Advertisement

2ನೇ ದಿನವೂ ದಣಿವರಿಯದ ಧರಣಿ

11:58 AM Mar 22, 2017 | |

ಬೆಂಗಳೂರು: ಬಿರು ಬೇಸಿಗೆಯ ನೆತ್ತಿ ಸುಡುವ ಬಿಸಿಲು , ಅದರ ನಡುವೆ ಹಸಿವು, ಪ್ರಕೃತಿ ಕರೆಗೆ ಓಗೊಡಲಾಗದೆ ಒದ್ದಾಟ, ದಾಹ ನೀಗಿಸಿಕೊಳ್ಳಲು ಸಂಘಟನೆಗಳು ನೀಡಿದ್ದ ಟ್ಯಾಂಕರ್‌, ಬಾಟಲಿ ನೀರೇ ಆಧಾರ, ಇದರ ನಡುವೆ ಪುಟ್ಟ ಪುಟ್ಟ ಮಕ್ಕಳು… ಇದು ನಗರದಲ್ಲಿ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಪರಿಸ್ಥಿತಿ. 

Advertisement

ಎರಡು ದಿನಗಳಿಂದ ಹಗಲು-ರಾತ್ರಿ ಧರಣಿಧಿಯಲ್ಲಿ ನಿರತರಾಗಿ ದಣಿಯುತ್ತಿದ್ದರೂ, ಮಹಿಳೆಯಧಿರಲ್ಲಿನ ಹೋರಾಟದ ಕಿಚ್ಚು ಕಡಿಮೆಯಾಗಿಲ್ಲ. ಬೇಡಿಕೆ ಈಡೇರಿಕೆಗಾಗಿ ಹಸುಗೂಸುಗಳನ್ನು ಬಗಲಲ್ಲಿ ಹಿಡಿದುಕೊಂಡೇ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಧರಣಿ ನಿರತರು ನಿತ್ಯಕರ್ಮಕ್ಕಾಗಿ ಸ್ವಾತಂತ್ರ್ಯ ಉದ್ಯಾನ ಬಳಿಯ ಶೌಚಾಲಯ, ಅಗ್ನಿಶಾಮಕ ಠಾಣೆ ಸಮೀಪವಿದ್ದ ಶುಲ್ಕ ಪಾವತಿಸಿ ಬಳಸುವ ಶೌಚಾಲಯಗಳನ್ನು ಸಾವಿರಾರು ಮಂದಿ ಸರದಿ ಸಾಲಿನಲ್ಲಿ ನಿಂತು ಬಳಸುವಂತಾಗಿದೆ. 

ಹಲವು ಮಹಿಳೆಯರು ನೀರು ಕುಡಿದರೆ ಅಥವಾ ಊಟ ಮಾಡಿದರೆ ಎಲ್ಲಿ ಶೌಚಾಲಯಕ್ಕೆ ಹೋಗಬೇಕಾಗುತ್ತದೆಯೋ ಎಂಬ  ಅತಂಕದಿಂದ ಏನೂ ಸೇವಿಸದೆ ಹೋರಾಟದಲ್ಲಿ ತೊಡಗಿರುವುದು ಅವರ ಶೋಚನೀಯ ಸ್ಥಿತಿಗೆ ಸಾಕ್ಷಿಯಾಗಿತ್ತು. ಪ್ರತಿಭಟನೆಗೆ ಬರುವಾಗ ಕಟ್ಟಿಕೊಂಡು ಬಂದಿದ್ದ ಬುತ್ತಿ ಖಾಲಿಯಾಗಿದ್ದರಿಂದ ಸೇವಾ ಸಂಸ್ಥೆಗಳು, ಪಾಲಿಕೆ ಸದಸ್ಯರು ಹಂಚಿದ ಬಿಸ್ಕಟ್‌ ತಿಂದು ಸುಧಾರಿಸಿಕೊಳ್ಳುವಂತಾಗಿತ್ತು. ತಾವಷ್ಟೇ ಅಲ್ಲದೆ ಹಾಲು ನೀರು ಇಲ್ಲದೆ ಸೊರಗಿದ್ದ ಕಂದಧಿಮ್ಮಗಳನ್ನು ಕಂಡು ಜತೆಯಲ್ಲಿದ್ದ ಮಹಿಳೆಯರೇ ಕಂಬನಿ ಮಿಡಿದಿದ್ದು ಮನಕಲುಕುವಂತಿತ್ತು. 

