Advertisement

3ರ ಹಸುಳೆಯ ಕೊಲೆ: ಹೆತ್ತವರ ಸಹಿತ ಮೂವರು ಅಪರಾಧಿಗಳು: ನ್ಯಾಯಾಲಯ

11:55 AM Aug 25, 2018 | udayavani editorial |

ಮುಜಫ‌ರನಗರ, ಉತ್ತರ ಪ್ರದೇಶ : ಕಳೆದ ಮೇ 2ರಂದು ಜಿಲ್ಲೆಯ ಭೋಪಾ ಪೊಲೀಸ್‌ ಠಾಣೆ ವ್ಯಾಪ್ತಿಗೊಳಪಡುವ ನಗ್ಲಾ ಬಜುರ್ಗ್‌ ಗ್ರಾಮದಲ್ಲಿ  ಮೂರು ವರ್ಷ ಪ್ರಾಯದ ಬಾಲಕಿಯನ್ನು ಕತ್ತು ಸೀಳಿ ಅಮಾನುಷವಾಗಿ ಕೊಲ್ಲಲಾದ ಪ್ರಕರಣದಲ್ಲಿ ಇಲ್ಲಿನ ನ್ಯಾಯಾಲಯ ಹೆತ್ತವರ ಸಹಿತ ಮೂವರನ್ನು ಅಪರಾಧಿಗಳೆಂದು ಘೋಷಿಸಿದೆ. 

Advertisement

ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಧೀಶ ಅಜಯ್‌ ಕುಮಾರ್‌ ಅವರು ಈ ಪ್ರಕರಣದಲ್ಲಿ ತೀರ್ಪು ನೀಡಿ ಕೊಲೆಗೀಡಾದ ಮೂರು ವರ್ಷ ಪ್ರಾಯದ ಹಸುಳೆ ಲಿಬಾ ಎಂಬಾಕೆಯ ತಂದೆ ಶಮೀಮ್‌, ಆತನ ಪತ್ನಿ ಖುಷ್‌ನಸೀಬ್‌ ಮತ್ತು ಅವರ ಸ್ನೇಹಿತ ಝಾಹೀರ್‌ ಅಬ್ಟಾಸ್‌ ನನ್ನು ಐಪಿಸಿ ಸೆ.302 (ಕೊಲೆ), 120ಬಿ (ಕ್ರಿಮಿನಲ್‌ ಸಂಚು) ಪ್ರಕಾರ ಅಪರಾಧಿಗಳೆಂದು ಘೋಷಿಸಿದರು. 

ಈ ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಆ.28ಕ್ಕೆ ಕಾಯ್ದಿರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next