Advertisement

ಲಾಕ್ ಡೌನ್: ಸುಮ್ಮನೆ ಅಡ್ಡಾಡಲು ಬಂದು ಐಎಎಸ್ ಅಧಿಕಾರಿ ಎಂದು ಹೇಳಿ ಜೈಲು ಪಾಲಾದ ಯುವಕ!

09:05 AM Apr 14, 2020 | Nagendra Trasi |

ನವದೆಹಲಿ: ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿಯ ಈಶಾನ್ಯ ಪ್ರದೇಶದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಐಎಎಸ್ ಅಧಿಕಾರಿಯಂತೆ ಸೋಗು ಹಾಕಿ ಸಿಕ್ಕಿಬಿದ್ದಿರುವ ಘಟನೆ ಸೋಮವಾರ ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ಪೊಲೀಸ್ ಮೂಲಗಳ ಪ್ರಕಾರ, ಲಾಕ್ ಡೌನ್ ಆದೇಶ ಉಲ್ಲಂಘಿಸಿ ಹೊರ ಬಂದಿರುವ ಬಗ್ಗೆ ಪೊಲೀಸ್ ತಂಡ ವ್ಯಕ್ತಿಯನ್ನು ಪ್ರಶ್ನಿಸಿದ್ದರು. ಈ ವೇಳೆ ಪೊಲೀಸರ ಜತೆ ವಾಗ್ವಾದಕ್ಕೆ ಇಳಿದು, ಗೃಹ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿ ಎಂದು ಹೇಳಿ ಸ್ಟಿಕ್ಕರ್ ತೋರಿಸಿದ್ದ. ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ “ಗವರ್ನಮೆಂಟ್ ಆಫ್ ಇಂಡಿಯಾ” ಎಂಬುದಾಗಿ ನಮೂದಿಸಲಾಗಿತ್ತು ಎಂದು ವರದಿ ವಿವರಿಸಿದೆ.

ವಾಗ್ವಾದದ ವೇಳೆ ಪೊಲೀಸರ ತಂಡ ದಾಖಲೆಯನ್ನು ತೋರಿಸುವಂತೆ ಹೇಳಿದ್ದರು. ಆಗ ವ್ಯಕ್ತಿ ಫೈಲ್ ಅನ್ನು ಹೊರತೆಗೆದು ತಾನು 2009ರ ಐಎಎಸ್ ಅಧಿಕಾರಿ ಎಂದು ಹೇಳಿದ್ದ. ಬಳಿಕ ಕೇಶ್ ಪುರಂ ಠಾಣಾಧಿಕಾರಿ ತೀವ್ರ ವಿಚಾರಣೆಗೊಳಪಡಿಸಿದಾಗ ಈತನ ಅಸಲಿ ಬಣ್ಣ ಬಯಲಾಗಿತ್ತು ಎಂದು ವರದಿ ತಿಳಿಸಿದೆ.

ಲಾಕ್ ಡೌನ್ ಉಲ್ಲಂಘಿಸಿದ್ದಲ್ಲದೇ ಐಎಎಸ್ ಅಧಿಕಾರಿ ಎಂದು ಸುಳ್ಳು ಹೇಳಿದ್ದ ವ್ಯಕ್ತಿಯನ್ನು ಬಂಧಿಸಿ, ಕಾರನ್ನು ವಶಕ್ಕೆ ಪಡೆದು ದೂರನ್ನು ದಾಖಲಿಸಿಕೊಂಡಿರುವು ದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು 29ವರ್ಷದ ಆದಿತ್ಯ ಗುಪ್ತಾ ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next