ಅಹೋರಾತ್ರಿ ಧರಣಿಯಲ್ಲಿ ರಾತ್ರಿಹೊತ್ತು ಹೊದ್ದುಕೊಳ್ಳಲು ಬೆಡ್‌ಶೀಟ್‌ ಇಲ್ಲದೇ ಉಟ್ಟ ಸೀರೆಯ ಸೆರಗನ್ನೇ ಹೊದಿಕೆಯಾಗಿ ಬಳಸಿಕೊಂಡರು. ಇದರ ನಡುವೆ ಸೊಳ್ಳೆಗಳ ಕಾಟ ಬೇರೆ. ಇವುಗಳಿಂದ ಮಕ್ಕಳನ್ನು ರಕ್ಷಿಸಿಕೊಳ್ಳಲು ತಾಯಂದಿರುವ ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹೋರಾಟಕ್ಕೆ ಬಿಗಿ ಬಂದೋಬಸ್ತ್ ಒದಗಿಸಿದ್ದ ಪೊಲೀಸ್‌ ಇಲಾಖೆ ಬಹುತೇಕ ಮಹಿಳಾ ಪೊಲೀಸರನ್ನೇ ಭದ್ರತೆಗೆ ನಿಯೋಜಿಸಿತ್ತು. 

ಇದರ ಜತೆಗೆ ಹೋರಾಟಗಾರರಿಗೆ ಹಲವು ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ಆಹಾರ, ನೀರು, ಬಿಸ್ಕೆಟ್‌ ವಿತರಿಸಿವೆ. ಜೆಡಿಎಸ್‌ ನಗರ ಘಟಕದಿಂದ ನೀರು ನೀಡಲಾಯಿತು. ಸ್ಥಳೀಯ ಪಾಲಿಕೆ ಸದಸ್ಯರೊಬ್ಬರು ಬಿಸ್ಕೆಟ್‌ ವಿತರಿಸಿದರು.

Advertisement

ನಗರದಲ್ಲಿ ಮಂಗಳವಾರ ಪ್ರತಿಭಟನೆಗಳ ಮಹಾಪೂರ 
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಸ್ವಾತಂತ್ರ್ಯ  ಉದ್ಯಾನದ ಬಳಿ ನಾಲ್ಕು ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.
ಒಂದೆಡೆ ಅಂಗನವಾಡಿ ಕಾರ್ಯಕರ್ತೆಯರು ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೈಗೊಂಡಿರುವ ಅಹೋರಾತ್ರಿ ಧರಣಿ 2ನೇ ದಿನವೂ ಮುಂದುವರೆದು ಐದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. 

ಮತ್ತೂಂದೆಡೆ ಅಗ್ರಿಗೋಲ್ಡ್‌ ಸಂಸ್ಥೆಯಿಂದ ವಂಚನೆಗೆ ಒಳಗಾದವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಯುಜಿಸಿ 2010ರ ನಿಯಮಗಳನ್ನು ಉಲ್ಲಂ ಸಿ ಸಹಾಯಕ ಪ್ರಾಧ್ಯಾಪಕರ ಅಕ್ರಮ ನೇಮಧಿಕಾತಿ ಆಯ್ಕೆ ಪಟ್ಟಿಯನ್ನು ತಡೆಹಿಡಿದು ಉನ್ನತ ಮಟ್ಟದ ತನಿಖೆಗೆ ಶಿಫಾರಸ್ಸು ಮಾಡಬೇಕು. ಅತಿಥಿ ಉಪನ್ಯಾಸಧಿಕರಿಗೆ ಸೇವಾ ಭದ್ರತಗೆ ನೀಡಿ ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯೂ ಮುಂದುವರಿದಿತ್ತು. 

