Advertisement

ಕೈಗಾ ಅಣುಸ್ಥಾವರ ಕೇಂದ್ರದ ನಿರ್ದೇಶಕರಿಗೆ ಆನ್ ಲೈನ್ ಮೂಲಕ 3 ಲಕ್ಷ ವಂಚನೆ: ಪ್ರಕರಣ ದಾಖಲು

03:40 PM Jun 12, 2022 | Team Udayavani |

ಕಾರವಾರ: ವಿಮಾನ ಟಿಕೆಟ್ ಮರುಪಾವತಿಯಾಗದ್ದನ್ನು ಆನ್ ಲೈನ್ ಮೂಲಕ ವಿಚಾರಿಸಲು ಹೋಗಿ ಕೈಗಾ ಅಣುಸ್ಥಾವರದ ಕೇಂದ್ರದ ನಿರ್ದೇಶಕರು ಮೂರು ಲಕ್ಷ ಹಣಕ್ಕೆ ಪಂಗನಾಮ ಬಿದ್ದ ಘಟನೆ ನಡೆದಿದೆ.

Advertisement

ಅಣುವಿದ್ಯುತ್ ಸ್ಥಾವರದ ನಿರ್ದೇಶಕರು ಕಳೆದುಕೊಂಡಿರುವ ಬಗ್ಗೆ ಕಾರವಾರ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಎನ್ ಪಿಸಿಐಎಲ್ ಕೈಗಾದ ಸೈಟ್ ಡೈರೆಕ್ಟರ್ ರಾಜೇಂದ್ರ ಕುಮಾರ್ ಗುಪ್ತಾ ಮೆ. 29 ರಂದು ಗೋವಾದಿಂದ ಜೈಪುರಗೆ ಪ್ರಯಾಣಿಸುವ ಇಂಡಿಗೋ ಏರಲೈನ್ಸನಲ್ಲಿ ಟಿಕೇಟನ್ನು ಬುಕ್ ಮಾಡಿದ್ದರು. ಆದರೆ ವಿಮಾನ ಹಾರಾಟ ರದ್ದಾಗಿದ್ದು ಜೂ.5ರ ವರೆಗೂ ಮರು ಪಾವತಿಯಾಗದ ಹಿನ್ನೆಲೆಯಲ್ಲಿ ಜೂ.5 ರಂದು ಇಂಡಿಗೋ  ಏರ್ ಲೈನ್ಸ್ ಅವರ ಕಸ್ಟಮರ್ ಕೇರ್ ನಂಬರನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ಅವರಿಗೆ ಇಂಡಿಗೋ ಏಕ್ಸಿಕ್ಯೂಟಿವ್ ಅಧಿಕಾರಿ ಎಂದು ನಮೂದಿರುವ ಮೊಬೈಲ್ ನಂಬರ ಸಿಕ್ಕಿದೆ. ಇದಕ್ಕೆ ಕರೆ ಮಾಡಿ ರದ್ದಾಗಿರುವ ಫ್ಲೈಟ್ ಟಿಕೇಟ್ ಹಣವನ್ನು ಮರು ಪಾವತಿಸುವಂತೆ ಕೋರಿಕೊಂಡಾಗ, ಕರೆ ಸ್ವೀಕರಿಸಿದ ವ್ಯಕ್ತಿಯು ತಾವು ಸಹಾಯ ಮಾಡುವುದಾಗಿ ಹೇಳಿ, ಡೈರೆಕ್ಟರ್ ಮೊಬೈಲ್‌ ನಲ್ಲಿ ಅಪ್ಲೀಕೇಶನ್ ಒಂದನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ತಿಳಿಸಿದ್ದರು.

ಇದನ್ನೂ ಓದಿ:ಪಿಎಸ್ಐ ನೇಮಕಾತಿ ಹಗರಣ: ಮತ್ತೋರ್ವ ಪೊಲೀಸ್ ಕಾನಸ್ಟೇಬಲ್ ಬಂಧನ

ಬಳಿಕ ಅವರು ಸೂಚಿಸಿದಂತೆ ತಮ್ಮ ಎಸ್ ಬಿಐ ಬ್ಯಾಂಕ್ ಖಾತೆಯ ಇಂಟರನೇಟ್ ಬ್ಯಾಂಕಿಗೆ ಲಾಗಿನ ಆಗುತ್ತಿದ್ದಂತೆ ಅವರ ಎಸ್ ಬಿ.ಐ ಖಾತೆಯಿಂದ ರೂ 1 ಲಕ್ಷ ಹಾಗೂ ಮತ್ತೊಮ್ಮೆ 2 ಲಕ್ಷ ಹೀಗೆ ಒಟ್ಟು 3 ಲಕ್ಷ ಹಣವನ್ನು ಲಪಟಾಯಿಸಿ ತನಗೆ ಮೋಸ ಮಾಡಿದ್ದಾರೆ.

Advertisement

ಆನ್ ಲೈನ್ ವಂಚನೆ ಮಾಡಿರುವ ಆರೋಪಿ ವಿರುದ್ಧ ಕಾರವಾರ ಸೈಬರ್ ಕ್ರೈಂ ತನಿಖಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next