Advertisement

ರಂಗೇರಿದ 2ನೇ ಹಂತದ ಹಣಾಹಣಿ

04:58 PM Dec 25, 2020 | Suhan S |

ಕೊಪ್ಪಳ: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಪಂ ಚುನಾವಣೆ ಮತದಾನ ಮುಗಿದ ಬೆನ್ನಲ್ಲೇ 2ನೇಹಂತದ ಚುನಾವಣೆ ರಂಗೇರಿದೆ. 76 ಗ್ರಾಪಂನ 1,206 ಸದಸ್ಯ ಸ್ಥಾನಕ್ಕೆ 3,095 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಗೆಲುವಿಗಾಗಿ ರಣತಂತ್ರ ಹೆಣೆಯುತ್ತಿದ್ದಾರೆ.

Advertisement

ಚುನಾವಣೆಯನ್ನು ಅಭ್ಯರ್ಥಿಗಳು ಹಾಗೂ ಮತದಾರರು ಅತ್ಯಂತ ಪ್ರತಿಷ್ಠೆಯಾಗಿ ನಡೆಸುತ್ತಿರುವುದು ಕಂಡು ಬರುತ್ತಿದೆ. ಮೊದಲ ಹಂತದ ಚುನಾವಣೆಯಲ್ಲಿಅಭ್ಯರ್ಥಿಗಳು ಪ್ರತಿಷ್ಠೆ ಪಣಕ್ಕಿಟ್ಟುಚುನಾವಣಾ ರಣತಂತ್ರ ಹೆಣೆದುಮತದಾನ ಮಾಡಿಸಿದ್ದರು. ಈ ಬೆನ್ನಲ್ಲೇ ಎರಡನೇ ಹಂತದ ಚುನಾವಣೆಯ ಕಾವು ಅತ್ಯಂತ ಜೋರಾಗಿದೆ.

2ನೇ ಹಂತದ ಚುನಾವಣೆಯುಗಂಗಾವತಿ ತಾಲೂಕಿನ 18 ಗ್ರಾಪಂ,ಕಾರಟಗಿಯ ತಾಲೂಕಿನ 11, ಕನಕಗಿರಿತಾಲೂಕಿನ 11 ಗ್ರಾಪಂ, ಕುಷ್ಟಗಿ ತಾಲೂಕಿನ 36 ಸೇರಿದಂತೆ ಒಟ್ಟು 76 ಗ್ರಾಪಂಗಳಲ್ಲಿ1,375 ಸದಸ್ಯ ಸ್ಥಾನದ ಪೈಕಿ ಈಗಾಗಲೇ169 ಸದಸ್ಯ ಸ್ಥಾನಗಳಿಗೆ ತಲಾ ಒಬ್ಬೊಬ್ಬರೇ ನಾಮಪತ್ರಸಲ್ಲಿಸಿದ್ದರಿಂದ ಅವರು ಬಹುತೇಕ ಅವಿರೋಧವಾಗಿಆಯ್ಕೆಯಾದಂತಾಗಿವೆ. ಉಳಿದಂತೆ 1206 ಸದಸ್ಯಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಸ್ಥಾನಗಳಿಗೆ3095 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿಉಳಿದು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿ ತಮ್ಮ ಪರ ಮತ ನೀಡುವಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ.

ಮನೆ ಮನೆಗೆ ಭೇಟಿ ನೀಡಿ ಕುಟುಂಬದ ಎಲ್ಲ ಮತಗಳನ್ನು ನೀಡಿ. ನಿಮ್ಮ ಬೇಕು, ಬೇಡಿಕೆಗಳನ್ನುಈಡೇರಿಸಲಾಗುವುದು. ಸರ್ಕಾರದಿಂದ ಗ್ರಾಪಂಗೆಬರುವ ಪ್ರತಿಯೊಂದು ಸೌಲಭ್ಯಗಳನ್ನು ನಮ್ಮ ವಾರ್ಡ್ ನಲ್ಲಿನ ಜನತೆಗೆ ತಲುಪಿಸುವ ಕೆಲಸ ಮಾಡಲಿದ್ದೇವೆ. ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದ್ದೇವೆ.ನಮ್ಮ ಮೇಲೆ ವಿಶ್ವಾಸವನ್ನಿಡಿ ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.