ಐವರು ಅಂಗನವಾಡಿ ಕಾರ್ಯಕರ್ತೆಯರು ಅಸ್ವಸ್ಥ ಧಿ
ಬೆಂಗಳೂರು:
ಪ್ರತಿಭಟನಾ ನಿರತ ಕಾರ್ಯಕರ್ತೆಯರು ಮತ್ತು ಸಹಾಯಕಿಯರಲ್ಲಿ ಐವರು ಅಸ್ವಸ್ಥಗೊಂಡಿದ್ದಾರೆ. ಕಲಬುರ್ಗಿಯ ಗುಂಡಮ್ಮ, ಮಂಡ್ಯದ ಮಂಜುಳರಾಜ್‌, ಸಿರಗುಪ್ಪದ ಜಯಂತಿ, ರತ್ನ ಸೇರಿದಂತೆ ಐವರು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಕೆ.ಸಿ.ಜನರಲ್‌ ಆಸ್ಪತ್ರೆ ವೈದ್ಯಕೀಯ ಆಧೀಕ್ಷಕ ಡಾ.ಎಚ್‌.ರವಿಕುಮಾರ್‌ ಈ ಕುರಿತು ಹೇಳಿಕೆ ನೀಡಿದ್ದು, ಮಂಗಳವಾರ ಬೆಳಗ್ಗೆ ಐವರು ಅಂಗನವಾಡಿ ಕಾರ್ಯಕರ್ತೆಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅವರಿಗೆ ಬಿಸಿಲಿನಿಂದ ನಿತ್ರಾಣವಾಗಿದೆ. ತಲೆ ನೋವು, ವಾಂತಿ ಎಂದು ದಾಖಲಾಗಿದ್ದಾರೆ. ಇದೀಗ ಅವರ ಆರೋಗ್ಯ ಸುಧಾರಿಸಿದೆ ಎಂದು ತಿಳಿಸಿದ್ದಾರೆ

ನಿಲ್ಲದ ಸಂಚಾರದ ಸಂಕಟ
ಬೆಂಗಳೂರು:
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಯಿಂದಾಗಿ ಮಂಗಳವಾರವೂ ಫ್ರೀಡಂ ಪಾರ್ಕ್‌ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿತ್ತು.  ಸಂಚಾರ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಪ್ರತಿಭಟನಾಕಾರರು ಶೇಷಾದ್ರಿ ರಸ್ತೆಯ ಒಂದು ಭಾಗದಲ್ಲಿ ಪ್ರತಿಭಟನೆಗೆ ಕುಳಿತಿದ್ದರು. ಹೀಗಾಗಿ, ಸಂಚಾರ ಪೊಲೀಸರು ಮತ್ತೂಂದು ಪಥದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.  

ಆನಂದರಾವ್‌ ವೃತ್ತ ಮೇಲು ಸೇತುವೆ ರಸ್ತೆ, ಕಾರ್ಪೋರೇಷನ್‌, ಮೈಸೂರು ಬ್ಯಾಂಕ್‌ ವೃತ್ತ ಸೇರಿದಂತೆ ಹಲವೆಡೆ ವಾಹನ ಸವಾರರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವುದರಿಂದ ಹೆಚ್ಚಿನ ಭದ್ರತೆ ಹೊಣೆಯನ್ನು ಹೆಚ್ಚುವರಿ ಪೊಲೀಸ್‌ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಅವರಿಗೆ ವಹಿಸಲಾಗಿತ್ತು.

