Advertisement

ಮೂವರು ರೈತರ ಆತ್ಮಹತ್ಯೆ

06:00 AM Jul 07, 2018 | |

ಸಂತೆಮರಹಳ್ಳಿ/ಜಮಖಂಡಿ/ಚಿತ್ರದುರ್ಗ: ಸಿಎಂ ಕುಮಾರಸ್ವಾಮಿ ಸುಸ್ತಿ ಸಾಲಮನ್ನಾ ಘೋಷಣೆ ಮಾಡಿದ ಬೆನ್ನಲ್ಲೇ ಸಾಲಬಾಧೆ ತಾಳಲಾರದೆ  ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ಇಬ್ಬರು ತಮಗೆ ಸಾಲ ಮನ್ನಾ ಆಗಿಲ್ಲವೆಂಬ ಕಾರಣದಿಂದಲೇ ನೇಣಿಗೆ 
ಕೊರಳೊಡ್ಡಿದ್ದಾರೆ.

Advertisement

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಪಾಂಡಪ್ಪ ರಾಮಪ್ಪ ಅಂಬಿ (55) ತನ್ನ ಹೊಲದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 56 ಸಾವಿರ, ಬಿನ್‌ ಶೇತ್ಕಿ 50 ಸಾವಿರ, ಸಿಂಡಿ 
ಕೇಟ್‌ ಬ್ಯಾಂಕ್‌ನಲ್ಲಿ 1.15 ಲಕ್ಷ ರೂ. ಸಾಲ ಮಾಡಿದ್ದ. ರೈತ ಪಾಂಡಪ್ಪನಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ. ಬಜೆಟ್‌ನಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಆಗಲಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಮರಾಜನಗರ ಜಿಲ್ಲೆ ಸಂತೆಮರಹಳ್ಳಿ ಸಮೀಪದ ದೇಮಹಳ್ಳಿಯಲ್ಲಿ ಚಿಕ್ಕಸ್ವಾಮಿ ಉರುಫ್ ಬೆಳ್ಳಪ್ಪ (45) ಟಿವಿಯಲ್ಲಿ ರೈತರ ಸಾಲ ಮನ್ನಾ ಮಾಡಿರುವುದಕ್ಕೆ ರಾಜ್ಯ ಸರ್ಕಾರ ನಿಬಂಧನೆಗಳು ಹಾಕಿರುವುದನ್ನು ನೋಡಿದ್ದರು. ಇದರಿಂದ ತಮ್ಮ ಸಾಲ ಮನ್ನಾ ಆಗುವುದಿಲ್ಲ ಎಂದು
ಮನನೊಂದು ಬೆಳಗಿನ ಜಾವ ಪಂಚೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಅವರ ತಂದೆ, ತಾಯಿ, ಹೆಂಡತಿ ನೋಡಿದ್ದು, ಕೂಡಲೇ ಮೈಸೂರಿನ ಖಾಸಗಿ ಆಸ್ಪತ್ರಗೆ ಸೇರಿಸಿದರೂ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ತಹಶೀಲಾರ್‌ ಪುರಂದರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕುದೇರು ಠಾಣೆಯಲ್ಲಿ ದೂರು ದಾಖಲಾಗಿದೆ. ಇವರು 2 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿ ದ್ದರು. ಕಳೆದ 3 ವರ್ಷಗಳಿಂದ ಸತತ ಬರಗಾಲದಿಂದ ತತ್ತರಿಸಿದ್ದ ಇವರು ಬೆಳೆನಷ್ಟ ಅನುಭವಿಸಿದ್ದರು. ದೇಮಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 40 ಸಾವಿರ ರೂ., ಉಮ್ಮತ್ತೂರು ಕಾವೇರಿ ಗ್ರಾಮೀಣ ಬ್ಯಾಂಕಿನಿಂದ 45 ಸಾವಿರ ರೂ. ಸೇರಿದಂತೆ ಖಾಸಗಿಯಾಗಿಯೂ ಸಾಲ ಪಡೆದಿದ್ದರು. ಒಟ್ಟು 2 ಲಕ್ಷ ರೂ. ಸಾಲ ಪಡೆದು ವ್ಯವಸಾಯಕ್ಕೆ ಬಳಸಿಕೊಂಡಿದ್ದರು. ಆದರೆ ಈ ಬಾರಿ ಬಾಳೆ, ಉದ್ದಿನ ಫ‌ಸಲು ನಷ್ಟವಾಗಿತ್ತು. 

ಬೆಳೆ ನಷ್ಟ: ಸಾಲ ಮಾಡಿದ್ದ ರೈತ ಆತ್ಮಹತ್ಯೆ: ಬೆಳೆ ನಷ್ಟವಾದ ಕಾರಣ ಸಾಲಭಾದೆಯಿಂದ ಬೇಸತ್ತು ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ
ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಸಾಸಲಹಟ್ಟಿ ಗ್ರಾಮದಲ್ಲಿ ನಡೆದಿದೆ. ಈಶ (24) ಆತ್ಮಹತ್ಯೆ ಮಾಡಿಕೊಂಡ ರೈತ. 4 ಎಕರೆ
ಜಮೀನಿನಲ್ಲಿ ಸೇವಂತಿಗೆ, ಈರುಳ್ಳಿ, ಬದನೆಕಾಯಿ ಬೆಳೆಗಳನ್ನು ಬೆಳೆದಿದ್ದಾನೆ. ಸರಿಯಾದ ಸಮಯಕ್ಕೆ ಮಳೆ ಬಾರದೆ ಬೆಳೆಗಳು ಸರಿಯಾಗಿ ಬೆಳೆದಿಲ್ಲ. ಕೃಷಿ ಕಾರ್ಯಕ್ಕಾಗಿ ಚಿತ್ರದುರ್ಗ ಡಿಸಿಸಿ ಬ್ಯಾಂಕ್‌ನಲ್ಲಿ 38,000 ರೂ., ಶ್ರೀರಂಗ ಫೈನಾನ್ಸ್‌ನಲ್ಲಿ 30,000 ರೂ. ಹಾಗೂ ಖಾಸಗಿಯವರ ಬಳಿ 50,000 ರೂ. ಸಾಲ ಮಾಡಿದ್ದರು ಎನ್ನಲಾಗಿದೆ. ಬೆಳೆಹಾಳಾಗಿದ್ದಕ್ಕೆ ನೊಂದು ತಮ್ಮ ಜಮೀನಿನ ಪಕ್ಕದಲ್ಲೇ ವಿಷ ಸೇವಿಸಿದ್ದಾರೆ. ಇದನ್ನು ಕಂಡ ಅಕ್ಕಪಕ್ಕದ ಹೊಲದಲ್ಲಿದ್ದ ರೈತರು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ತುರುವನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next