Advertisement

2ಎ ಮೀಸಲಾತಿ ನೀಡಲು ಆಗ್ರಹಿಸಿ ನಿರಶನ

04:20 PM May 06, 2022 | Team Udayavani |

ಹುಣಸಗಿ: 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಪಟ್ಟಣದ ತಹಶೀಲ್ದಾರ್‌ ಕಚೇರಿ ಎದುರು ಗುರುವಾರ ರಾಜ್ಯ ವೀರಶೈವ ಪಂಚಮಸಾಲಿ ಸಂಘದ ವತಿಯಿಂದ ಪ್ರತಿಭಟಿಸಲಾಯಿತು.

Advertisement

ಮುಖಂಡರಾದ ಹೊನ್ನಕೇಶವ ದೇಸಾಯಿ ಮಾತನಾಡಿ, ಕಳೆದ ಫೆಬ್ರುವರಿ ತಿಂಗಳಿನಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಏಪ್ರಿಲ್‌ 14ರೊಳಗಾಗಿ 2ಎ ಮೀಸಲಾತಿ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದ್ದರು ಇನ್ನೂ ಈಡೇರಿಸಿಲ್ಲ. ಸಮಾಜದ ಜಗದ್ಗುರುಗಳು ಕೂಡಲಸಂಗಮದಿಂದ ಬೆಂಗಳೂರಿನವರೆಗೂ ಪಾದಯಾತ್ರೆ ಹಾಗೂ 14 ದಿನಗಳ ಕಾಲ ಸತ್ಯಾಗ್ರಹ ಸೇರಿದಂತೆ ಹಲವಾರು ಹೋರಾಟ ನಡೆಸಿದ್ದರೂ ಸರಕಾರ ನಿರ್ಲಕ್ಷ್ಯ ಮಾಡಿದೆ ಎಂದು ಹರಿಹಾಯ್ದರು.

ಭೀಮನಗೌಡ ಬಿರಾದಾರ ಮಾತನಾಡಿ, 2ಎ ಮೀಸಲಾತಿ ಸೌಲಭ್ಯ ಕಲ್ಪಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದು ಅನಿವಾರ್ಯ. ಮೀಸಲಾತಿಯನ್ನು ಆದಷ್ಟು ಶೀಘ್ರ ಕಲ್ಪಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.

ನಂತರ ತಹಶೀಲ್ದಾರ್‌ ಅಶೋಕ ಸುರಪುರಕರ್‌ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು. ಸಮಾಜದ ಹಿರಿಯ ಮುಖಂಡರಾದ ಬಸವರಾಜ ಮಲಗಲದಿನ್ನಿ, ವೀರೇಶ ಚಿಂಚೋಳಿ, ಮಹಾದೇವಪ್ಪ ಬೂದಿಹಾಳ, ಅಂಬರೀಷ್‌ ದೇಸಾಯಿ, ರಾಜಶೇಖರ ದೇಸಾಯಿ, ಶಾಂತಗೌಡ ಪಾಟೀಲ, ರಾಕೇಶ ಬಳೂರಗಿ, ಸಿದ್ಧನಗೌಡ ಬಿರಾದಾರ, ಬಸನಗೌಡ ತಾಳಿಕೋಟಿ, ಮಲ್ಲಿಕಾರ್ಜುನ ಕವಿತಾಳ, ಗೌಡಪ್ಪಗೌಡ ಬಿರಾದಾರ, ಮಲ್ಲನಗೌಡ ಆರಲಗಡ್ಡಿ, ಸತೀಶ ಬಿರಾದಾರ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next