ಭುವನೇಶ್ವರ್: ವಿಧಾನಸಭೆ ಅಧಿವೇಶನದ ವೇಳೆ ವಿಧಾನ ಸಭಾಧ್ಯಕ್ಷರಿಗೆ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ಮೂವರು ಬಿಜೆಪಿ ಶಾಸಕರನ್ನು ಅಮಾನತುಗೊಳಿಸಲಾಗಿದೆ.
ಒಡಿಶಾ ವಿಧಾನಸಭಾಧ್ಯಕ್ಷರಿಗೆ ಸೂರ್ಯ ನಾರಾಯಣ ಪತ್ರೋ ಅವರು ಅಧಿವೇಶನದ ಅವಧಿಯವರೆಗೆ ಮೂವರು ಶಾಸಕರನ್ನು ಅಮಾನತು ಮಾಡಿದ್ದಾರೆ. ಬಿಜೆಪಿ ಜಯ ನಾರಾಯಣ ಮಿಶ್ರಾ, ಮೋಹನ್ ಚರನ್ ಮಾಜ್ಹಿ ಮತ್ತು ಬಿಶ್ನು ಸೇಥಿ ಅವರನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ:ಡಿ. ಸುಧಾಕರ್‌ಗೆ ಸಿ.ಡಿ. ಕಂಟಕ : ಯುವತಿ ಜತೆ ಮಾತು ತನಿಖೆಯಲ್ಲಿ ದೃಢ
ಶನಿವಾರ ನಡೆದ ವಿಧಾನಸಭೆ ಕಲಾಪದಲ್ಲಿ ನಡೆದ ಗಲಭೆಯಲ್ಲಿ ಈ ಶಾಸಕರು ವಿಧಾನಸಭೆ ಸ್ಪೀಕರ್ ಗೆ ಚಪ್ಪಲಿ ಎಸೆದಿದ್ದರು.
“ನಾನು ಸ್ಪೀಕರ್ ಮೇಲೆ ನಿಖರವಾಗಿ ಎಸೆದದ್ದು ನನಗೆ ತಿಳಿದಿಲ್ಲ, ಆದರೆ ನಾನು ಯಾವುದೇ ತಪ್ಪು ಮಾಡಿಲ್ಲ. ಸ್ಪೀಕರ್ ಈ ರೀತಿಯ ವರ್ತನೆಗೆ ಅರ್ಹರು” ಎಂದು ಶಾಸಕ ಜಯನಾರಾಯಣ್ ಮಿಶ್ರಾ ಹೇಳಿದರು.
ಇದನ್ನೂ ಓದಿ: 24 ಗಂಟೆಗಳಲ್ಲಿ 89 ಸಾವಿರ ಮಂದಿಗೆ ಸೋಂಕು : ಪುಣೆಯಲ್ಲಿ ರಾತ್ರಿ ಕರ್ಫ್ಯೂ ಜಾರಿ