಲಿ ಕ್ವಾಲಿಟಿ ಅನಾಲಿಸಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ, ಅಧಿಕಾರ ದುರುಪಯೋಗ ಪಡಿಸಿ  ಕೊಂಡು ಮಾದಕ ವಸ್ತು ದಂಧೆ ಯಲ್ಲಿ ತೊಡಗಿದ್ದ ಎಂಬುದು ಗೊತ್ತಾಗಿದೆ. ಈ ಕುರಿತು ತನಿಖೆ ಯನ್ನು  ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಾಕ್‌ ಡೌನ್‌ಗೂ ಮುನ್ನ ಜರ್ಮನಿಯಿಂದ ಮಾದಕ ವಸ್ತುಗಳನ್ನು ಚೆನ್ನೈಗೆ ಪಾರ್ಸಲ್‌ ತರಿಸಿಕೊಂಡಿದ್ದ. ಚೆನ್ನೈಗೆ ಹೋಗಬೇಕಿದ್ದ ಆರೋಪಿ, ಲಾಕ್‌ಡೌನ್‌ನಿಂದಾಗಿ  ಇಲ್ಲಿಯೇ ಉಳಿದುಕೊಂಡಿದ್ದ. ಆದರೆ, ಚೆನ್ನೈ ಕಸ್ಟಮ್ಸ್‌ ಅಧಿಕಾರಿಗಳಿಗೆ ಅನುಮಾ ನ ದಿಂದ ಪಾರ್ಸೆಲ್‌ ಪರಿಶೀಲಿಸಿ  ದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಪಾರ್ಸೆಲ್‌ನಲ್ಲಿ ಉಲ್ಲೇಖೀಸಿದ್ದ ವಿಳಾಸವನ್ನು ಆಧರಿಸಿ ಕಸ್ಟಮ್ಸ್‌  ಅಧಿಕಾರಿಗಳು ತನಿಖೆ ಕೈಗೊಂಡಿದ್ದರು.

ಚೆನ್ನೈ ಮನೆಗೆ ಭೇಟಿ ನೀಡಿದಾಗ, ಸಂಬಂಧಿಕರ ಮನೆ ಎಂಬುದು ಗೊತ್ತಾಗಿತ್ತು. ಆರೋಪಿ ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿ ಕೊಂಡು ಕೋರಮಂಗಲದಲ್ಲಿ ವಾಸವಾಗಿರುವುದನ್ನು ಪತ್ತೆ ಹಚ್ಚಿದ್ದರು.  ಏರ್‌ ಕಸ್ಟಮ್ಸ್‌ ಅಧಿಕಾರಿಗಳ ನೆರವು ಪಡೆದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next