Advertisement

ಶ್ರಮಿಕ ರೈಲಿನಿಂದ 3.32 ಲಕ್ಷ ವಲಸಿಗರು ಪ್ರಯಾಣ

06:17 AM Jun 14, 2020 | Suhan S |

ಹುಬ್ಬಳ್ಳಿ: ಲಾಕ್‌ಡೌನ್‌ನಿಂದ ಸಿಲುಕೊಂಡಿದ್ದವರನ್ನು 229 ಶ್ರಮಿಕ ರೈಲುಗಳ ಮೂಲಕ 3.32ಲಕ್ಷ ವಲಸಿಗರನ್ನು ಅವರ ರಾಜ್ಯಗಳಿಗೆ ತಲುಪಿಸುವ ಕಾರ್ಯ ನೈರುತ್ಯ ರೈಲ್ವೆ ವಲಯದಿಂದ ನಡೆದಿದೆ.

Advertisement

ಶ್ರಮಿಕ ರೈಲುಗಳ ಮೂಲಕ ವಲಸಿಗರನ್ನು ಅವರ ರಾಜ್ಯಗಳಿಗೆ ತಲುಪಿಸಲು ಕೇಂದ್ರ ಸರಕಾರ ಸೂಚನೆ ಹಾಗೂ ರಾಜ್ಯ ಸರಕಾರಗಳ ಬೇಡಿಕೆ ಮೇರೆಗೆ ಮೊದಲ 13 ದಿನಗಳಲ್ಲಿ ಒಂದು ಲಕ್ಷ ಜನರನ್ನು ಅವರ ರಾಜ್ಯಗಳಿಗೆ ತಲುಪಿಸುವ ಕಾರ್ಯ ಮಾಡಲಾಯಿತು. ನಂತರ ಒಂದು ಲಕ್ಷ ಜನರನ್ನು 6 ದಿನಗಳಲ್ಲಿ ಅವರ ಸ್ಥಳಗಳಿಗೆ ಕಳುಹಿಸಲಾಯಿತು.

ಶನಿವಾರ ಕೂಡ ಒಂದು ಶ್ರಮಿಕ ರೈಲಿನ ಮೂಲಕ ಬೆಂಗಳೂರಿನಿಂದ ಗೌಹಾಟಿಗೆ ವಲಸಿಗರನ್ನು ಕಳುಹಿಸಲಾಯಿತು. ಇಲ್ಲಿಯವರೆಗೆ 17 ರಾಜ್ಯಗಳಿಗೆ ಶ್ರಮಿಕ ರೈಲುಗಳು ಸಂಚಾರ ಮಾಡಿವೆ. 1.07 ಲಕ್ಷ ಜನರು 73 ರೈಲುಗಳ ಮೂಲಕ ಬಿಹಾರ, 51 ರೈಲುಗಳ ಮೂಲಕ 73,498 ಜನರು ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ. ಪಶ್ಚಿಮ ಬಂಗಾಳ, ಜಾರ್ಖಂಡ್‌, ಓರಿಸ್ಸಾ, ಅಸ್ಸಾಂ, ರಾಜಸ್ಥಾನ, ಮಧ್ಯಪ್ರದೇಶ, ತ್ರಿಪುರಾ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಮಣಿಪುರ, ಛತ್ತಿಸಗಡ, ಹಿಮಾಚಲಪ್ರದೇಶ, ಕೇರಳ, ಮಿಜೋರಾಂ, ನಾಗಾಲ್ಯಾಂಡ್‌ ರಾಜ್ಯಗಳಿಗೆ ಹುಬ್ಬಳ್ಳಿ, ಬೆಂಗಳೂರು, ಮೈಸೂರ, ಹಾಸನ, ಅಶೋಕಪುರಂ, ಹೊಸಪೇಟೆ, ಬಳ್ಳಾರಿ, ಕೊಪ್ಪಳ ಸೇರಿದಂತೆ ಇನ್ನಿತರೆ ಪ್ರದೇಶಗಳಿಂದ ಸಂಚಾರ ಮಾಡಿವೆ ಎಂದು ನೈರುತ್ಯ ರೈಲ್ವೆ ವಲಯದಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next