ದೂರುದಾರರ ಸ್ನೇಹಿತನಾದ ಕ್ಯಾ| ಜಾನ್ ಪ್ರಸಾದ್ ಮಿನೇಜಸ್ ಅವರ ಹೆಸರಿನಲ್ಲಿ ನಕಲಿ ಇ ಮೇಲ್ ಐಡಿ ಸೃಷ್ಟಿಸಿದ ಆರೋಪಿ ತನ್ನನ್ನು ಜಾನ್ ಪ್ರಸಾದ್ ಮಿನೇಜಸ್ ಎಂದು ಬಿಂಬಿಸಿಕೊಂಡು ತಾನು ಮಗನ ಮಗುವನ್ನು ನೋಡಲು ಲಂಡನ್‌ಗೆ ಹೋಗಿದ್ದು ಅಲ್ಲಿಂದ ವಾಪಸ್ ಬರುವಾಗ ಪತ್ನಿಯ ಅನಾರೋಗ್ಯದ ಕಾರಣ ವಿಮಾನ ತಪ್ಪಿ ಹೋಗಿದೆ.
Advertisement
ಹಾಗಾಗಿ ಮತ್ತೆ ವಿಮಾನದ ಟಿಕೆಟ್ ಪಡೆಯಲು ಹಣ ಬೇಕಾಗಿದ್ದು ತುರ್ತಾಗಿ ಹಣ ಕಳುಹಿಸುವಂತೆ ಜು.26ರಂದು ಇ ಮೇಲ್ ಸಂದೇಶದ ಮೂಲಕ ಕೇಳಿಕೊಂಡಿದ್ದ. ಇದನ್ನು ನಂಬಿದ ದೂರುದಾರರು ಜು. 26ರಿಂದ 31ರ ವರೆಗೆ ಒಟ್ಟು 3.56 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾರೆ. ಅನಂತರ ವಿಚಾರಿಸಿದಾಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ.ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.