Advertisement

ರಕ್ಷಣೆಗೆ 3.37 ಲಕ್ಷ ಕೋಟಿ ರೂ.

12:03 AM Feb 02, 2020 | Team Udayavani |

ಸೇನೆಯ ಆಧುನೀಕರಣದ ಕನಸು ನನಸಾಗಿಸಲು ಹಾಗೂ ದೀರ್ಘಾವಧಿಯಿಂದ ಉಳಿದಿರುವ ಬೇಡಿಕೆಗಳನ್ನು ತ್ವರಿತಗತಿಯಲ್ಲಿ ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಮೊತ್ತವನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಿಡಬಹುದು ಎಂದೇ ಯೋಚಿಸಲಾಗಿತ್ತು. ಆದರೆ, ಈ ಬಾರಿ ರಕ್ಷಣೆಗೆ ನೀಡಲಾಗುವ ಅನುದಾನವು ಸ್ವಲ್ಪಮಟ್ಟಿಗೆ ಮಾತ್ರವೇ ಏರಿಕೆಯಾಗಿದೆ.

Advertisement

ಕಳೆದ ವರ್ಷ ರಕ್ಷಣಾ ಕ್ಷೇತ್ರಕ್ಕೆ 3.18 ಲಕ್ಷ ಕೋಟಿ ರೂ. ಮೀಸಲಿಡಲಾಗಿತ್ತು. ಈ ಬಜೆಟ್‌ನಲ್ಲಿ ಇದನ್ನು 3.37 ಲಕ್ಷ ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿದೆ. ಒಟ್ಟು ಅನುದಾನದ ಪೈಕಿ 1.13 ಲಕ್ಷ ಕೋಟಿ ರೂ.ಗಳನ್ನು ಹೊಸ ಶಸ್ತ್ರಾಸ್ತ್ರಗಳು, ವಿಮಾನಗಳು, ಯುದ್ಧನೌಕೆಗಳು ಹಾಗೂ ಇತರೆ ಸೇನಾ ಹಾರ್ಡ್‌ವೇರ್‌ಗಳನ್ನು ಖರೀದಿಸಲು ಬಳಸಲಾಗುತ್ತದೆ. ಇನ್ನು 2.09 ಲಕ್ಷ ಕೋಟಿ ರೂ.ಗಳನ್ನು ವೇತನ ಪಾವತಿಯ ವೆಚ್ಚ ಹಾಗೂ ನಿರ್ವಹಣೆಗೆ ಬಳಸಲಾಗುತ್ತದೆ.

ಗೃಹ ಸಚಿವಾಲಯಕ್ಕೆ 1.5 ಲಕ್ಷ ಕೋಟಿ: ಬಹುನಿರೀಕ್ಷಿತ ಜನಗಣತಿ ಹಾಗೂ ಪೊಲೀಸ್‌ ಪಡೆ ಬಲವರ್ಧನೆಗೊಳಿಸಲು ಗೃಹ ಸಚಿವಾಲಯಕ್ಕೆ 1,05,244.34 ಕೋಟಿ ಮೀಸಲಿರಿಸಲಾಗಿದೆ. ಕಳೆದ ಬಾರಿ 1,03,202.23 ಕೋಟಿ ನೀಡಲಾಗಿತ್ತು. 2021ರಲ್ಲಿ ನಡೆಯುವ ಜನಗಣತಿ ಹಿನ್ನೆಲೆಯಲ್ಲಿ 2,042 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲಾಗಿದ್ದು, ಜನಗಣತಿಗೆ 4,278 ಕೋಟಿ ನೀಡಲು ನಿರ್ಧರಿಸಲಾಗಿದೆ.

ಅಲ್ಲದೇ ನೈಸರ್ಗಿಕ ವಿಪತ್ತಿಗೆ 1,126.62 ಕೋಟಿ, ಸಾಮಾಜಿಕ ಭದ್ರತೆ ಹಾಗೂ ಸಮಾಜ ಕಲ್ಯಾಣ ಯೋಜನೆಗಳಿಗೆ 842.45 ಕೋಟಿ ಮೀಸಲಿರಿಸಿದ್ದು, ಮಿಕ್ಕ ಸಿಂಹ ಪಾಲು ಅನುದಾನ 92054.53 ಕೋಟಿ ಅರೆಸೇನಾ ಪಡೆಗೆ ಮೀಸಲಿರಿಸಲಾಗಿದೆ. ಕೇಂದ್ರ ಗೃಹ ಇಲಾಖೆಗೆ ದೊಡ್ಡ ಪ್ರಮಾಣದ ಅನುದಾನ ಮೀಸಲಿಟ್ಟು ಹೆಚ್ಚಿನ ಬಲ ನೀಡಲಾಗಿದೆ. ಮುಂದಿನ ವರ್ಷದ ಜನಗಣತಿ, ಭದ್ರತೆ, ಆಂತರಿಕ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next