ಪಣಜಿ: ಗೋವಾ ರಾಜ್ಯದ ಸುಮಾರು 37,000 ಬಿಪಿಎಲ್ ಕುಟುಂಬಗಳಿಗೆ ಪ್ರಸಕ್ತ ತಿಂಗಳಿಂದ ವರ್ಷಕ್ಕೆ ಮೂರು ಉಚಿತ ಸಿಲಿಂಡರ್ ಯೋಜನೆಯ ಅಡಿಯಲ್ಲಿ ಉಚಿತ ಸಿಲಿಂಡರ್ ಲಭಿಸಲಿದೆ ಎಂದು ಸಚಿವ ಗೋವಿಂದ ಗಾವಡೆ ಮಾಹಿತಿ ನೀಡಿದ್ದಾರೆ.
ಮಡಗಾಂವ್ ನಲ್ಲಿ ಯುನೈಟೆಡ್ ಟ್ರೈಬಲ್ ಅಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಗಾವಡೆ ಮಾತನಾಡಿ, ವಾರ್ಷಿಕವಾಗಿ ಉಚಿತ ಮೂರು ಸಿಲಿಂಡರ್ ನೀಡುವ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದ್ದು, ವಾರ್ಷಿಕವಾಗಿ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಎಲ್ಲ ಕುಟುಂಬಗಳಿಗೆ ಈ ಸೌಲಭ್ಯ ಕಲ್ಪಿಸಲು ಸರ್ಕಾರ ಉದ್ದೇಶಿಸಿದೆ ಎಂಬ ಮಾಹಿತಿ ನೀಡಿದರು.
ಮೊದಲ ಹಂತದಲ್ಲಿ ಈ ಯೋಜನೆಯ ಅಡಿಯಲ್ಲಿ ಸುಮಾರು 37,000 ಬಿಪಿಎಲ್ ಕುಟುಂಬಗಳು ಲಾಭ ಪಡೆದುಕೊಳ್ಳಲಿದ್ದಾರೆ. ಎರಡನೇಯ ಹಂತದಲ್ಲಿ ವಾರ್ಷಿಕವಾಗಿ 5 ಲಕ್ಷ ಗಳಿಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳನ್ನು ಈ ಯೋಜನೆಯ ಅಡಿ ತರಲು ಸರ್ಕಾರ ಯೋಜಿಸಿದೆ ಎಂದು ಹೇಳಿದರು.
ಗೋವಾ ರಾಜ್ಯದ ಸುಮಾರು 37,000 ಬಿಪಿಎಲ್ ಕುಟುಂಬಗಳಿಗೆ ಪ್ರಸಕ್ತ ತಿಂಗಳಿಂದ ವರ್ಷಕ್ಕೆ ಮೂರು ಉಚಿತ ಸಿಲಿಂಡರ್ ಯೋಜನೆಯ ಅಡಿಯಲ್ಲಿ ಉಚಿತ ಸಿಲಿಂಡರ್ ಲಭಿಸಲಿದೆ ಎಂದು ಸಚಿವ ಗೋವಿಂದ ಗಾವಡೆ ಮಾಹಿತಿ ನೀಡಿದ್ದಾರೆ.