ಬೈಲಹೊಂಗಲ: ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಕೊಡಿಸುವುದು ಮುಖ್ಯ ಉದ್ದೇಶವಾಗಿದ್ದು, ಪೀಠಗಳನ್ನು ಮಾಡಿ ಮುಖ್ಯಮಂತ್ರಿಗಳ ಬಳಿ ಅನುದಾನ ತರುವುದಕ್ಕಲ್ಲ ಎಂದು ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಕಿತ್ತೂರು ಚನ್ನಮ್ಮ ಸ್ಮರಣೋತ್ಸವ ನಿಮಿತ್ತ ಪಟ್ಟಣದಲ್ಲಿ ಪಂಚಮಸಾಲಿ ಸಮಾಜ ಭಾಂದವರು ಹಾಗೂ ಚನ್ನಮ್ಮಾಜಿ ಅಭಿಮಾನಿಗಳು ಹಮ್ಮಿಕೊಂಡಿದ್ದ ವೀರಜ್ಯೋತಿ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೂಡಲಸಂಗಮ ಸ್ವಾಮಿಜಿ ನೇತೃತ್ವದ ಪಾದಯಾತ್ರೆಯ ಉದ್ದೇಶ ಸಮುದಾಯಕ್ಕೆ 2ಎ ಕೊಡಿಸುವುದು ಮುಖ್ಯ ಉದ್ದೇಶವಾಗಿದೆ. ಶ್ರೀಗಳೊಂದಿಗೆ ನಾವೆಲ್ಲ ಅವರಿಗೆ ಸಹಕಾರ ನೀಡುತ್ತಿದ್ದೇವೆ. ಹೊರತು ನಾವೇನು ಪ್ರಮುಖರು, ಅದರ ಪದಾಧಿಕಾರಿಗಳಲ್ಲ. ಕೆಲಸ ಇಲ್ಲದವರೂ ದಿನಾಲೂ ಒಂದು ಪೀಠ ಮಾಡಿಕೊಂಡು ಹೋಗುತ್ತಾರೆ. ಬಡ ಮಕ್ಕಳಿಗಾಗಿ 2ಎ ಮೀಸಲಾತಿ ಜಾರಿಯಾಗಬೇಕು.
ಮೀಸಲಾತಿ ಹೋರಾಟವನ್ನು ಹತ್ತಿಕ್ಕುವ ಸಂಚು ನಡೆಯುತ್ತಿದೆ. ನಮ್ಮ ಹೋರಾಟ 2ಎ ಮೀಸಲಾತಿ ಕೊಡಿಸುವುದು ಮಾತ್ರ. ಎಲ್ಲ ಸಮುದಾಯಗಳಿಗೆ ಅನುಕೂಲವಾಗುವ ಹೋರಾಟವಾಗಿದೆ. ನಮ್ಮ ಹೋರಾಟ ಮಿಸಲಾತಿ ಸಿಗುವರೆಗೂ ಮಾತ್ರ ಇರುತ್ತದೆ ಎಂದು ತಿಳಿಸಿದರು.
ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಜ.26ರಂದು ನಂದಗಡದಿಂದ ಬೈಲಹೊಂಗಲಕ್ಕೆ ಜ್ಯೋತಿ ಯಾತ್ರೆಯನ್ನು ತರುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಚನ್ನಮ್ಮನ ಆತ್ಮಜ್ಯೋತಿಯನ್ನು ಪ್ರತಿವರ್ಷ ತಂದಾಗ ಮಾತ್ರ ತಾಯಿ ಚನ್ನಮ್ಮ ಹಾಗೂ ಆಕೆಯ ಮಗನಾದ ರಾಯಣ್ಣನನ್ನು ನೆನಪಿಸಿದಂತಾಗುತ್ತದೆ. ಕೊರೊನಾ ಸಂದರ್ಭದಲ್ಲಿ ಎಲ್ಲ ಕಾರ್ಯಕ್ರಮಗಳು ಸಂಕ್ಷಿಪ್ತವಾಗಿ ನಡೆದವು. ಕೊರೊನಾ ನಿಯಮಗಳಲ್ಲಿ ಈ ಬಾರಿ
ಸರಕಾರ ಸಡಿಲಿಕೆ ಮಾಡಿಕೊಂಡಿರುವುದರಿಂದ ಕಾರ್ಯಕ್ರಮಗಳು ಉತ್ಸಾಹದಿಂದ ನಡೆಯುಂತಾಗಿದೆ ಎಂದರು.
ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ, ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡ್ಡಗೌಡರ, ಅರವಿಂದ ಬೆಲ್ಲದ, ಕಾಡಾ ಅಧ್ಯಕ್ಷ ಡಾ|ವಿಶ್ವನಾಥ ಪಾಟೀಲ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನ್ನವರ, ಶ್ರೀಶೈಲ ಬೊಳನ್ನವರ, ಶಂಕರ ಮಾಡಲಗಿ, ಶಿವರಂಜನ್ ಬೊಳನ್ನವರ, ರೋಹಿಣಿ ಪಾಟೀಲ, ಮಹಾಂತೇಶ ತುರಮರಿ, ಮುರಗೇಶ ಗುಂಡೂÉರ, ಉಮೇಶ ಬಾಳಿ, ಎಫ್.ಎಸ್. ಸಿದ್ದನಗೌಡರ, ಪಂಚನಗೌಡ ದೇಮನಗೌಡರ, ಮಹೇಶ ಹರಕುಣಿ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮನ್ನವರ, ಪುರಸಭೆ ಮುಖ್ಯಾಧಿಕಾರಿ ಕವಿರಾಜ ನಾಗನೂರ, ರಾಜಶೇಖರ ಮೂಗಿ, ಮಹೇಶ ಕೋಟಗಿ, ನಾಗಪ್ಪ ಗುಂಡ್ಲೂರ,
ಪಂಚಮಸಾಲಿ ಸಮಾಜ ಬಾಂಧವರು ಇದ್ದರು.