Advertisement

ಉಡುಪಿ ಜಿಲ್ಲಾ ಪೊಲೀಸರ ಕಾರ್ಯಾಚರಣೆ : 2.66 ಲಕ್ಷ ಮೌಲ್ಯದ 8 ಕೆ.ಜಿ ಗಾಂಜಾ ವಶ, ಮೂವರ ಬಂಧನ

11:34 PM Feb 04, 2021 | Team Udayavani |

ಉಡುಪಿ : ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಆರೋಪಿಗಳಿಂದ 2.66 ಲಕ್ಷ ಮೌಲ್ಯದ 8 ಕೆ.ಜಿ ಗಾಂಜಾ ವಶಪಡಿಸಿಕೊಂಡ ಘಟನೆ ಮಣಿಪಾಲದ ಶೀಂಬ್ರಾ ಸೇತುವೆ ಬಳಿ ಗುರುವಾರ ನಡೆದಿದೆ.

Advertisement

ಬಂಧಿತರನ್ನು ಮಹಾರಾಷ್ಟ್ರ ಮೂಲದ ಗೌತಮ್‌‌ ರಾಜು ಶಿಮುಂಗೆ, ಪಂಜಾಬ್ ಮೂಲದ ಜೆಸ್ವಿಂದರ್ ಸಿಂಗ್ ಹಾಗೂ ಬ್ರಹ್ಮಾವರ ಕೊಳಲಗಿರಿಯ ಕೃಷ್ಣ ಜಲಗಾರ್ ಎನ್ನಲಾಗಿದೆ.

ಮಹಾರಾಷ್ಟ್ರದಿಂದ ಮಣಿಪಾಲಕ್ಕೆ ಗಾಂಜಾ ತಂದು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಪಡೆದ ಜಿಲ್ಲಾ ಪೊಲೀಸರು ಮಣಿಪಾಲ ಬಳಿಯ ಶೀಂಬ್ರಾ ಸೇತುವೆಯ ಬಳಿ ರಿಕ್ಷಾದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಮೆಹುಲ್‌ ಚೋಸ್ಕಿಯ 14 ಕೋಟಿ ಆಸ್ತಿ ಮುಟ್ಟುಗೋಲು : ವಿಶೇಷ ಕೋರ್ಟ್‌ ಆದೇಶ

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ಹಾಗೂ ಅಡಿಷನಲ್ ಎಸ್.ಪಿ ಕುಮಾರ ಚಂದ್ರ ಹಾಗೂ ಸುಧಾಕರ ನಾಯಕ್‌ ಡಿ.ವೈ.ಎಸ್.ಪಿ ಉಡುಪಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್.ಎಂ ಗೌಡ , ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಣಿ ಹಾಗೂ ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂಧಿಗಳಾದ ಪ್ರೊಬೇಶನರಿ ಪಿ.ಎಸ್.ಐ ದೇವರಾಜ್ ಸಿದ್ದಣ್ಣ ಬಿರಾದಾರ್ ಮತ್ತು ಅಮೀನ್‌ಸಾಬ್‌ ಮೌಲಾಸಾಬ್ ಅತ್ತಾರ್, ಎ.ಎಸ್.ಐ ಶೈಲೇಶ್, ಹೆಚ್.ಸಿಗಳಾದ ದಯಾಕರ್ ಪ್ರಸಾದ್, ವಿಶ್ವಜಿತ್ , ನವೀನ್, ಅಬ್ದುಲ್ ರಜಾಕ್ ಪಿ.ಸಿ ಸಂತೋಷ್ ಹೆಚ್.ಟಿ, ರೇವಣಸಿದ್ದಪ್ಪ, ಲೊಕೇಶ್ ಮತ್ತು ಆದರ್ಶ , ಬೈಂದೂರು ವೃತ್ತದ ಸಿಬ್ಬಂಧಿಗಳಾದ ಚಂದ್ರ, ಅಶೋಕ, ನವೀನ್ ಮತ್ತು ಗುರು ಪ್ರಸಾದ್ ರವರು ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next