Advertisement

ಬ್ರಿಟನ್‌ಗೆ 70 ಅಫ್ಘಾನಿಗರ ಕಳ್ಳಸಾಗಣೆ:3 ಬ್ರಿಟಿಷ್‌ ಸಿಕ್ಖರಿಗೆ ಜೈಲು

04:36 PM Jul 15, 2017 | Team Udayavani |

ಲಂಡನ್‌ : ಆರು ಲಕ್ಷ  ಪೌಂಡ್‌ ಹಗರಣದಲ್ಲಿ  ಬ್ರಿಟನ್‌ ಪಾಸ್‌ ಪೋರ್ಟ್‌ಗಳನ್ನು ದುರುಪಯೋಗಿಸಿ ಕೊಂಡು ಸುಮಾರು 70 ಮಂದಿ ಕಾನೂನು ಬಾಹಿರ ಅಫ್ಘಾನ್‌ ವಲಸಿಗರು ಬ್ರಿಟನ್‌ ಒಳಗೆ ನುಸುಳುವಂತೆ ಮಾಡಿದ ಅಪರಾಧಕ್ಕಾಗಿ ಮೂವರು ಬ್ರಿಟಿಷ್‌ ಸಿಕ್ಖರಿಗೆ ಒಟ್ಟು 19 ವರ್ಷಗಳ ಜೈಲು ಶಿಕ್ಷೆಯಾಗಿದೆ. 

Advertisement

ತಮ್ಮ 40ರ ಹರೆಯದಲ್ಲಿರುವ ಸೋದರ ಸಂಬಂಧಿಗಳಾದ ದಲ್‌ಜಿತ್‌ ಕಪೂರ್‌ ಮತ್ತು ಹರ್‌ಮಿತ್‌ ಕಪೂರ್‌ ಹಾಗೂ ದವೀಂದರ್‌ ಚಾವ್ಲಾ ಅವರು ಕಳೆದ ವಾರ ಇನ್ನರ್‌ ಲಂಡನ್‌ ಕ್ರೌನ್‌ ಕೋರ್ಟಿನಲ್ಲಿ ತಾವು ಎಸಗಿರುವ ಅಪರಾಧ ಕೃತ್ಯವನ್ನು ಒಪ್ಪಿಕೊಂಡರು. 

ನ್ಯಾಯಾಧೀಶ ನೈಗೆಲ್‌ ಸೀದ್‌ ಅವರು ಅಪರಾಧಿ ದಲ್‌ಜಿತ್‌ಗೆ 7 ವರ್ಷ ಜೈಲು, ಹರ್‌ಮೀತ್‌ಗೆ ನಾಲ್ಕೂವರೆ ವರ್ಷ ಮತ್ತು ಇದೇ ವಿಸ್ತರಿತ ಕುಟುಂಬದ ಸದಸ್ಯನಾಗಿರುವ ಚಾವ್ಲಾಗೆ ಏಳೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next