Advertisement

ಮಂಗಳೂರಿನಲ್ಲಿ 2ನೇ ಹಂತದ ಲಾಕ್‌ಡೌನ್‌ ಆರಂಭ

09:47 PM Apr 15, 2020 | Sriram |

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ ಮೊದಲ ಹಂತದ ಲಾಕ್‌ಡೌನ್‌ ಮುಕ್ತಾಯದ ಬಳಿಕ, ಎರಡನೇ ಹಂತದ ಲಾಕ್‌ಡೌನ್‌ ಆರಂಭವಾದ ಮೊದಲ ದಿನವಾದ ಬುಧವಾರ ಮಂಗಳೂರಿನಲ್ಲಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಿವೆ. ನಗರ ವ್ಯಾಪ್ತಿಯಲ್ಲಿ ಖಾಸಗಿ ವಾಹನಗಳ ಸಂಚಾರವೂ ಅಧಿಕವಾಗಿತ್ತು.

Advertisement

ಎಚ್ಚರಿಕೆ ನಡುವೆಯೂ ಸಂಚಾರ
ದಿನಸಿ ಖರೀದಿಗಾಗಿ ಬೆಳಗ್ಗಿನಿಂದ ಮಧ್ಯಾಹ್ನ 12ರ ವರೆಗೆ ಜಿಲ್ಲಾಡಳಿತ ಅವಕಾಶ ನೀಡಿತ್ತು. ಮನೆ ಸಮೀಪ ದಿಂದಲೇ ದಿನಸಿ ಖರೀದಿಸಬೇಕು ಎಂಬ ನಿಯಮ ಮೀರಿ ನಗರಕ್ಕೆ ಬರುವ ಖಾಸಗಿ ವಾಹನಗಳನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಪೊಲೀಸ್‌ ಆಯುಕ್ತರು ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಬುಧವಾರ ಯಾವುದೇ ಭೀತಿ ಯಿಲ್ಲದೆ ಖಾಸಗಿ ವಾಹನಗಳು ಸಂಚರಿ ಸುತ್ತಿದ್ದುದು ಕಂಡುಬಂತು.
ಆಯಕಟ್ಟಿನ ಸ್ಥಳದಲ್ಲಿ ಪೊಲೀಸ್‌ ಪಹರೆ ಇದ್ದರೂ ವಾಹನ ತಪಾಸಣೆ ನಡೆ ಯುತ್ತಿರಲಿಲ್ಲ. ಒಂದೆರಡು ಕಡೆಗಳಲ್ಲಿ ಮಾತ್ರ ಪೊಲೀಸ್‌ ತಪಾಸಣೆ ಇತ್ತು.

ಮಂಗಳವಾರ ಅಂಬೇಡ್ಕರ್‌ ಜಯಂತಿ ಹಿನ್ನೆಲೆಯಲ್ಲಿ ಸರಕಾರಿ ಕಚೇರಿ, ಪಡಿತರ, ಬ್ಯಾಂಕ್‌ಗಳಿಗೆ ರಜೆ ಇದ್ದ ಕಾರಣ ಬುಧವಾರ ಬ್ಯಾಂಕ್‌, ಪಡಿತರದ ಮುಂಭಾಗ ಜನರ ಸಂಖ್ಯೆ ಹೆಚ್ಚಿತ್ತು. ದಿನಸಿ ಅಂಗಡಿ ಮುಂಭಾಗ ದಲ್ಲೂ ಇದೇ ದೃಶ್ಯಗಳಿದ್ದವು.

ನಂಬರ್‌ಪ್ಲೇಟ್‌ ಇಲ್ಲದ ದ್ವಿಚಕ್ರ ವಾಹನಗಳು
ಕಮಿಷನರೆಟ್‌ ವ್ಯಾಪ್ತಿಯ ದೇರಳಕಟ್ಟೆ, ಕುತ್ತಾರು, ಅಸೈ ಗೋಳಿ, ಮುಡಿಪು ವ್ಯಾಪ್ತಿಯ ಲ್ಲಿಯೂ ವಾಹನ ಸಂಚಾರಕ್ಕೆ ನಿಯಂತ್ರಣವಿರಲಿಲ್ಲ. ದಿನಸಿ ಕಾರಣ ನೀಡಿ ಸಂಚರಿಸುವ ವಾಹನಗಳು ಹೆಚ್ಚಿದ್ದವು. ಮುಡಿಪು ಭಾಗದಲ್ಲಿ ನಂಬರ್‌ಪ್ಲೇಟ್‌ ಇಲ್ಲದ ದ್ವಿಚಕ್ರ ವಾಹನಗಳೂ ಸಂಚರಿ ಸುತ್ತಿದ್ದುದು ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next