Advertisement

ಕರಾಚಿ ಟೆಸ್ಟ್‌ ಪಂದ್ಯ: ಐನೂರರ ಗಡಿ ದಾಟಿದ ಆಸ್ಟ್ರೇಲಿಯ

10:53 PM Mar 13, 2022 | Team Udayavani |

ಕರಾಚಿ: ಆತಿಥೇಯ ಪಾಕಿಸ್ಥಾನದ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಆಸ್ಟ್ರೇಲಿಯ ಕರಾಚಿ ಟೆಸ್ಟ್‌ ಪಂದ್ಯದಲ್ಲಿ ಐನೂರರ ಗಡಿ ದಾಟಿದೆ. 8 ವಿಕೆಟಿಗೆ 505 ರನ್‌ ಬಾರಿಸಿ ದ್ವಿತೀಯ ದಿನದಾಟ ಮುಗಿಸಿದೆ.

Advertisement

ಆಸ್ಟ್ರೇಲಿಯ ಮೊದಲ ದಿನದಾಟದಲ್ಲಿ 3 ವಿಕೆಟಿಗೆ 251 ರನ್‌ ಗಳಿಸಿತ್ತು. ಆಗ ಉಸ್ಮಾನ್‌ ಖ್ವಾಜಾ 127 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ಇದನ್ನು 160ರ ತನಕ ವಿಸ್ತರಿಸಿದರು. 369 ಎಸೆತಗಳ ಈ ಮ್ಯಾರಥಾನ್‌ ಆಟದ ವೇಳೆ ಅವರು 15 ಬೌಂಡರಿ, ಒಂದು ಸಿಕ್ಸರ್‌ ಹೊಡೆದರು.

ಆಸೀಸ್‌ ಸರದಿಯಲ್ಲಿ ಮಿಂಚಿದ ಮತ್ತೋರ್ವ ಆಟಗಾರ, ಕೀಪರ್‌ ಅಲೆಕ್ಸ್‌ ಕ್ಯಾರಿ. ಇವರದು ಬಿರುಸಿನ ಆಟವಾಗಿತ್ತು. ಆದರೆ 7 ರನ್‌ ಕೊರತೆಯಿಂದ ಶತಕ ತಪ್ಪಿಸಿಕೊಂಡರು. 93 ರನ್‌ 159 ಎಸೆತಗಳಿಂದ ಬಂತು. ಸಿಡಿಸಿದ್ದು 7 ಬೌಂಡರಿ, 2 ಸಿಕ್ಸರ್‌. ನೈಟ್‌ ವಾಚ್‌ಮನ್‌ ನಥನ್‌ ಲಿಯೋನ್‌ 38 ರನ್‌ ಹೊಡೆದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-8 ವಿಕೆಟಿಗೆ 505 (ಖ್ವಾಜಾ 160, ಕ್ಯಾರಿ 93, ಸ್ಮಿತ್‌ 72, ಫಾಹಿಮ್‌ ಅಶ್ರಫ್ 55ಕ್ಕೆ 2, ಸಾಜಿದ್‌ ಖಾನ್‌ 151ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next