ಕೊಚ್ಚಿ: ಮದುವೆ ಸಮಾರಂಭದಲ್ಲಿ ಊಟ ಮಾಡುವ ವೇಳೆ ಹೆಚ್ಚುವರಿಯಾಗಿ ಹಪ್ಪಳ ಕೇಳಿದ್ದಕ್ಕೆ ಭಾರಿ ಗಲಾಟೆ ನಡೆದಿದ್ದು, ಮೂವರು ಗಾಯಗೊಂಡಿರುವ ಘಟನೆ ಕೇರಳದ ಹರಿಪಾದದಲ್ಲಿ ನಡೆದಿದೆ.
ಮದುವೆ ಹಾಲ್ ಮಾಲೀಕ ಮುರಳೀಧರನ್ (74) ಮತ್ತು ಅತಿಥಿಗಳಾದ ಜೋಹಾನ್ (21) ಮತ್ತು ಹರಿ (21) ಗಾಯಗೊಂಡವರು.
ಘಟನೆಯ ಪರಿಣಾಮ ಮದುವೆ ಹಾಲ್‌ನಲ್ಲಿ ಟೇಬಲ್ಸ್, ಕುರ್ಚಿಗಳು, ಪಿಠೋಪಕರಣಗಳಿಗೆ ಹಾನಿಯಾಗಿದ್ದು, ಅಂದಾಜು 1.5 ಲಕ್ಷ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ವಿವರ: ಈ ಘಟನೆ ಭಾನುವಾರ ನಡೆದಿದ್ದು, ಊಟದ ವೇಳೆ ವರನ ಕಡೆಯವರು ಎರಡನೇ ಬಾರಿಗೆ ಹಪ್ಪಳ ಕೇಳಿದ್ದಾರೆ. ಆಗ ಬಡಿಸುವವರು ಹಪ್ಪಳ ಕೊಡಲು ನಿರಾಕರಿಸಿದ್ದಾರೆ. ಇದು ಎರಡು ಗುಂಪುಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ವಾಗ್ವಾದ ಹೊಡೆದಾಟಕ್ಕೂ ತಿರುಗಿ, ಕಲ್ಯಾಣ ಮಂಟಪದಲ್ಲಿ ಎರಡು ಗುಂಪಿನವರು ಬಡಿದಾಡಿಕೊಂಡಿದ್ದಾರೆ.
ಇದನ್ನೂ ಓದಿ:ನಿವೃತ್ತಿ ಘೋಷಿಸಿದ ನ್ಯೂಜಿಲ್ಯಾಂಡ್ ನ ಖ್ಯಾತ ಆಲ್ ರೌಂಡರ್ ಕಾಲಿನ್ ಡಿ ಗ್ರ್ಯಾಂಡ್‌ಹೋಮ್
ಘಟನೆ ಕರೀಲಂಕುಳಂಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು 15 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಕಾರಣಕರ್ತರಾದವನ್ನು ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಪತ್ತೆಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.