Advertisement

12 ಉಗ್ರರ‌ ಬೇಟೆ ಎಚ್ಚರಿಕೆ ಕರೆಗಂಟೆ

07:00 AM Apr 03, 2018 | Team Udayavani |

ಶ್ರೀನಗರ/ಇಸ್ಲಾಮಾಬಾದ್‌: ದಕ್ಷಿಣ ಕಾಶ್ಮೀರದಲ್ಲಿ ಭಾನುವಾರ ಲಷ್ಕರ್‌, ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯ 12 ಉಗ್ರರನ್ನು ಒಂದೇ ದಿನ ಕೊಂದು ಹಾಕಿದ್ದು ಆ ಉಗ್ರ ಸಂಘಟನೆಗಳಿಗೆ ಹಿನ್ನಡೆಯಾಗಿರುವುದರ ಜೊತೆಗೆ ವಿದೇಶಿ ಭಯೋತ್ಪಾದಕರಿಗೆ ಸ್ಥಳೀಯರು ನೀಡುತ್ತಿದ್ದ ಬೆಂಬಲವೂ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂಬ ಮಾತುಗಳು ಕೇಳಿಬಂದಿವೆ.

Advertisement

ಉಗ್ರರ ವಿರುದ್ಧ ಭದ್ರತಾ ಪಡೆಗಳು ಹೋರಾಟ ನಡೆಸುತ್ತಿದ್ದರೂ, ಒಂದು ದಶಕದಿಂದ ಈಚೆಗೆ ಒಂದೇ ದಿನ 12 ಮಂದಿಯನ್ನು ಕೊಂದಿದ್ದು ಇದೇ ಮೊದಲು. ಶೋಪಿಯಾನ್‌, ಅನಂತನಾಗ್‌ನಲ್ಲಿ ಉಗ್ರರ ಕೇಂದ್ರ ಸ್ಥಾನ ವಾಗಿದ್ದು, ಸ್ಥಳೀಯರ ಬೆಂಬಲವಿಲ್ಲದೇ ಇಲ್ಲಿ ಉಗ್ರರು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ. ಭಾನುವಾರದ ಕಾರ್ಯಾಚರಣೆಯು ಸ್ಥಳೀಯರಿಗೆ ಮಾತ್ರವಲ್ಲದೆ, ಬದುಕುಳಿದಿರುವ ಇತರೆ ಉಗ್ರರಿಗೂ ಭೀತಿ ಉಂಟುಮಾಡಿದೆ. ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಳ್ಳು ವವರಿಗೂ ಎಚ್ಚರಿಕೆಯಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆ ಭದ್ರತಾ ಪಡೆಗಳಿಗೆ ಮತ್ತಷ್ಟು ಹಿಡಿತ ಸಾಧಿಸಲು ನೆರವಾಗಲಿದೆ ಎನ್ನು ವುದು ಭದ್ರತಾ ಅಧಿಕಾರಿಯೊಬ್ಬರ ಪ್ರತಿಪಾದನೆಯಾಗಿದೆ. ಏತನ್ಮಧ್ಯೆ, ದಕ್ಷಿಣ ಕಾಶ್ಮೀರದಲ್ಲಿ 12 ಉಗ್ರರನ್ನು ಕೊಂದ ಬಳಿಕ ಕಾಶ್ಮೀರ ಕಣಿವೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರಾಜಧಾನಿ ಶ್ರೀನಗರ ವ್ಯಾಪ್ತಿಗೂ ಅದನ್ನು ವಿಸ್ತರಿಸಲಾಗಿದೆ. 

ಮೆರವಣಿಗೆಗೆ ತಡೆ: ಶೋಪಿಯಾನ್‌ನಲ್ಲಿ ಎನ್‌ಕೌಂಟರ್‌ ವೇಳೆ ನಾಲ್ವರು ನಾಗರಿಕರು ಅಸು ನೀಗಿದ್ದನ್ನು ಖಂಡಿಸಿ ಕಾಶ್ಮೀರ ವ್ಯಾಪಾರಸ್ಥರು ಮತ್ತು ಉತ್ಪಾದಕರ ಒಕ್ಕೂಟದ ಹೆಸರಿನಲ್ಲಿ ವ್ಯಾಪಾರಸ್ಥರು ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಿದ್ದರು. ಶ್ರೀನಗರದ ಲಾಲ್‌ಚೌಕ್‌ನಿಂದ ಮೆರವಣಿಗೆ ಹೊರಟಿರುವಂತೆಯೇ ಅದಕ್ಕೆ ಪೊಲೀಸರು ತಡೆಯೊಡ್ಡಿದ್ದಾರೆ. 

ಪಾಕ್‌ ಪ್ರಧಾನಿ ಅಬ್ಟಾಸಿ ಖಂಡನೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ಕೊಂದು ಹಾಕಿದ ಭಾರತೀಯ ಸೇನೆಯ ಕ್ರಮ ಪೈಶಾಚಿಕ ಕೃತ್ಯ ಎಂದು ಪಾಕಿಸ್ತಾನ ಪ್ರಧಾನಿ ಶಹೀದ್‌ ಕಖಾನ್‌ ಅಬ್ಟಾಸಿ ಟೀಕಿಸಿದ್ದಾರೆ. 
“”ನಾಗರಿಕರ ಮೇಲೆ ಪೆಲೆಟ್‌ ಗನ್‌ ಪ್ರಯೋಗಿಸಿದ್ದನ್ನೂ ಖಂಡಿಸಿರುವ ಅವರು, ಕಾಶ್ಮೀರದಲ್ಲಿ ಪ್ರತಿಭಟನೆಗೂ ಅವಕಾಶ ನಿರಾಕರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಯಥಾ ಸ್ಥಿತಿ ಅಧ್ಯಯನ ನಡೆಸಲು ಅಂತಾರಾಷ್ಟ್ರೀಯ ವೀಕ್ಷಕರ ತಂಡ ಕಳುಹಿಸಬೇಕು. ಅದಕ್ಕೆ ಭಾರತ ಅನುಮತಿ ನೀಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

Advertisement

ಸೇಡು ಖಚಿತ ಎಂದ ಹಫೀಜ್‌
ಶೋಪಿಯಾನ್‌ನಲ್ಲಿ ಉಗ್ರರ ಸದೆ ಬಡಿದಿದ್ದರಿಂದ ವ್ಯಗ್ರಗೊಂಡಿರುವ ಜಮಾತ್‌ ಉದ್‌ ದಾವಾ ಉಗ್ರ ಸಂಘಟನೆ ಮುಖ್ಯಸ್ಥ  ಹಫೀಜ್‌ ಸಯೀದ್‌, ಉಗ್ರರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದಾನೆ. ಈ ಬಗ್ಗೆ ವೀಡಿಯೋ ಬಿಡುಗಡೆ ಮಾಡಿರುವ ಸಯೀದ್‌, ಭಾರತದ ವಿರುದ್ಧ ಯುದ್ಧ ಸಾರುತ್ತೇವೆ ಎಂದಿದ್ದಾನೆ. ಇನ್ನೊಂದೆಡೆ ಭಾರತದಲ್ಲಿನ ಕಾಶ್ಮೀರ ಜನರ ಬಗ್ಗೆ ಪಾಕ್‌ ಸರ್ಕಾರ ಕಾಳಜಿ ಹೊಂದಿಲ್ಲ ಎಂದೂ ಆರೋಪಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next