Advertisement

2ನೇ ತ್ತೈಮಾಸಿಕ ಜಿಡಿಪಿ ಚೇತರಿಕೆ

01:00 AM Dec 01, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಕಡಿಮೆಯಾಗುತ್ತಿರುವುದು ವಿತ್ತೀಯ ಚಟುವಟಿಕೆ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.

Advertisement

ಈ ವಿತ್ತೀಯ ವರ್ಷದ 2ನೇ ತ್ತೈಮಾಸಿಕ, ಜುಲೈ-ಸೆಪ್ಟಂಬರ್‌ ಅವಧಿಯಲ್ಲಿ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಶೇ.8.4ಕ್ಕೆ ಏರಿಕೆಯಾ ಗಿದೆ.

2021-22 ಆರ್ಥಿಕ ವರ್ಷ ದಲ್ಲಿ ದೇಶದ ಒಟ್ಟಾರೆ ಬೆಳವಣಿಗೆ ಶೇ.9.4ರಷ್ಟು ಏರುವ ನಿರೀಕ್ಷೆ ಇದೆ.

ಜೂನ್‌ನಲ್ಲಿ ನಿರೀಕ್ಷೆಯಂತೆ ಶೇ.20.1ರ ಏರಿಕೆ ದಾಖಲಾಗದಿದ್ದರೂ ಬೆಳವ ಣಿಗೆಯ ಪ್ರಮಾಣ ತೃಪ್ತಿಕರ ವಾಗಿದೆ ಮತ್ತು ಅರ್ಥ ವ್ಯವಸ್ಥೆಯ ಚಟುವಟಿಕೆಗಳು ಕೊರೊನಾಕ್ಕೂ ಮೊದಲ ಸ್ಥಿತಿಯತ್ತ ಸಾಗುತ್ತಿದೆ.

2020 -21ನೇ ಸಾಲಿನ 2ನೇ ತ್ತೈಮಾಸಿಕದಲ್ಲಿ ಜಿಡಿಪಿ ಪ್ರಮಾಣ ಮೈನ ಸ್‌ ಶೇ.7.4ಕ್ಕೆ ಕುಸಿದಿತ್ತು.

Advertisement

ಇದನ್ನೂ ಓದಿ:ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಕೃಷಿ, ಗಣಿಗಾರಿಕೆ, ಉತ್ಪಾದನ ಕ್ಷೇತ್ರ, ಇಂಧನ ಮತ್ತು ನೀರಿನ ಪೂರೈಕೆ, ಸಾರಿಗೆ, ದೂರಸಂಪರ್ಕ ಕ್ಷೇತ್ರ, ರಿಯಲ್‌ ಎಸ್ಟೇಟ್‌ ವಲಯಗಳಲ್ಲಿ ತೃಪ್ತಿದಾಯಕ ಪ್ರಗತಿಯಾಗಿದೆ ಎಂದು ಕೇಂದ್ರ ಸರಕಾರದ ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ ಬಿಡುಗಡೆ ಮಾಡಿದ ದತ್ತಾಂಶಗಳಲ್ಲಿ ಉಲ್ಲೇಖಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next