Advertisement
ಪ್ರಸಕ್ತ ವರ್ಷ 30 ಅರ್ಚಕರು ಹಾಗೂ ಪುರೋಹಿತರನ್ನು ವಿವಾಹ ಆಗುವ ಯುವತಿಯರಿಗೆ ಮೈತ್ರಿ ಮತ್ತು 300 ಯುವತಿಯರಿಗೆ “ಅರುಂಧತಿ’ ಯೋಜನೆ ನೆರವು ದೊರೆಯಲಿದೆ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಹೇಳಿದರು.
ಬ್ರಾಹ್ಮಣರ ಮಕ್ಕಳಿಗೆ ವೇದ ಕಲಿಸಲು ದೇವತಾರ್ಚನೆ, ಸ್ವಯಂ ಉದ್ಯೋಗ ಕೈಗೊಳ್ಳಲು 25 ಸಾ. ರೂ.ನಿಂದ 7.50 ಲ. ರೂ.ವರೆಗೆ ಸಾಲ, ಶೇ.20ರಷ್ಟು ಸಬ್ಸಿಡಿ ನೀಡುವ “ಪುರುಷೋತ್ತಮ’ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಆರ್ಥಿಕ ನೆರವು ನೀಡಿ ಈ ಯೋಜನೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದು ಇದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.