Advertisement
ಕೇಂದ್ರ ಆಯುಷ್ ಸಚಿವಾಲಯದ ಪ್ರಥಮ ಆಯುಷ್ ನ್ಪೋರ್ಟ್ಸ್ ಮೆಡಿಸಿನ್ ಸೆಂಟರ್ ತ್ರಿಶೂರ್‌ನಲ್ಲಿ ಈಗಾಗಲೇ ಕಾರ್ಯ ನಡೆಸುತ್ತಿದೆ. ಇಲ್ಲಿ ಆಯುರ್ವೇದ ಚಿಕಿತ್ಸಾ ಕೇಂದ್ರ ಮಾತ್ರ ಇದೆ. ಆದರೆ ಮಂಗಳೂರಿನಲ್ಲಿ ನಿರ್ಮಾಣವಾಗಲಿರುವ ಆಯುಷ್ ಕ್ರೀಡಾ ಕೇಂದ್ರವು ಆಯುರ್ವೇದ, ಯೋಗ, ಯುನಾನಿ, ಹೋಮಿಯೋಪತಿ ಸಹಿತ ಎಲ್ಲ ಪ್ರಕಾರಗಳನ್ನು ಒಳಗೊಂಡಿರಲಿದೆ. ಹೀಗಾಗಿ ಎಲ್ಲ ಪ್ರಕಾರಗಳ ಆಯುಷ್ ಕ್ರೀಡಾ ಕೇಂದ್ರ ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ನಿರ್ಮಾಣವಾಗಲಿದೆ. ಇದಕ್ಕಾಗಿ ಆರಂಭಿಕ 2.50 ಕೋ.ರೂ. ಮೊತ್ತಕ್ಕೆ ಅನುಮೋದನೆ ಕೂಡ ದೊರೆತಿದೆ. ಕೇಂದ್ರ ಆಯುಷ್ ಸಚಿವರು ಮಂಗಳೂರಿಗೆ ಆಗಮಿಸಿದ ಸಂದರ್ಭ ಇಲ್ಲಿ ಆಯುಷ್ ಕ್ರೀಡಾ ಕೇಂದ್ರ ಆರಂಭಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್ ಅವರು ಮನವಿ ಮಾಡಿದ ಪರಿಣಾಮ ನೂತನ ಕೇಂದ್ರಕ್ಕೆ ಅನುಮೋದನೆ ದೊರಕಿದೆ.
Related Articles
Advertisement
ಮಂಗಳೂರಿಗೆ ಕೇಂದ್ರ ಸರಕಾರದ ಮಹತ್ವದ ಕೊಡುಗೆ
ಕ್ರೀಡಾಪಟುಗಳ ದೈಹಿಕ ಸದೃಢತೆಗೆ ಪೂರಕವಾಗುವ ನೆಲೆಯಲ್ಲಿ ದೇಶದ ಎರಡನೇ ಆಯುಷ್ ಕ್ರೀಡಾ ಕೇಂದ್ರ ಮಂಗಳೂರಿನಲ್ಲಿ ಸ್ಥಾಪನೆಯಾಗಲಿದೆ. ಕೇಂದ್ರ ಸರಕಾರದಿಂದ ಕ್ರೀಡೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅವಲಂಬಿಸಿಕೊಂಡು ಮಂಗಳೂರಿಗೆ ಮಹತ್ವದ ಯೋಜನೆ ಸಾಕಾರವಾಗಲಿದೆ. ಮುಂದಿನ ತಿಂಗಳಿನಿಂದ ಈ ಯೋಜನೆ ಕಾರ್ಯಾರಂಭದ ಬಗ್ಗೆ ಸಿದ್ಧತೆ ನಡೆಸಲಾಗುತ್ತದೆ. -ಡಿ. ವೇದವ್ಯಾಸ ಕಾಮತ್, ಶಾಸಕರು