ಲಕ್ನೋ: ಆಟೋ ರಿಕ್ಷಾ (ತಳ್ಳುವ ಆಟೋರಿಕ್ಷಾ) ಚಾಲಕನಿಗೆ 3 ಕೋಟಿ ರೂ. ತೆರಿಗೆ ಕಟ್ಟುವಂತೆ ಕಂದಾಯ ಇಲಾಖೆಯಿಂದ ನೋಟಿಸ್ ಬಂದಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ಮಥುರಾದ ಬಕಲ್ಪುರದ ಅಮರ್ ಕಾಲೋನಿಯ ನಿವಾಸಿ, ಪ್ರತಾಪ್ ಸಿಂಗ್ ತಳ್ಳುವ ಆಟೋರಿಕ್ಷಾದ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಆತನಿಗೆ ಇತ್ತೀಚೆಗೆ ಕಂದಾಯ ತೆರಿಗೆ ಇಲಾಖೆಯಿಂದ ಕರೆ ಬಂದಿದೆ.
“ನೀವು 3,47,54,896 ರೂ. ತೆರಿಗೆ ಕಟ್ಟಬೇಕು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತನ ಹೆಸರಿನಲ್ಲಿ ಜಿಎಸ್‌ಟಿ ತೆರೆದು, ಉದ್ಯೋಗವೊಂದನ್ನು ನಡೆಸಲಾಗುತ್ತಿದ್ದು, 2018-19ರಲ್ಲಿ ಅದರ ಆದಾಯ 43,44,36,201 ರೂಪಾಯಿ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಗಾಬರಿಗೊಂಡ ಪ್ರತಾಪ್ ಸಿಂಗ್, ಈ ವಿಚಾರದಲ್ಲಿ ಪೊಲೀಸ್ ದೂರು ದಾಖಲಿಸಿದ್ದಾನೆ. ಆತ ಮಾರ್ಚ್ 15ರಂದು ಬಕಲ್ಪುರದ ಸುವಿಧಾ ಕೇಂದ್ರದಲ್ಲಿ ಪ್ಯಾನ್ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಸಿದ್ದು, ಅದಕ್ಕೆಂದು ಬ್ಯಾಂಕ್ ಮಾಹಿತಿಯನ್ನು ಸಲ್ಲಿಸಿದ್ದ. 3 ತಿಂಗಳ ಬಳಿಕ ಸಂಜಯ್ ಸಿಂಗ್ ಎನ್ನುವವರಿಂದ ಪ್ರತಾಪ್‌ನ ಪ್ಯಾನ್ ಕಾರ್ಡ್‌ನ ಕಲರ್ ಫೋಟೋಕಾಪಿಯನ್ನು ಅವನಿಗೆ ಕಳುಹಿಸಿಕೊಟ್ಟಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ:ಉ.ಪ್ರ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಲಕ್ಷ ರೂ.ವರೆಗಿನ ಚಿಕಿತ್ಸೆ ಉಚಿತ!