Advertisement

ಬಳವಡಗಿ ಜಲ ಸಂಕಷ್ಟ ನಿವಾರಣೆಗೆ 3 ಕೋಟಿ

02:56 PM Apr 20, 2022 | Team Udayavani |

ವಾಡಿ: ಕಲ್ಲು ಗಣಿಗಳಿಂದ ನೀರು ಹೊತ್ತು ಅಕ್ಷರಶಃ ಜಲ ಸಂಕಷ್ಟ ಅನುಭವಿಸುತ್ತಿರುವ ಬಳವಡಗಿ ಗ್ರಾಮಸ್ಥರ ನೀರಿನ ಬವಣೆ ನೀಗಿಸಲು ಶಾಸಕ ಪ್ರಿಯಾಂಕ್‌ ಖರ್ಗೆ 2.49 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಮನೆ-ಮನೆಗೆ ನಳ ಸಂಪರ್ಕ ಜೋಡಣೆ ಕಾಮಗಾರಿಗೆ ಚಾಲನೆ ದೊರೆತಿದೆ.

Advertisement

ಬಳವಡಗಿ ಗ್ರಾಮದಲ್ಲಿ ಜಲಜೀವನ ಮಿಷನ್‌ ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯ್ಯದ್‌ ಮಹೆಮೂದ್‌ ಸಾಹೇಬ, ಕುಡಿಯುವ ನೀರಿನ ಹಾಹಾಕಾರವಿದ್ದ ಚಿತ್ತಾಪುರ ಮತಕ್ಷೇತ್ರದಲ್ಲಿ ಪ್ರಿಯಾಂಕ್‌ ಖರ್ಗೆ ಶಾಸಕರಾದ ಬಳಿಕ ನೀರಿನ ಕೊರತೆ ನೀಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಸದ್ಯ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜೆಜೆಎಂ ಅನುದಾನದಡಿ ಬಳವಡಗಿ ಗ್ರಾಮಕ್ಕೆ 249.40ಲಕ್ಷ ರೂ., ಎಸ್‌ಡಿಪಿ ಅನುದಾನದಲ್ಲಿ ಸುಗೂರ (ಎನ್‌) ಗ್ರಾಮಕ್ಕೆ 10ಲಕ್ಷ ರೂ. ಹಾಗೂ ಸನ್ನತಿ ಗ್ರಾಮಕ್ಕೆ 40ಲಕ್ಷ ರೂ., ರಾಂಪೂರಹಳ್ಳಿ ಹಾಗೂ ತರ್ಕಸ್‌ಪೇಟೆಗೆ 36.89ಲಕ್ಷ ರೂ. ಮಂಜೂರು ಮಾಡಿದ್ದಾರೆ ಎಂದರು.

ಚಿತ್ತಾಪುರ ಮತಕ್ಷೇತ್ರದಲ್ಲಿ ಭೀಮಾ ಮತ್ತು ಕಾಗಿಣಾ ಮಹಾ ನದಿಗಳು ಹರಿಯುತ್ತಿವೆ. ಆದರೂ ಹಲವು ಗ್ರಾಮಗಳು ಸೇರಿದಂತೆ ಚಿತ್ತಾಪುರ, ವಾಡಿ ನಗರಗಳ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿಯಿತ್ತು. ಶಾಸಕ ಖರ್ಗೆ ಅವರ ಕ್ರಿಯಾಶೀಲ ನಡೆಯಿಂದ ಹಾಗೂ ಜನಪರ ಕಾಳಜಿಯಿಂದಾಗಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿದೆ ಎಂದು ಹೇಳಿದರು.

ಯುವ ಕಾಂಗ್ರೆಸ್‌ ಅಧ್ಯಕ್ಷ ಶರಣು ವಾರದ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಸಜ್ಜನ್‌, ಸನ್ನತಿ ಗ್ರಾಪಂ ಅಧ್ಯಕ್ಷ ಸುಭಾಷ, ಗುರುಗೌಡ ಇಟಗಿ, ಭೀಮರಾಯ, ಸಲೀಮಸಾಬ್‌ ಮುಗಳ್ಳಿ, ರಾಮರೆಡ್ಡಿ ಕೊಳ್ಳಿ, ಮಲ್ಲಿನಾಥ ಪಾಟೀಲ ಸನ್ನತಿ, ದೇವೇಗೌಡ ತೋಟದ, ಪರ್ವತರೆಡ್ಡಿ ಪಾಟೀಲ, ಮಲ್ಲಿಕಾರ್ಜುನ ಮದನಕರ, ಗೋಪಾಲ ಜಾಧವ, ಮಹ್ಮದ್‌ ಕರೀಮ್‌ ಹಾಗೂ ಮತ್ತಿತರರು ಈ ಸಂದರ್ಭದಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next