ಗ್ರಾಮಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮತಗಳ ಓಲೈಕೆಗಾಗಿ ತಮ್ಮ ತ್ಮ ಕ್ಷೇತ್ರದಶಾಸಕರ ಮೂಲಕ ವಿವಿಧ ಸಮಾಜದ ಮುಖಂಡರಸಭೆ ಕರೆಯಿಸಿ ಒಮ್ಮತದ ಅಭ್ಯರ್ಥಿಗಳಿಗೆ ಮತ ಹಾಕಿಸುವಂತೆ ಹೇಳಿಸುತ್ತಿದ್ದಾರೆ. ಶಾಸಕರು ಸಹ ತಮ್ಮ ಕ್ಷೇತ್ರದ ಗ್ರಾಪಂ ಹಂತದಲ್ಲಿ ಹಿಡಿದಿಟ್ಟುಕೊಳ್ಳಬೇಕೆಂಬಜಿದ್ದಿಗೆ ಬಿದ್ದವರಂತೆ ಸಭೆಗಳನ್ನು ನಡೆಸಿ ಬಂಡಾಯವೆದ್ದವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

Advertisement

ಶಾಸಕರಿಂದ ಸಮಾಜದ ಮುಖಂಡರಿಗೆ ಅಭಯ ಹಸ್ತ ಸಿಕ್ಕಬೆನ್ನಲ್ಲೇ ಗ್ರಾಮಗಳಲ್ಲಿ ಸಮಾಜದ ಮುಖಂಡರ ಒಗ್ಗೂಡಿಸಿ ಮತಗಳನ್ನು ಒಗ್ಗೂಡಿಸುವ ರಣತಂತ್ರಹೆಣೆಯುತ್ತಿದ್ದಾರೆ. ಇದಲ್ಲದೇ ಯಾರಿಂದಹೇಳಿಸಿದರೆ ನಮಗೆ ಮತಗಳು ಬರಲಿವೆ. ಯಾರು ನಮಗೆ ಕೃಪೆ ತೋರಲಿದ್ದಾರೆ ಎಂದು ಎಲ್ಲವನ್ನೂ ಲೆಕ್ಕಚಾರಮಾಡಿ ಅಂತಹ ವ್ಯಕ್ತಿಗಳ ಮೂಲಕ ಮತಗಳನ್ನು ಕ್ರೋಢೀಕರಿಸುವ ಪ್ರಯತ್ನ ಮಾಡುತ್ತಿದ್ದಾರೆ.

4,24,179 ಮತದಾರರು: 2ನೇ ಹಂತದಲ್ಲಿನಡೆಯಲಿರುವ ಗ್ರಾಪಂ ಚುನಾವಣೆಯಲ್ಲಿ 4,24,179ಮತದಾರರಿದ್ದಾರೆ. ಗಂಗಾವತಿ ತಾಲೂಕಿನಲ್ಲಿಪುರುಷ-50,742, ಮಹಿಳೆ-53,065, ಇತರೆ-04ಸೇರಿ ಒಟ್ಟು 1,03,811, ಕಾರಟಗಿ ತಾಲೂಕಿನಲ್ಲಿಪುರುಷ-31,773, ಮಹಿಳೆ-32,973 ಸೇರಿ ಒಟ್ಟು64,746, ಕನಕಗಿರಿ ತಾಲೂಕಿನಲ್ಲಿ ಪುರುಷ-29,332,ಮಹಿಳೆ-29,006, ಇತರೆ-01 ಸೇರಿ ಒಟ್ಟು 58,339 ಮತದಾರರು. ಕುಷ್ಟಗಿ ತಾಲೂಕಿನಲ್ಲಿ ಪುರುಷ-99,467, ಮಹಿಳೆ-97,808, ಇತರೆ-08 ಸೇರಿ ಒಟ್ಟು 197283 ಮತದಾರರು ಸೇರಿದಂತೆ ಒಟ್ಟಾರೆ 2ನೇ ಹಂತದಲ್ಲಿ ಪುರುಷ-2,11,314, ಮಹಿಳೆ-212852 ಇತರೆ-13 ಸೇರಿದಂತೆ ಒಟ್ಟು 4,24,179 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next