ಡಿಸಿಪಿಗಳಾದ ಅನುಚೇತ್‌, ಲಾಬೂರಾಮ್‌, ಸಂಚಾರ ವಿಭಾಗ ಡಿಸಿಪಿ ಶೋಭಾರಾಣಿ ಸೇರಿದಂತೆ 6 ಮಂದಿ ಡಿಸಿಪಿಗಳು, 10 ಎಸಿಪಿ, 30 ಮಂದಿ ಇನ್ಸ್‌ಪೆಕ್ಟರ್‌, ಮಹಿಳಾ ಪೊಲೀಸ್‌ ಸಿಬ್ಬಂದಿ, ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ, 6 ಕೆಎಸ್‌ಆರ್‌ಪಿ ತುಕಡಿಗಳು ಸೇರಿದಂತೆ ಸುಮಾರು 1,300 ಮಂದಿ ಪ್ರತಿಭಟನಾ ಸ್ಥಳದಲ್ಲಿದ್ದರು.

ಅಧಿವೇಶನ ನಡೆಯಲು ಬಿಡಲ್ಲ
ಸರ್ಕಾರ ಬೇಡಿಕೆ ಈಡೇರದಿದ್ದರೆ ಬುಧವಾರ ಉಭಯ ಸದನಗಳ ಕಲಾಪ ನಡೆಯಲು ಬಿಡುವುದಿಲ್ಲ. ನಾನು ಖುದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ  ಸಚಿವೆ ಉಮಾಶ್ರೀಯವರಿಗೆ ಮಾತನಾಡಿ ವೇತನ ಹೆಚ್ಚಳದ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ಸರ್ಕಾರ  ಈ ವಿಚಾರದಲ್ಲಿ ಮಾನವೀಯತೆಯಿಂದ ವರ್ತಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ಮುಂಜಾನೆಯೇ ಬೆಂಗಳೂರಿಗೆ ಬಂದಿದ್ದೇವೆ. ಊಟ, ತಿಂಡಿ ಸಮಸ್ಯೆ ತುಂಬಾ ಇದೆ. ಶೌಚಾಲಯಕ್ಕೆ ಜಾಗವಿಲ್ಲ ಆದ್ದರಿಂದ ಊಟ, ತಿಂಡಿ ಮಾಡ್ತಿಲ್ಲ. ಮನೆ ಬಿಟ್ಟು ಹೋರಾಟಕ್ಕೆಂದು ಬಂದಿದ್ದೇವೆ. ಬೇರೆ ಬೇರೆ ಕಡೆಗಳಿಂದ ಪ್ರತಿಭಟನೆಗೆ ಬರುವ ಕಾರ್ಯಕರ್ತೆಯರು ತರುವ ಊಟವನ್ನೇ ಹಂಚಿಕೊಂಡು ತಿನ್ನುತ್ತಿದ್ದೇವೆ. 
-ಪಾರ್ವತಮ್ಮ, ಚಾಮರಾಜನಗರ

ರಸ್ತೆಯಲ್ಲಿಯೇ ನಿದ್ದೆ, ಊಟ ಮಾಡುತ್ತಿದ್ದೇವೆ. ನೀರಿನ ಸಮಸ್ಯೆ ಇದೆ. ಸಾರ್ವಜನಿಕರು ಮಹಿಳೆಯರ ಈ ದುಸ್ಥಿತಿ ಕಂಡು, ಊಟ, ಹಣ್ಣು, ಮಜ್ಜಿಗೆ ಕೊಡುತ್ತಿದ್ದಾರೆ. ಆದರೂ ಬೀದಿಗೆ ಬಂದಿರುವ ನಮ್ಮ ಪರಿಸ್ಥಿತಿ ಸರ್ಕಾರ ಕಣ್ಣಿಗೆ ಕಾಣುತ್ತಿಲ್ಲ. ಯಾವ್ಯಾವುದಕ್ಕೋ ದುಡ್ಡು ಖರ್ಚು ಮಾಡುವ ಸರ್ಕಾರ ನ್ಯಾಯಯುತವಾಗಿ ವೇತನ ಕೊಡೋಕೆ ಏನ್‌ ಸಮಸ್ಯೆ?
-ಶಾರದಮ್ಮ, ಮಧುಗಿರಿ

Advertisement

Udayavani is now on Telegram. Click here to join our channel and stay updated with the latest news.

Next