Advertisement

ಎರಡು ತಿಂಗಳಲ್ಲಿ ಎಚ್‌1ಎನ್‌1 ಗೆ 3 ಬಲಿ

11:15 AM Feb 27, 2020 | sudhir |

ಬೆಂಗಳೂರು: ಕಳೆದ 10 ವರ್ಷದಲ್ಲಿ ರಾಜ್ಯಾದ್ಯಂತ ಎಚ್‌1ಎನ್‌1 (ಹಂದಿಜ್ವರ)ಕ್ಕೆ ಬರೋಬರೀ 531 ಜನರು ಮೃತಪಟ್ಟಿದ್ದು, ಎರಡು ವರ್ಷದಿಂದ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸಕ್ತ ವರ್ಷ ಈವರೆಗೆ ದಾವಣಿಗೆರೆಯಲ್ಲಿ 2, ತುಮಕೂರಿನಲ್ಲಿ 1 ಮೃತಪಟ್ಟಿದ್ದಾರೆ.

Advertisement

ಜನವರಿಯಿಂದ ಫೆ.25ರವರೆಗೆ ರಾಜ್ಯಾದ್ಯಂತ 1820 ಜನರನ್ನು ಪರೀಕ್ಷಿಸಿದ್ದು, 192 ಮಂದಿಗೆ ಹಂದಿಜ್ವರ ಸೋಂಕು ಇರುವುದು ದೃಢಪಟ್ಟಿದೆ. ಜನವರಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಫೆ.24ರಂದು ದಾವಣಿಗೆರೆಯಲ್ಲಿ ಮತ್ತೂಬ್ಬರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಶ್ವಾಸಕೋಶದ ಸೋಂಕು, ನೆಗಡಿ, ಜ್ವರ, ಉಸಿರಾಟದ ತೊಂದರೆ, ಮೈ-ಕೈ ನೋವು, ತಲೆ ನೋವು, ಬಳಲಿಕೆ, ಕೆಮ್ಮು ಮತ್ತು ವಾಂತಿ ಈ ಲಕ್ಷಣಗಳು ಕಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

85 ಸಾವಿರ ಮಂದಿಗೆ ಪರೀಕ್ಷೆ:
2010 ರಿಂದ 2020 ಫೆ. 25ರ ವರೆಗೆ 30 ಜಿಲ್ಲೆಗಳಲ್ಲಿ 85263 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 14853 ಸೋಕು ಇರುವುದು ಕಂಡು ಬಂದಿದೆ. 2010ರಲ್ಲಿ 120, 2011ರಲ್ಲಿ 16, 2012ರಲ್ಲಿ 48, 2013ರಲ್ಲಿ 19, 2014ರಲ್ಲಿ 34, 2015ರಲ್ಲಿ 94, 2016ರಲ್ಲಿ 0, 2017ರಲ್ಲಿ 15, 2018ರಲ್ಲಿ 87, 2019ರಲ್ಲಿ 96, 2020 ಫೆ.24ರವರೆಗೆ 3 ಸೇರಿ ಒಟ್ಟು 532 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿರುವ ಅಂಕಿ- ಅಂಶದಿಂದ ಬಯಲಾಗಿದೆ.

ಪ್ರತಿದಿನ 150ಕ್ಕೂ ಅಧಿಕ ಕರೆಗಳು
ಕೊರೊನಾ ಆತಂಕ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಹಾಯವಾಣಿಗೆ (104) ಪ್ರತಿ ದಿನ 150ಕ್ಕೂ ಕರೆಗಳು ಬರುತ್ತಿದ್ದು, ರಾಜ್ಯದ ನಾನಾ ಭಾಗಗಳಿಂದ ಸಹಾಯವಾಣಿಗೆ ಜನರು ಕರೆ ಮಾಡಿ ರೋಗ ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 33,377 ಮಂದಿಯನ್ನು ಥರ್ಮಲ್‌ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿದೆ. ಅದರಲ್ಲಿ ಯಾರಲ್ಲೂ ಸೋಂಕು ಕಾಣಿಸಿಕೊಂಡಿಲ್ಲ. ಈವರೆಗೆ 198 ಮಂದಿಯ ರಕ್ತದ ಮಾದರಿಗಳ ಪರೀûಾ ವರದಿ ಬಂದಿದ್ದು, ಯಾರಲ್ಲೂ ವೈರಸ್‌ ಪತ್ತೆಯಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next