Advertisement

ಮುಂಗಾರಿನಲ್ಲಿ 3.92 ಲಕ್ಷ  ಹೆಕ್ಟೆರ್‌ ಬಿತ್ತನೆ ಗುರಿ

08:56 PM May 27, 2021 | Team Udayavani |

ಯಾದಗಿರಿ: ಪ್ರಸ್ತುತ ಮುಂಗಾರು ಪೂರ್ವದಲ್ಲಿಯೇ ಒಂದೆರಡು ಮಳೆ ಸುರಿದಿರುವುದು ರೈತರ ಜಮೀನು ಹದಗೊಳಿಸಲು ಮುಂದಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಕೆಲವು ಕಡೆ ರೈತರು ಜಮೀನು ಹದ ಮಾಡುವಲ್ಲಿ ತೊಡಗಿದರೆ ಇನ್ನು ಕೆಲ ರೈತರು ಯಂತ್ರೋಪಕರಣ ಬಳಸಿ ಬಿತ್ತನೆಗೆ ಸಿದ್ಧತೆ ನಡೆಸುತ್ತಿದ್ದಾರೆ.

Advertisement

ಜಿಲ್ಲೆಯಲ್ಲಿ 3,92,799 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು, ಅದರಲ್ಲಿ ಪ್ರಮುಖವಾಗಿ ಹತ್ತಿ 1,56,467, ಭತ್ತ 8,700 ಹೆಕ್ಟೇರ್‌, ತೊಗರಿ 1,10,890 ಹೆಕ್ಟೇರ್‌, ಹೆಸರು 22,500 ಹೆಕ್ಟೇರ್‌, ಸಜ್ಜೆ 10,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿಯಿದೆ. ಕೃಷಿ ಇಲಾಖೆಯೂ ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಮುಂಗಾರು ಹಂಗಾಮಿಗೆ ಬೇಕಾಗುವ ಬಿತ್ತನೆ ಬೀಜದ ಸಿದ್ದತೆ ಮಾಡಿಕೊಂಡಿದ್ದು, ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ 3,870 ಕ್ವಿಂಟಲ್‌, ರಾಷ್ಟ್ರೀಯ ಬೀಜ ನಿಗಮದಲ್ಲಿ 4 ಸಾವಿರ ಕ್ವಿಂ, ಖಾಸಗಿ ಮಾರಾಟಗಾರ ಬಳಿ 3,800 ಕ್ವಿಂಟಲ್‌ ಒಟ್ಟಾರೆಯಾಗಿ 11,670 ಕ್ವಿಂಟಲ್‌ ವಿವಿಧ ಬೆಳೆಗಳ ಬಿತ್ತನೆ ಬೀಜದ ದಾಸ್ತಾನಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದ್ದು, ಯಾವುದೇ ಬೀಜದ ಕೊರತೆ ಇಲ್ಲ ಎಂದಿದೆ.

ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಕೋವಿಡ್‌ ಮಾರ್ಗಸೂಚಿಗಳ ಅನ್ವಯ ವಿತರಿಸಲು ಸಜ್ಜಾಗಿದ್ದು, ಈಗಾಗಲೇ 25,841 ಟನ್‌ ಯೂರಿಯಾ 2,871 ಟನ್‌ ಡಿ.ಎ.ಪಿ, 16,956 ಟನ್‌ ಕಾಂಪ್ಲೆಕ್ಸ್‌, 2,284 ಟನ್‌ ಎಮ್‌.ಒ.ಪಿ ಹೀಗೆ ಒಟ್ಟಾರೆಯಾಗಿ 48,394 ಮೆಟ್ರಿಕ್‌ ಟನ್‌ ರಸಗೊಬ್ಬರದ ದಾಸ್ತಾನನ್ನು ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳಿ ಹಾಗೂ ಖಾಸಗಿ ಮಾರಾಟಗಾರರಲ್ಲಿ ದಾಸ್ತಾನೀಕರಿಸಲಾಗಿದೆ. ರಸಗೊಬ್ಬರದ ಕೊರತೆ ಇಲ್ಲ ಎಂದು ಇಲಾಖೆ ಅ ಧಿಕಾರಿಗಳು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next