Advertisement

ವಿವಿಧೆಡೆಯಿಂದ ಹುಬ್ಬಳ್ಳಿಗೆ ಬಂದಿಳಿದ 293 ಜನರು

04:52 AM May 17, 2020 | Suhan S |

ಹುಬ್ಬಳ್ಳಿ: ದೆಹಲಿ-ಬೆಂಗಳೂರು ಶ್ರಮಿಕ ಎಕ್ಸ್‌ಪ್ರೆಸ್‌ ರೈಲಿನ ಮೂಲಕ ಆಗಮಿಸಿದ ರಾಜ್ಯದ ವಿವಿಧ ಮೂರು ಜಿಲ್ಲೆಗಳ 293 ಪ್ರಯಾಣಿಕರು ಶನಿವಾರ ಮಧ್ಯಾಹ್ನ 12 ಗಂಟೆಗೆ ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರು.

Advertisement

ಜಿಲ್ಲಾಧಿಕಾರಿ ದೀಪಾ ಚೋಳನ್‌ ಮಾರ್ಗದರ್ಶನದಂತೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಉಪ ಪೊಲೀಸ್‌ ಆಯುಕ್ತರಾದ ಪಿ. ಕೃಷ್ಣಕಾಂತ, ಆರ್‌.ಬಿ. ಬಸರಗಿ, ತಹಶೀಲ್ದಾರ್‌ ಗಳಾದ ಶಶಿಧರ ಮಾಡ್ಯಾಳ, ಪ್ರಕಾಶನಾಶಿ, ವಾಕರಸಾ ಸಂಸ್ಥೆ ಅಧಿಕಾರಿಗಳಾದ  ಎಚ್‌.ಆರ್‌. ರಾಮನಗೌಡರ, ಅಶೋಕ ಪಾಟೀಲ, ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ತಂಡ, ದೂರದ ಪ್ರಯಾಣದಿಂದ ತವರಿಗೆ ಮರಳಿದ ಜನರನ್ನು ಅವರ ಜಿಲ್ಲೆಗಳಿಗೆ ಕಳುಹಿಸುವ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸಿದರು.

ದೆಹಲಿಯಿಂದ ಆಗಮಿಸಿದ ಶ್ರಮಿಕರೈಲಿನಲ್ಲಿ ಶಿವಮೊಗ್ಗ -67, ಬೆಳಗಾವಿ -51, ಚಿಕ್ಕಮಗಳೂರು -5, ಉತ್ತರ ಕನ್ನಡ -9, ಕೊಪ್ಪಳ -10, ಚಿತ್ರದುರ್ಗ -12, ದಕ್ಷಿಣ ಕನ್ನಡ -42, ವಿಜಯಪುರ -32, ಹಾವೇರಿ -14, ಬಾಗಲಕೋಟೆ -13, ಧಾರವಾಡ -32, ಹಾಸನ -5 ಹಾಗೂ ಗದಗ ಜಿಲ್ಲೆಯ ಒಬ್ಬರು ಸೇರಿ ಒಟ್ಟು 293 ಜನರನ್ನು ಆಯಾ ಜಿಲ್ಲಾಡಳಿತಗಳು ಕಳುಹಿಸಿದ್ದ ಸಾರಿಗೆ ಬಸ್ಸು ಹಾಗೂ ಇತರ ವಾಹನಗಳ ಮೂಲಕ ಕಳುಹಿಸಿಕೊಡಲಾಯಿತು. ರೈಲ್ವೆ ಮೂಲಕ ಆಗಮಿಸಿದ ಪ್ರತಿಯೊಬ್ಬರ ವಿವರ ಪಡೆಯುವ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಯ ನಿಗದಿತಟೇಬಲ್‌ ಬಳಿ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿತ್ತು.

ತಾಯಿಯೊಂದಿಗೆ ಬಂದ ಕಂದಮ್ಮ: ದೆಹಲಿಯಿಂದ ಹುಬ್ಬಳ್ಳಿಗೆ ಶನಿವಾರ ಆಗಮಿಸಿದ ಶ್ರಮಿಕ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪುಟ್ಟ ಕಂದಮ್ಮ ಕೂಡ ತಾಯಿಯೊಂದಿಗೆ ಬಂದಿತ್ತು. ಈಗ ಈ ಮಗುವೂ 14 ದಿನ ಕ್ವಾರಂಟೈನ್‌ದಲ್ಲಿ ಇರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next