Advertisement

ಉತ್ತರ ಪ್ರದೇಶದಲ್ಲಿ ಕಾರಿಗೆ ಟ್ರಕ್‌ ಢಿಕ್ಕಿ: ಮೂವರ ದಾರುಣ ಸಾವು

04:12 PM Nov 07, 2018 | Team Udayavani |

ಪ್ರತಾಪಗಢ, ಉತ್ತರ ಪ್ರದೇಶ : ಇಲ್ಲಿನ ಮೋಹನ್‌ಗಂಜ್‌ ಬಜಾರ್‌ ಪ್ರದೇಶದಲ್ಲಿ ಇಂದು ಬುಧವಾರ ಟ್ರಕ್‌ ಒಂದು ಕಾರಿಗೆ ಢಿಕ್ಕಿ ಹೊಡೆದ ಅವಘಡದಲ್ಲಿ ಮೂವರು ಮೃತಪಟ್ಟ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಕಾರಿನಲ್ಲಿದ್ದ ಒಟ್ಟು ನಾಲ್ವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಮೂವರು ಕೊನೆಯಸಿರೆಳೆದರು ಎಂದು ಪೊಲೀಸರು ಹೇಳಿದ್ದಾರೆ. 

ಮೃತರನ್ನು ಇನ್ನಷ್ಟೇ ಗುರುತಿಸಬೇಕಾಗಿದೆ. ಅವಘಡದ ಬಗ್ಗೆ ಕೇಸು ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next