Advertisement

ಕಾಂಗ್ರೆಸ್‌ನಿಂದ 2ನೇ ಹಂತದ ಜನಜಾಗೃತಿ ಪಾದಯಾತ್ರೆ

05:33 PM Aug 31, 2022 | Team Udayavani |

ಕಲಬುರಗಿ: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾಲದಲ್ಲಿ ದೇಶಕ್ಕಾಗಿ ಪಕ್ಷ ನೀಡಿರುವ ನೀಡಿರುವ ಕೊಡುಗೆಗಳನ್ನು ಜನತೆಗೆ ತಿಳಿಸಲು ಕಲಬುರಗಿ ದಕ್ಷಿಣದಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರ 2ನೇ ಹಂತದ ಜನಜಾಗೃತಿ ಪಾದಯಾತ್ರೆ ಮುಂದುವರಿದಿದ್ದು, ನಗರದ ಕೊಟನೂರ ಡಿ ಗ್ರಾಮದಲ್ಲಿ ಹಲವಾರು ಮುಖಂಡರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

Advertisement

ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ ನೇತೃತ್ವದಲ್ಲಿನ ಕಾಂಗ್ರೆಸ್‌ ಪಕ್ಷದ ಪಾದಯಾತ್ರೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಮುಖಂಡರಾದ ನೀಲಕಂಠರಾವ್‌ ಮೂಲಗೆ, ಚೇತನ ಗೋನಾಯಕ, ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್‌ ಹಾಗೂ ಇನ್ನಿತರರು ಪಾಲ್ಗೊಂಡು, ಕಾಂಗ್ರೆಸ್‌ ಪಕ್ಷದ ಕೊಡುಗೆಗಳನ್ನು ವಿವರಿಸಿದರು.

ಕೊಟನೂರ ಡಿ ಗ್ರಾಮದ ಪಾದಯಾತ್ರೆಯಲ್ಲಿ ಮುಖಂಡರಾದ ಮಹಾದೇವಪ್ಪ ಪಟೀಲ್‌, ಸಂತೋಷ ಪಾಟೀಲ, ಜಗ್ಗು ಸಿರಸಗಿ, ಸುನೀಲ ಗೌನಳ್ಳಿ, ಶ್ರೀಶೈಲ ಹೂಗಾರ, ಚೇತನ ಸಾವಳಗಿ, ಅಂಬರೀಶ ಜಾನಿ, ಮಲ್ಲಿಕಾರ್ಜುನ ಗುಡೂರ್‌ ಹಾಗೂ ಇತರರು ವಿವಿಧ ಪಕ್ಷಗಳನ್ನು ತೆರೆದು ಕಾಂಗ್ರೆಸ್‌ ಸೇರಿದರು. ಕಾಂಗ್ರೆಸ್‌ ಪಕ್ಷದ ಮುಖಂಡ, ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲರು ಕಾಂಗ್ರೆಸ್‌ ಧ್ವಜ ನೀಡಿ ಸ್ವಾಗತಿಸಿಕೊಂಡರು. ಪಕ್ಷದ ಮುಖಂಡರಾದ ಗುಂಡಪ್ಪಾ ಲಂಡನಕರ್‌, ಲತಾ ರವಿ ರಾಠೊಡ್‌ ವಾಣಿಶ್ರೀ ಸಗರಕರ್‌, ಶೋಭಾ ಕಾಳೆ, ಅವಿನಾಶ ಭಾಸ್ಕರ ಹಾಗೂ ಪಕ್ಷದ ಹಿರಿಯ-ಕಿರಿಯ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಂಗಳವಾರ ಪಾದಯಾತ್ರೆಯು ಪಾಣೆಗಾಂವ, ನಾಗನಳ್ಳಿ, ಕೋಟನೂರ್‌, ಉದನೂರ್‌, ಹುಣಸಿಹಡಗಿಲ್‌, ಸುಲ್ತಾನಪುರ್‌, ನಾಗನಹಳ್ಳಿ ಗ್ರಾಮಗಳ ಮೂಲಕ ಸಾಗಿ ಬಂತು.

Advertisement

Udayavani is now on Telegram. Click here to join our channel and stay updated with the latest news.

Next