Advertisement

Rice: ಕೆ.ಜಿ.ಗೆ 29 ರೂ. ಬೆಲೆ, ನಾಫೆಡ್‌, ಎನ್‌ಸಿಸಿಎಫ್, ಇ-ಕಾಮರ್ಸ್‌

12:55 AM Feb 03, 2024 | Team Udayavani |

ಹೊಸದಿಲ್ಲಿ: ಜನಸಾಮಾನ್ಯರಿಗೆ ಅನುಕೂಲ ಒದಗಿಸಲು ಅಂಗಡಿಗಳಲ್ಲಿ ಕೆ.ಜಿ.ಗೆ 29 ರೂ.ನಂತೆ ಮುಂದಿನ ವಾರದಿಂದ “ಭಾರತ್‌ ಅಕ್ಕಿ’ ಮಾರಾಟ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ.

Advertisement

ಈ ಸಂಬಂಧ ಅಕ್ಕಿ ದಾಸ್ತಾನು ಬಹಿರಂಗಪಡಿಸು ವಂತೆ ಅಕ್ಕಿ ವ್ಯಾಪಾರಿಗಳು, ಸಂಸ್ಕರಣೆ ಮಾಡುವವರಿಗೆ ಸರಕಾರ ಆದೇಶಿಸಿದೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್‌ ಚೋಪ್ರಾ, ವಿವಿಧ ರಫ್ತು ನಿರ್ಬಂಧಗಳ ಹೊರತಾಗಿಯೂ, ಒಂದು ವರ್ಷದಲ್ಲಿ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ಅಕ್ಕಿ ಬೆಲೆಯನ್ನು ಶೇ.15ರಷ್ಟು ಏರಿಸಿದ್ದಾರೆ. ಹೀಗಾಗಿ ಅಕ್ಕಿ ಬೆಲೆ ನಿಯಂತ್ರಣಕ್ಕೆ ಸಬ್ಸಿಡಿ ಸಹಿತ “ಭಾರತ್‌ ಅಕ್ಕಿ’ಯನ್ನು ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 29 ರೂ.ನಂತೆ ನೀಡಲು ಸರಕಾರ ಮುಂದಾಗಿದೆ ಎಂದರು.
ನಾಫೆಡ್‌ (ನ್ಯಾಷನಲ್‌ ಅಗ್ರಿಕಲ್ಚರಲ್‌ ಕೋ ಆಪ

ರೇಟಿವ್‌ ಮಾರ್ಕೆಟಿಂಗ್‌ ಫೆಡರೇಶನ್‌ ಆಫ್ ಇಂಡಿಯಾ ಲಿ.), ಎನ್‌ಸಿಸಿಎಫ್ (ನ್ಯಾಷನಲ್‌ ಕೋಆಪರೇಟಿವ್‌ ಕನ್ಸೂಮರ್ ಫೆಡರೇಶನ್‌ ಆಫ್ ಇಂಡಿಯಾ ಲಿ.), ಚಿಲ್ಲರೆ ಮಳಿಗೆಗಳಾದ ಕೇಂದ್ರೀಯ ಭಂಡಾರಗಳಲ್ಲಿ “ಭಾರತ್‌ ಅಕಿ’R ಲಭ್ಯವಾಗಲಿದೆ. ವಿಶೇಷವೆಂದರೆ ಇ-ಕಾಮರ್ಸ್‌ ತಾಣಗಳಿಂದಲೂ ಈ ಅಕ್ಕಿಯನ್ನು ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next