Advertisement

ಜಮ್ಮು ಕಾಶ್ಮೀರದ ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ 2ಜಿ ಇಂಟರ್ನೆಟ್

09:50 AM Jan 26, 2020 | keerthan |

ಶ್ರೀನಗರ: ಸುಮಾರು ಐದು ತಿಂಗಳ ನಂತರ ಜಮ್ಮು ಕಾಶ್ಮೀರದ ಎಲ್ಲಾ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಮರುಸ್ಥಾಪಿಸಲಾಗಿದೆ. ಶನಿವಾರದಿಂದ ಪೋಸ್ಟ್ ಪೈಡ್ ಮತ್ತು ಪ್ರಿಪೈಡ್ ಮೊಬೈಲ್ 2ಜಿ ಇಂಟರ್ನೆಟ್ ಸೇವೆಗಳು ಆರಂಭವಾಗಲಿದೆ.

Advertisement

ಆದರೆ ಸರಕಾರದಿಂದ ಪರಿಷ್ಕರಣೆಗೆ ಒಳಗಾದ ಕೆಲವೊಂದು ವೆಬ್ ಸೈಟ್ ಗಳ ಸೇವೆ ಮಾತ್ರ ಲಭ್ಯವಾಗಲಿದೆ. ವೆಬ್ ತಾಣಗಳ ಬಳಕೆಗೆ ಅನುಮತಿಸಲಾಗಿರುವ ಜಾಲತಾಣಗಳನ್ನು ಮಾತ್ರ ಬಳಕೆಗೆ ಅನುಮತಿ ನೀಡಲಾಗಿದೆ.

ಸಾಮಾಜಿಕ ಜಾಲತಾಣಗಳಿಗೆ ಯಾವುದೇ ನಿರ್ಭಂಧವಿಲ್ಲದೆ ಮುಂದುವರಿಯಲಿದೆ ಎನ್ನಲಾಗಿದೆ.

ಇದೊಂದು ದೊಡ್ಡ ಸಮಾಧಾನ. ಸಂಪರ್ಕ ಸಾಧನಗಳ ಈ ಕಾಲದಲ್ಲಿ ಕಾಶ್ಮೀರಿಗಳು ಆ ಜಗತ್ತಿನಿಂದ ದೂರವಾಗಿದ್ದೆವು. ಮುಂದೆ ಎಲ್ಲಾ ರೀತಿಯಿಂದಲೂ ಇದು ಸುಧಾರಣೆಯಾಗಲಿದೆ ಎಂದು ಭಾವಿಸಿದ್ದೇನೆ ಎಂದು ಸ್ಥಳೀಯರೊಬ್ಬರ ಹೇಳಿಕೆಯನ್ನು ಇಂಡಿಯಾ ಟುಡೆ ಆಂಗ್ಲ ಜಾಲತಾಣ ವರದಿ ಮಾಡಿದೆ.

ಈ ಹಿಂದೆ 2ಜಿ ನೆಟ್ ವರ್ಕ್ ಅನ್ನು ಜಮ್ಮುವಿನಲ್ಲಿ ಮತ್ತು ಕಾಶ್ಮೀರದ ಜಿಲ್ಲೆಗಳಾದ ಕುಪ್ವಾರ ಮತ್ತು ಬಂಡಿಪೊರಾದಲ್ಲಿ ಮರುಸ್ಥಾಪಿಸಲಾಗಿತ್ತು.

Advertisement

ಕಳೆದ ವರ್ಷದ ಆಗಸ್ಟ್ 5ರಂದು ವಿಶೇಷಾಧಿಕಾರವನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಭದ್ರತಾ ದೃಷ್ಟಿಯಿಂದ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು

Advertisement

Udayavani is now on Telegram. Click here to join our channel and stay updated with the latest news.

Next